ಕೊಡಗು

ಅಶೀಸರ ಸಭೆಗೆ ಬಿಜೆಪಿ ಕಾರ್ಯಕರ್ತರ ಅಡ್ಡಿ

Published On :

ಮಡಿಕೇರಿ: ಪ್ರೌಢಶಾಲೆಗಳಲ್ಲಿ ಜೀವ ವೈವಿಧ್ಯ ದಾಖಲಾತಿ ಹಾಗೂ ಹಸಿರು ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಕುರಿತು ನಗರದ ಕೋಟೆ ಹಳೆ ವಿಧಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಬಿಜೆಪಿ ಪ್ರಮುಖರು ಏಕಾಏಕಿ ಧಾವಿಸಿ ಸಭೆಗೆ ಅಡ್ಡಿಪಡಿಸಿದ್ದಲ್ಲದೇ, ಅಶೀಸರ ಅವರನ್ನು ಮಡಿಕೇರಿಯಿಂದಲೇ ಹೊರಹೋಗುವಂತೆ ಒತ್ತಾಯಿಸಿದ ಪ್ರಕರಣ ನಡೆಯಿತು.
ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಡಿಕೇರಿಯಲ್ಲಿ ಸಭೆ ನಡೆಸುತ್ತಿದ್ದ ಸಂದರ್ಭ ಈ ಘಟನೆ ನಡೆಯಿತು. ಸಭೆಯನ್ನು ಅರ್ಧದಲ್ಲಿಯೇ ಮುಕ್ತಾಯಗೊಳಿಸಿದ ಅಶೀಸರಸಭೆಯಿಂದ ಹೊರ ನಡೆದು ಮಡಿಕೇರಿಯಿಂದ ತೆರಳಿದರು.
ಪಶ್ಚಿಮಘಟ್ಟ ಶ್ರೇಣಿಯನ್ನು ವಿಶ್ವ ಪಾರಂಪರಿಕ ತಾಣವಾಗಿಸುವ ಯುನೆಸ್ಕೋ ನಿರ್ಧಾರದ ಹಿಂದೆ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರಕೈವಾಡವಿದೆ ಎಂಬ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಬಿಜೆಪಿ ಪ್ರಮುಖರು ಅಶೀಸರವಿರುದ್ಧ ಈ ಹಿಂದಿನಿಂದಲೂ ಆಕ್ರೋಶಗೊಂಡಿದ್ದರು.
ಮಡಿಕೇರಿಯ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬುಧವಾರ ಅಶೀಸರಅರಣ್ಯಾಧಿಕಾರಿಗಳ ಸಭೆ ನಡೆಸತೊಡಗಿದ್ದರು. ಈ ಸಭೆಯನ್ನೂ ಪೂರ್ವನಿಯೋಜಿತವಾಗಿ ನಡೆಸದೇ ಕೊನೆ ಗಳಿಗೆಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಶೀಸರನಡೆಸಲು ಮುಂದಾಗಿದ್ದರು. ಅಶೀಸರಮಡಿಕೇರಿಗೆ ಬಂದು ಸಭೆ ನಡೆಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ಬಿಜೆಪಿ ಪ್ರಮುಖರು ಏಕಾಏಕಿ ಸಭೆಗೆ ನುಗ್ಗಿ ಸಭೆ ನಡೆಸದೇ ಸ್ಥಳದಿಂದ ತೆರಳುವಂತೆ ಅಶೀಸರಅವರನ್ನು ಒತ್ತಾಯಿಸಿದರು.  ಅಶೀಸರಅವರ ವಿರುದ್ಧ ಬಿಜೆಪಿ ಪ್ರಮುಖರು ಆಕ್ರೋಶಭರಿತರಾಗಿ ಘೋಷಣೆ ಕೂಗಿದ್ದಲ್ಲದೇ ಕೊಡಗು ಬಿಟ್ಟು ತೊಲಗಿ, ಕೊಡಗಿಗೆ ಕಾಲಿರಿಸದಿರಿ ಎಂದೂ ಘೋಷಣೆ ಕೂಗಿದರು. ಇದರಿಂದ ವಿಚಲಿತರಾದ ಅನಂತ ಹೆಗಡೆ ಅಶೀಸರಸಭೆಯನ್ನು ಅರ್ಧದಲ್ಲಿಯೇ ಬರ್ಕಾಸ್ತುಗೊಳಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರಾದ ಕೆ.ಎಸ್. ರಮೇಶ್, ಅರುಣ್ ಶೆಟ್ಟಿ, ತಳೂರು ಕಿಶೋರ್ ಕುಮಾರ್, ಬಿ.ಕೆ. ಅರುಣ್ ಕುಮಾರ್, ಡೀನ್ ಬೋಪಣ್ಣ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.