ಕೋಲಾರ

ಚಿಂತಾಮಣಿಯಲ್ಲಿ ಕ್ಷೀರಭಾಗ್ಯಕ್ಕೆ ಕೃಷ್ಣಾರೆಡ್ಡಿ ಚಾಲನೆ

Published On :

ಚಿಂತಾಮಣಿ: ಸರ್ಕಾರಿ ಬಡ ಶಾಲಾ ಮ್ಕಕಳು ಮಾನಸಿಕವಾಗಿ ದೈಹಿಕವಾಗಿ ಅಭಿವೃದ್ಧಿ ಹೊಂದಲು ಪೌಷ್ಟಿಕ ಆಹಾರವಾದ ಹಾಲು ಬಹಳ ಅಗತ್ಯವಾದುದೆಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹೇಳಿದರು. ಪಟ್ಟಣದ ಖಾಸಗಿ ಬಸ್‌ನಿಲ್ದಾಣದ ಬಳಿ ಇರುವ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ ಸರ್ಕಾರಿ ಅನುಧಾನಿತ ಶಾಲಾ ಮಕ್ಕಳು ಮತ್ತು ಅಂಗನವಾಡಿ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ಉಚಿತ ಹಾಲು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು.  ಮುಖ್ಯ ಅತಿಥಿ ತಾಲೂಕು ದಂಡಾಧಿಕಾರಿಗಳಾದ ಎಂ.ಎನ್. ಮಂಜುನಾಥ್ ಮಾತನಾಡಿ ಸರ್ಕಾರಿ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಶಿಕ್ಷಕರ ಹಾಗೂ ಪೋಷಕರು ಹೆಚ್ಚಿನ ಕಾಳಜಿ ವಹಿಸಿ ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಆಸಕ್ತಿ ತೋರುವುದು ಮುಖ್ಯವೆಂದು ನುಡಿದರು. ಮುಖ್ಯ ಅತಿಥಿ ಟಿ.ಪಿ.ಎಸ್ ಅಧ್ಯಕ್ಷರಾದ ಮೀನಾ ಶ್ರೀರಾಮರೆಡ್ಡಿ, ಕೊಮುಲ್ ನಿರ್ದೇಶಕ ಟಿ.ಎನ್. ರಾಜಗೋಪಾಲ್, ಸಿ.ಡಿ.ಪಿ.ಓ ಅಧಿಕಾರಿ ತಾಜ್ ಉನ್ನೀಸಾ, ಕ್ಷೇತ್ರ ಶಿಕ್ಷಣಾಧಿಕಾರಿ ರಂಗಯ್ಯ ಮಾತನಾಡಿದರು.  ನಗರಸಭಾ ಸದಸ್ಯರಾದ ಮಂಜುನಾಥ್, ಪ್ರಕಾಶ್, ವೆಂಕಟರವಣಪ್ಪ, ಜಿಯಾವುಲ್ಲಾ, ಶ್ರೀರಾಮಪ್ಪ, ಕೃಷ್ಣಪ್ಪ ಹಾಗೂ ಕೆ.ಎಂ.ಎಫ್ ವ್ಯವಸ್ಥಾಪಕ ಪುಣ್ಯಕೋಟಿ, ಡಾ. ಮಾದವ್, ಗುತ್ತಿಗೆದಾರ ಶ್ರೀರಾಮರೆಡ್ಡಿ ಮತ್ತು ಮುಖಂಡರಾದ ರಘುನಾಥರೆಡ್ಡಿ, ದಿನ್ನಮಿಂದಪಲ್ಲಿ ಬೈರಾರೆಡ್ಡಿ, ಗ್ಯಾಸ್ ನರಸಿಂಹಮೂರ್ತಿ, ಪಿ. ವೆಂಕಟರವಣಪ್ಪ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ಪೋಷಕರು ಸಭೆಯಲ್ಲಿ ಭಾಗವಹಿಸಿದ್ದರು.

ಶ್ರೀನಿವಾಸಪುರದಲ್ಲೂ ಯೋಜನೆಗೆ ಚಾಲನೆ
ಶ್ರೀನಿವಾಸಪುರ:  ಸರ್ಕಾರ ಜಾರಿಗೆ ತಂದಿರುವ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಲು ನೀಡುವ 'ಕ್ಷೀರಭಾಗ್ಯ' ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಲ್ಲಿ ಚಾಲನೆಯ ದೊರೆತಿದೆ. ತಾಲೂಕಿನ ಹಿರಿಯ, ಕಿರಿಯ ಪ್ರಾಥಮಿಕ ಪಾಠ ಶಾಲೆ, ಪ್ರೌಢಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಒಟ್ಟು 21750 ಬಡ ವಿದ್ಯಾರ್ಥಿಗಳಿಗೆ ಯೋಜನೆ ಪ್ರಯೋಜನ ಲಭ್ಯವಾಗಲಿದೆ. ವಾರದಲ್ಲಿ 3 ದಿವಸ ಆಂದರೆ ಸೋಮವಾರ, ಬುಧವಾರ, ಶುಕ್ರವಾರ ಮಕ್ಕಳಿಗೆ ಹಾಲು ನೀಡಲಾಗುವುದು. ಬಡ ವಿದ್ಯಾರ್ಥಿಗಳಿಗಾಗಿ ಯೋಜನೆ ಅನುಷ್ಠಾನಗೊಳಿಸಲಾಗಿದೆ.  ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ದುರಪಯೋಗ ನಡೆಯದಂತೆ ಮತ್ತು ಶಿಕ್ಷಕರು ಸರ್ಕಾರದ ನಿಯಮವನ್ನು ಪಾಲಿಸುವಂತೆ ಅಕ್ಷರ ದಾಸೋಹ ಸಹಾಯ ನಿರ್ದೇಶಕ ಕೆ.ಎಂ. ಕೃಷ್ಣಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.