ಕೊಡಗು

ಸರ್ಕಾರಿ ಬಸ್‌ನಲ್ಲಿ ಪೆಟ್ರೋಲ್ ಬಾಂಬ್ ಪತ್ತೆ!

Published On :

ಸೋಮವಾರಪೇಟೆ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸರ್ಕಾರಿ ಬಸ್‌ನ ಸೀಟ್ ಅಡಿಯಲ್ಲಿ ಸಜೀವ ಪೆಟ್ರೋಲ್ ಬಾಂಬ್ ಬುಧವಾರ ಸಂಜೆ ಪತ್ತೆಯಾಗಿದೆ. ಮಡಿಕೇರಿ ಘಟಕಕ್ಕೆ ಸೇರಿದ (ಹರಿಹರ-ಶಿವಮೊಗ್ಗ-ಸೋಮವಾರಪೇಟೆ-ಮಡಿಕೇರಿಗೆ ತೆರಳುವ ಹಾಗೂ ಟಪಾಲು ಹೊತ್ತು ತರುವ) ಸರ್ಕಾರಿ ಬಸ್ ಬುಧವಾರ ಸಂಜೆ ಮಡಿಕೇರಿಯತ್ತ ತೆರಳಲು ಸೋಮವಾರಪೇಟೆಯ ಬಸ್ ನಿಲ್ದಾಣಕ್ಕೆ ಆಗಮಿಸಿದೆ. ಬಸ್‌ಗೆ ಈ ಹಿಂದಿನ ಬಸ್ ನಿಲ್ದಾಣದಲ್ಲಿ ಅಥವಾ ಬಸ್ ಆಗಮಿಸುವ ಮಾರ್ಗ ಮಧ್ಯೆ ಹತ್ತಿರುವ ದುಷ್ಕರ್ಮಿಗಳು ಈ ಪೆಟ್ರೋಲ್ ಬಾಂಬ್ ಇರಿಸಿರಬಹುದು ಅಥವಾ ಸೋಮವಾರಪೇಟೆ ಬಸ್ ನಿಲ್ದಾಣದಲ್ಲಿಯೇ ಹತ್ತಿ ಈ ಬಾಕ್ಸ್ ಇರಿಸಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸೋಮವಾರಪೇಟೆಯ ಸರ್ಕಾರಿ ಬಸ್ ನಿಲ್ದಾಣಕ್ಕೆ ಸಂಜೆ 4 ಗಂಟೆಗೆ ಆಗಮಿಸಿದ ಬಸ್‌ನಲ್ಲಿ ಸುಮಾರು 15 ಮಂದಿ ಇದ್ದರು. ಬಸ್‌ನಲ್ಲಿದ್ದ ಬಾಕ್ಸ್‌ನ ಒಳಗಿನಿಂದ ಕಲ್ಲು ಬಂಡೆಗಳನ್ನು ಸ್ಫೋಟಿಸಲು ಬಳಸುವ ಬತ್ತಿ ಜೋಡಿಸಿ ಬೆಂಕಿ ಹಚ್ಚಲಾಗಿದ್ದು, ಈ ಸಂದರ್ಭದಲ್ಲಿ ಐಗೂರು ಗ್ರಾಮಕ್ಕೆ ತೆರಳಲು ಬಸ್ ಹತ್ತಿದ ಯುವಕನಿಗೆ ಅಗರಬತ್ತಿ ಪರಿಮಳ ಬಂದಿದೆ. ನಂತರ ನಿರ್ವಾಹಕನಿಗೆ ತಿಳಿಸಿದ ಮೇಲೆ ಪರಿಶೀಲನೆ ನಡೆಸಿದಾಗ ಬತ್ತಿಯಲ್ಲಿ ಬೆಂಕಿಯಿದ್ದುದು ಕಂಡುಬಂದಿದೆ. ತಕ್ಷಣ ಬೆಂಕಿ ನಂದಿಸಿ ಬಾಕ್ಸ್‌ನ್ನು ಬಸ್‌ನಿಂದ ಹೊರತೆಗೆಯಲಾಗಿದೆ.
ಸ್ಫೋಟಿಸುವ ಉದ್ದೇಶ: ಮೊದಲು ಅಗರಬತ್ತಿಯ ಬುಡಕ್ಕೆ ಸ್ಫೋಟಕದ ಬತ್ತಿಯನ್ನು ಕಟ್ಟಿ ಅಗರಬತ್ತಿಗೆ ಬೆಂಕಿ ಹಚ್ಚಿದ್ದಾರೆ. ಬತ್ತಿ ಉರಿಯುತ್ತಾ ಸ್ಫೋಟಕ ಬತ್ತಿಯ ಬಳಿಗೆ ಬಂದಾಗ ಅದು ಉರಿದು ಪೆಟ್ರೋಲ್ ಬಾಂಬ್ ಸ್ಫೋಟಗೊಳ್ಳುವಂತೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.