ಕೋಲಾರ

ಸಾಲ ಪಾವತಿಸಿದರೆ ಬ್ಯಾಂಕ್ ಅಭಿವೃದ್ಧಿ ಸಾಧ್ಯ: ವೆಂಕಟೇಶ್

Published On :

ಶಿಡ್ಲಘಟ್ಟ:  ಪಟ್ಟಣದ ಗ್ರಾಮೀಣಾಭಿವೃದ್ಧಿ ಬ್ಯಾಂಕಿಗೆ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಗೌಡ ಅನಿರೀಕ್ಷಿತವಾಗಿ ಭೇಟಿ ನೀಡಿ ಬ್ಯಾಂಕಿನ ಅಂಕಿಅಂಶ ಪರಿಶೀಲಿಸಿದರು.ರೈತರಿಗೆ ಮುಖ್ಯವಾಗಿ ಬೇಕಾಗಿರುವುದು ವಿದ್ಯುತ್, ನೀರು ಮತ್ತು ಸಾಲ ಸೌಲಭ್ಯ. ರೈತರು ಸಾಲ ಮನ್ನಾದ ವಿಷಯ ಬಿಟ್ಟು ಸಾಲ ಮರುಪಾವತಿ ಮಾಡಿದ್ದಲ್ಲಿ ಬ್ಯಾಂಕ್ ಉಳಿಯುತ್ತದೆ. ಬೇರೆ ರೈತರಿಗೆ ಸಾಲವೂ ಸಿಗುತ್ತದೆ ಎಂದು ತಿಳಿಸಿದರು. ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಗ್ರಾಮಗಳಿಗೆ ಪ್ರವಾಸ ಹಾಕಿಕೊಂಡು ಜನರ ಮನವೊಲಿಸಿ ಸಾಲ ಮರು ಪಾವತಿಗೆ ಪ್ರಯತ್ನಿಸಬೇಕು. ಹಣ ಠೇವಣಿ ಇಡುವಂತೆ ಮನವೊಲಿಸಬೇಕು. ಕನಿಷ್ಠ ಪಕ್ಷ 50 ಲಕ್ಷವರೆಗಾದರೂ ಠೇವಣಿ ಸಂಗ್ರಹಿಸಬೇಕು. ಠೇವಣಿಯಿಂದ ಬಂದ ಹಣದಿಂದ ಬ್ಯಾಂಕು ರೈತರಿಗೆ ಸಾಲ ಕೊಟ್ಟು ಲಾಭ ಗಳಿಸಬೇಕೆಂದು ಸೂಚನೆ ನೀಡಿದರು. ಪ್ರಸಕ್ತ ವರ್ಷದಲ್ಲಿ ಶಿಡ್ಲಘಟ್ಟದ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಮರುಸಾಲ ಪಾವತಿ ತುಂಬ ಕಡಿಮೆ ಇದ್ದು ಆದಷ್ಟು ಶೇ.80ರಷ್ಟು ಸಾಲ ಮರುಪಾವತಿಯಾಗುವಂತೆ ಮಾಡಬೇಕೆಂದರು. ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಉಪಾಧ್ಯಕ್ಷ ಗೋಪಾಲ್, ನಿರ್ದೇಶಕರಾದ ನಾಗಪ್ಪ, ಬಂಕ್ ಮುನಿಯಪ್ಪ, ಅಶ್ವತ್ಥನಾರಾಯಣ ರೆಡ್ಡಿ, ಜಯದೇವ, ವೆಂಕಟರಮಣಪ್ಪ, ಮುನಿಯಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.