ಕೋಲಾರ

ಕಾನೂನು ಅರಿವು ಎಲ್ಲರಿಗೂ ಅವಶ್ಯ: ನ್ಯಾ.ಚಿಂತಾ

Published On :

ಮುಳಬಾಗಲು:  ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸುವುದು ಮುಖ್ಯ ಎಂದು ಮುಳಬಾಗಲು ಜೆಎಂಎಫ್‌ಸಿ ಸಿವಿಲ್ ನ್ಯಾಯಾಧೀಶರಾದ ಕೆ.ಜಿ.ಚಿಂತಾ ಹೇಳಿದರು.
ಪಟ್ಟಣದ ಎಸ್‌ಡಿಸಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಉಚಿತ ಕಾನೂನು ನೆರವು ಕಾರ್ಯಕ್ರಮ ಉದ್ಪಾಟಿಸಿ ಮಾತನಾಡಿದ ಅವರು, ಇದಕ್ಕೂ ಮುಂಚೆ ಕೋರ್ಟ್ ಆವರಣದಲ್ಲಿ ಕಾನೂನು ಸಾಕ್ಷರತಾ ಯಾತ್ರೆಗೆ ಚಾಲನೆ ನೀಡಿದರು.
ಕಾನೂನು ಅರಿವು ಎಂದರೆ, ಅದರಲ್ಲಿ ಪಾಂಡಿತ್ಯ ಪಡೆಯಬೇಕು ಎಂಬುದಲ್ಲ. ಸಾಮಾನ್ಯ ಕಾನೂನು ಅರಿವು ಇದ್ದರೇ ಸಾಕು. ಇಂದು ಕಾಲೇಜುಗಳಲ್ಲಿ ರ್ಯಾಗಿಂಗ್ ಎಂಬ ಸಾಮಾಜಿಕ ಪೀಡೆಗೆ ಎಲ್ಲರೂ ಬಲಿಯಾಗುತ್ತಿದ್ದಾರೆ.
 ಇದನ್ನು ತಡೆಯಲು ಕಾನೂನುಗಳನ್ನು ಮಾಡಲಾಗಿದೆ. ಇಂತಹ ವಿದ್ಯಾರ್ಥಿ ಸಮುದಾಯಕ್ಕೆ ಅಗತ್ಯವಾದ ಹಲವಾರು ಕಾನೂನು ಬಗ್ಗೆ ಅರಿವು ಮೂಡಿಸಿಕೊಳ್ಳಲು ಕರೆ ನೀಡಿದ ಅವರು ಉಚಿತ ಕಾನೂನಿನ ನೆರವಿನ ಮಹತ್ವವನ್ನು ತಿಳಿಸಿದರು.
ಸಿವಿಲ್ ನ್ಯಾಯಾಧೀಶ ಎನ್.ರಾಜು ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಡಿ.ವಿ.ರಾಮಮೂರ್ತಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ರಾಜಣ್ಣ, ಕ್ಷೇತ್ರಶಿಕ್ಷಣಾಧಿಕಾರಿ ದೇವರಾಜ್, ಡಾ.ಅನನ್ಯ ಮಾತನಾಡಿದರು.
ಕಾಲೇಜು ಪ್ರಾಂಶುಪಾಲ ಮುರಳಿಕೃಷ್ಣ, ವಕೀಲರಾದ ಎಂ.ಎಲ್.ವೆಂಕಟೇಶ್, ಜಯಪ್ಪ, ಕೆ.ಟೆ.ವೆಂಕಟರವಣ,  ಎಂ.ಎಸ್. ಶ್ರೀನಿವಾಸರೆಡ್ಜಿ, ಸಬ್‌ಇನ್‌ಸ್ಪೆಕ್ಟರ್‌ಗಳಾದ ಮೇಲ್ವಿನ್ ಫ್ರಾನ್ಸಿಸ್, ಶ್ರೀಧರ್ ಮುಂತಾದವರು ಭಾಗವಹಿಸದ್ದರು.
ಕಾನೂನು ಸಾಕ್ಷರತಾ ರಥ ತಾಲೂಕಿನ ಅವಣಿ, ಮಲ್ಲನಾಯಕನಹಳ್ಳಿ ಗ್ರಾಮದ ಕಸ್ತೂರಬಾ ವಸತಿ ಶಾಲೆಗೂ ಭೇಟೆ ನೀಡಿ ಅಲ್ಲೂ ಉಚಿತ ಕಾನೂನು ಶಿಬಿರ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.