ಕೋಲಾರ

ದೇಶ ಭಕ್ತಿ ಗೀತೆಗಳ ಗಾಯನ ಸ್ಪರ್ಧೆಗೆ 124 ವಿದ್ಯಾರ್ಥಿಗಳು

Published On :

ಗೌರಿಬಿದನೂರು: ಇಂದು ಆಚಾರ್ಯ ಪ್ರಾರ್ಥನಾ ಮಂದಿರದಲ್ಲಿ ಲಯನ್ಸ್ ಹಾಗೂ ಲಯನೆಸ್ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ದೇಶಭಕ್ತಿ ಮತ್ತು ಭಾವಗೀತೆಗಳ ಸ್ಪರ್ಧೆ ನಡೆಯಿತು.
ತಾಲೂಕಿನಾದ್ಯಂತ 62 ಪ್ರೌಢಶಾಲೆಗಳಿಂದ ಶಾಲೆಗೆ ಇಬ್ಬರಂತೆ 124 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಎನ್. ಶ್ರೀಧರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸಂಗೀತ ಪ್ರೌಢಿಮೆಯನ್ನು ಹೊರತೆಗೆಯಲು ಇಂತಹ ಕಾರ್ಯಕ್ರಮಗಳು ಉಪಕಾರಿಯಾಗಲಿದೆ ಎಂದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಭಾನುವಾರ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಧಾನಸಭಾ ಉಪಾದ್ಯಕ್ಷರಿಂದ ಬಹುಮಾನ ವಿತರಣೆ ನಡೆಯಲಿದೆ ಎಂದರು. ದೇಶಭಕ್ತಿ ಗೀತೆಗಳ ಸ್ಪರ್ಧೆಯಲ್ಲಿ ಕಾದಲವೇಣಿ ಪ್ರೌಢಶಾಲೆಯ ಲಾವಣ್ಯ ಪ್ರಥಮ, ಮೇಳ್ಯ ಶಾಲೆಯ ಶ್ರೀಕಾಂತ್ ದ್ವಿತೀಯ, ಮಿಣಕಿನಗುರ್ಕಿ ಶಾಲೆಯ ವಿದ್ಯಾರ್ಥಿ ಶ್ರಾವಣಿ ತೃತೀಯ, ಸಹನಾರೆಡ್ಡಿ, ಸಬೀನಾ,ಕುಶಲ, ಸಮಾಧಾನಕರ ಬಹುಮಾನಗಳನ್ನು ಪಡೆದರು. ಭಾವಗೀತೆಗಳ ಸ್ಫರ್ಧೆಯಲ್ಲಿ ವಿದ್ಯಾನಿಧಿ ಶಾಲೆಯ ಜಿ. ನವ್ಯಶ್ರೀ ಪ್ರಥಮ, ಸೆಂಟ್ ಆ್ಯನ್ಸ್ ಶೆಯ ವಿದ್ಯಾರ್ಥಿನಿ ಭೂಮಿಕ ದ್ವಿತೀಯ, ಆಚಾರ್ಯ ಶಾಲೆಯ ಗಿರೀಶ್ ತೃತೀಯ ಬಹುಮಾನಗಳನ್ನು, ಸ್ಪಂದನ, ಮನೋಜ್, ರಂಜಿತ ಸಮಾಧಾನಕರ ಬಹುಮಾನ ಪಡೆದರು. ಲಯನ್ಸ್ಕ್ಲಬ್ ಕಾರ್ಯದರ್ಶಿ ಲಕ್ಷ್ಮಣ ಗೌಡ, ಖಜಾಂಚಿ ಡಾ. ಸುಧೀರ್, ಲಯನ್ಸ್ ಜಿಲ್ಲೆಯ ವಿಭಾಗೀಯ ಅಧ್ಯಕ್ಷ ವಿ. ರವೀಂದ್ರನಾಥ್, ಮಾಜಿ ಅಧ್ಯಕ್ಷ ಪ್ರೊ.ಕೆ. ರಾಮಾಂಜಿನೇಯುಲು ಪಾಲ್ಗೊಂಡಿದ್ದರು.


ಬಿಲ್ಲಾಂಡ್ಲಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯಕ್ಕೆ ಚಾಲನೆ
ಚಿಂತಾಮಣಿ: ಬಿಲ್ಲಾಂಡ್ಲಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಗ್ರಾಮದ ಹಿರಿಯ ಮುಖಂಡ ಬಿ.ಎಸ್.ಕೃಷ್ಣಾರೆಡ್ಡಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಚಾಲನೆ ನೀಡಿದರು.  ಮುಖ್ಯ ಶಿಕ್ಷಕರಾದ ರಾಮಿರೆಡ್ಡಿ, ಸಹ ಶಿಕ್ಷಕ ಬಿ.ಎಸ್.ಬೈರರೆಡ್ಡಿ, ಗ್ರಾಮದ ಮುಖಂಡರಾದ ಬಿ.ಸುರೇಶ್, ಶಂಕರಪ್ಪ, ಶ್ರೀನಿವಾಸ್, ಶ್ರೀರಾಮಪ್ಪ, ಓಬಳೇಷ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.