ಐಇಎಸ್ 66ನೇ ರ್ಯಾಂಕ್ ವಿಜೇತ ಸಂಕೇತ್ಗೆ ಪುರಸ್ಕಾರ
ಕ.ಪ್ರ.ವಾರ್ತೆ, ಕೋಲಾರ, ಆ.4
ನಗರದ ಸಿ.ಬೈರೇಗೌಡ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸುಮಾರು 1 ವರ್ಷ 6 ತಿಂಗಳ ಕಾಲ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ಭಾರತ ಲೋಕಸೇವಾ ಆಯೋಗ ನಡೆಸಿದ ಇಂಡಿಯನ್ ಎಂಜಿನಿಯರಿಂಗ್ ಸರ್ವೀಸ್ (ಐಇಎಸ್) ಪರೀಕ್ಷೆಯಲ್ಲಿ ದೇಶದಲ್ಲೇ 66ನೇ ರ್ಯಾಂಕ್ ಗಳಿಸಿ ಪ್ರಸ್ತುತ ರೇಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆರ್.ಸಂಕೇತ್ ಅವರನ್ನು ಸಿಬಿಐಟಿ ವತಿಯಿಂದ ಸನ್ಮಾನಿಸಲಾಯಿತು.
ಕಳೆದ ಜು.29ರಂದು ತಾಲೂಕಿನ ಸಿ.ಬೈರೇಗೌಡ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್ ಹಾಗೂ ಸಿಬಿಐಟಿ ವತಿಯಿಂದ ಹಮ್ಮಿಕೊಂಡಿದ್ದ ಸಿ.ಬೈರೇಗೌಡರ 10ನೇ ಪುಣ್ಯ ತಿಥಿ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಾಯ ನಿರ್ದೇಶಕ ಎನ್.ರಂಗಯ್ಯ, ಜಿಲ್ಲಾ ಗ್ರಂಥಾಲಯದಲ್ಲಿ ಸಹ ಗ್ರಂಥಪಾಲಕಿ ಆರ್.ನಾಗಮಣಿ ಅವರ ಪುತ್ರನಾದ ಆರ್.ಸಂಕೇತ್ ಅವರನ್ನು ಕೃಷಿ ಸಚಿವ ಕೃಷ್ಣಬೈರೇಗೌಡರು ಸನ್ಮಾನಿಸಿದರು.
ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಮಾಜಿ ಶಾಸಕ ಎಂ.ಸಿ.ಸುಧಾಕರ್, ಸಿಬಿಐಟಿಯ ಕಾರ್ಯದರ್ಶಿ ಕೃಷ್ಣಾರೆಡ್ಡಿ ಈ ಸಂದರ್ಭದಲ್ಲಿ ಇದ್ದರು.
ಸಂಕೇತ್ ಕೋಲಾರದ ಸಿ.ಬೈರೇಗೌಡ ನಗರದ ನಿವಾಸಿಯಾಗಿದ್ದು, ಕೋಲಾರದ ಮಹಿಳಾ ಸಮಾಜ ವಿದ್ಯಾ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ಓದಿ ಶೇ.94.5 ಅಂಕ ಹಾಗೂ ಪಿಯುಸಿಯನ್ನು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ, ಶೇ.95 ಅಂಕ ಪಡೆದರು. ಬಳಿಕ ಬಿ.ಇ. ಪದವಿಯನ್ನು ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗಳಿಸಿದರು.
ಕೆಲ ತಿಂಗಳು ಕೋಲಾರದ ಸಿಬಿಐಟಿಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದ ಸಂಕೇತ್ ಲೋಕ ಸೇವಾ ಆಯೋಗದಿಂದ ನಡೆಯುವ ಐಇಎಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದರಿಂದ ಸಿಬಿಐಟಿಯು ಪುರಸ್ಕಾರ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

