ಕೊಡಗು

'ಕನ್ನಡಪ್ರಭ'ದ ಅನಿಲ್‌ಗೆ ಪ್ರಶಸ್ತಿ

Published On :

ಮಡಿಕೇರಿ: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ 2012ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, 'ಕನ್ನಡಪ್ರಭ'ದಲ್ಲಿ ಪ್ರಕಟಿತ ವರದಿಗಳಿಗಾಗಿ ಜಿಲ್ಲಾ ವರದಿಗಾರ ಅನಿಲ್ ಎಚ್.ಟಿ. ಅವರಿಗೆ ಮೂರು ಪ್ರಶಸ್ತಿಗಳು ಲಭಿಸಿವೆ. ನಗರದಲ್ಲಿ ಸಂಘದ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಪುಗಾರರ ಆಯ್ಕೆ ಪ್ರಕಟಿಸಲಾಯಿತು. ಮಾರ್ಚ್ ಅಂತ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಗೆ 'ಕಲಿಗಳ ನಾಡಲ್ಲಿ ಕಟುಮಸ್ತಿನ ದೇಹ ಪ್ರದರ್ಶನ', ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿಗೆ 'ಜಗತ್ತಿಗೇ ಮಾದರಿ ಈ ಕರಿಮೆಣಸಿನ ಕಾಶಿ', ಅತ್ಯುತ್ತಮ ರಾಜಕೀಯ ವರದಿ ಪ್ರಶಸ್ತಿಗೆ 'ಸಾಹಿತ್ಯ ಪರಿಷತ್ ಚುನಾವಣೆ- ರಾಜಕೀಯ ರಂಗು' ವರದಿಗಳು ಆಯ್ಕೆಯಾಗಿವೆ.
ನಾಗರಹೊಳೆ:  ಹುಲಿ ಸಾವು
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಗಂಡು ಹುಲಿ ಕಾದಾಟದಲ್ಲಿ ಮೃತಪಟ್ಟಿದೆ.  ವೀರನಹೊಸಳ್ಳಿ ವಲಯದ ಸಿಪಿಟಿ 10ರಲ್ಲಿ ಮರಳು ಹೆಬ್ಬಾಳದ ಬಳಿ 5 ದಿನಗಳ ಹಿಂದೆ ಮೃತಪಟ್ಟಿರುವ 12 ರಿಂದ 13 ವರ್ಷದ ಗಂಡು ಹುಲಿಯ ಶವ ಪತ್ತೆಯಾಗಿದ್ದು, ಹುಲಿಯ ಕತ್ತಿನಲ್ಲಿ ಕಾದಾಟದಿಂದ ಗಾಯವಾಗಿರುವ ಗುರುತು ಪತ್ತೆಯಾಗಿದೆ. ಸ್ಥಳಕ್ಕೆ ಎಸಿಸಿಎಫ್ ಬಿ.ಜೆ. ಹೊಸಮಠ್, ಎಸಿಎಫ್ ಬೆಳ್ಳಿಯಪ್ಪ ಭೇಟಿ ನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.