ಬಾಕಿ ಹಣ ಪಾವತಿಗೆ ಆಗ್ರಹಿಸಿ ಟ್ಯಾಂಕರ್ ಮಾಲೀಕರ ಪ್ರತಿಭಟನೆ
ಕೋಲಾರ: ಬಾಕಿ ಹಣ ಪಾವತಿಗೆ ಒತ್ತಾಯಿಸಿ ಟ್ಯಾಂಕರ್ ಮಾಲೀಕರು ಬುಧವಾರ ನಗರಸಭೆ ಮುಂದೆ ನೀರಿನ ಟ್ಯಾಂಕರ್ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.
ನಗರದಲ್ಲಿ 52 ಟ್ಯಾಂಕರ್ಗಳು ಪ್ರತಿದಿನ ವಿವಿಧ ವಾರ್ಡುಗಳಿಗೆ ನೀರು ಸರಬರಾಜು ಮಾಡುತ್ತಿದ್ದು, ಬಾಕಿ ಹಣ ಪಾವತಿ ಮಾಡದಿರುವುದರಿಂದ ಟ್ಯಾಂಕರ್ಗಳಿಗೆ ಕನಿಷ್ಠ ಡೀಸೆಲ್ ಹಾಕಿಸಲು ಹಣವಿಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು.
ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಕಳೆದ ಜನವರಿಯಿಂದ ಇದುವರೆಗೂ 1.30 ಕೋಟಿ ಬಾಕಿ ಬರಬೇಕಾಗಿದೆ ಎಂದರು. ಕಳೆದ 2012ರಲ್ಲಿ ಬಾಕಿ ಉಳಿಸಿಕೊಂಡಿರುವ 1 ಕೋಟಿ ಬರಬೇಕಾಗಿದ್ದು, ತಮಗೂ ಸಹ ಕುಟುಂಬಗಳು ಇದ್ದು, ಕೂಡಲೇ ಬಾಕಿ ಪಾವತಿ ಮಾಡುವಂತೆ ಒತ್ತಾಯಿಸಿದರು.
ಮನವಿ ಅಲಿಸಿದ ಪ್ರಭಾರ ಪೌರಾಯುಕ್ತ ಆಯುಷಾ ಫರ್ವೀನ್ ಬಾಕಿ ಹಣ ಪಾವತಿಗೆ ಕೊಂಚ ಸಮಯ ಕೊಡಿ ಎಂದಾಗ, ಕುಪಿತರಾದ ಪ್ರತಿಭಟನಾಕಾರರು ಬಾಕಿ ಪಾವತಿ ಆಗುವವರೆಗೂ ನೀರು ಪೂರೈಕೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು.
ಪ್ರತಿಭಟನೆ ನೇತೃತ್ವವನ್ನು ಟ್ಯಾಂಕರ್ ಮಾಲೀಕರ ಸಂಘದ ಮುಖಂಡರಾದ ನಾರಾಯಣಸ್ವಾಮಿ, ಗಿರೀಶ್, ಕೃಷ್ಣಪ್ಪ, ಶ್ರೀನಾಥ್, ನಾಗೇಶ್, ಸೋಮಣ್ಣ ವಹಿಸಿದ್ದರು.
ಕವಿ-ಕಾವ್ಯ, ಚುಟುಕು ಕಾರ್ಯಕ್ರಮ
ಚಿಂತಾಮಣಿ: ತಾಲೂಕು ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ನೆಲವಾಗಿಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೆ.2 ಸೋಮವಾರ ಮಧ್ಯಾಹ್ನ 1 ಗಂಟೆಗೆ ಶಾಲೆಯ ಅಂಗಳದಲ್ಲಿ ಕವಿ-ಕಾವ್ಯ, ಚುಟುಕು,ಅಚ್ಚ ಕನ್ನಡ, ಸ್ವಚ್ಛಕನ್ನಡ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಚುಸಾಪ ಪ್ರಧಾನ ಕಾರ್ಯದರ್ಶಿ ರಾಯಲ್ ಶ.ಮ. ಮಂಜುನಾಥ್ ತಿಳಿಸಿದ್ದಾರೆ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎನ್.ಎಸ್. ಮಂಜುನಾಥ ಅಧ್ಯಕ್ಷತೆಯಲ್ಲಿ ರಾತಕಲ್ಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ನಾರಾಯಣಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾತಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ವೆಂಕಟೇಶ್ ಬಾಬು, ದೊಡ್ಡಕಟ್ಟಿಗನಬ್ಬೆ ಪ್ರೌಢಶಾಲೆಯ ಶಿಕ್ಷಕಿ ನಾಗಲಕ್ಷ್ಮಿ ಹಾಗೂ ಸಾಹಿತಿಯಾದ ನೆಲವಾಗಿಲು ಧನಪಾಲ, ವಿಶೇಷ ಆಹ್ವಾನಿತರಾಗಿ ಜನಪದ ಗಾಯಕರಾದ ಸೀಕಲ್ ನರಸಿಂಹಪ್ಪ, ಮಹೇಶ್ಕುಮಾರ್, ಚಂದ್ರಶೇಖರ್ ಹಾಗೂ ಎಸ್.ಎಸ್.ವೈ ಸಾಧಕರಾದ ಎಂ.ವಿ. ಅಶ್ವತ್ಥನಾರಾಯಣ ಮುಂತಾದವರು ಭಾಗವಹಿಸಲಿದ್ದಾರೆ.
ಇಂದು ಗ್ರಾಪಂ ಜಮಾಬಂದಿ
ಟೇಕಲ್: ಆಗಸ್ಟ್ 29ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಟೇಕಲ್ ಗ್ರಾ.ಪಂ. ಆವರಣದಲ್ಲಿ ಪ್ರಸಕ್ತ ಸಾಲಿನ ಜಮಾಬಂದಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದಕ್ಕೆ ಟೇಕಲ್ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯು ನೋಡಲ್ ಅಧಿಕಾರಿಯಾಗಿ ಪ್ರಕಾಶ್ ಬಾಬು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಿ. ಅಂಬರೀಷ್ ಅವರು ಈ ವಿಷಯ ತಿಳಿಸಿದ್ದಾರೆ.
ಎಪಿಎಂಸಿ ಕಾರ್ಯದರ್ಶಿಗೆ ಬೀಳ್ಕೊಡುಗೆ
ಮಾಲೂರು: ವರ್ಗಾವಣೆಯಾದ ಇಲ್ಲಿನ ಎಪಿಎಂಸಿಯ ಕಾರ್ಯದರ್ಶಿ ಕುಮಾರ್ ಅವರಿಗೆ ಎಪಿಎಂಸಿ ಸಿಬ್ಬಂದಿ ಆತ್ಮೀಯವಾಗಿ ಬೀಳ್ಕೋಡುಗೆ ಸಮಾರಂಭ ಆಯೋಜಿಸಿದ್ದರು.
ಎಪಿಎಂಸಿ ಸಿಬ್ಬಂದಿ ಕಚೇರಿಯಲ್ಲಿ ನೀಡಿದ ಆತ್ಮೀಯ ಬೀಳ್ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಕಾರ್ಯದರ್ಶಿ ಕುಮಾರ್, ಕರ್ತವ್ಯದಲ್ಲಿ ಪ್ರಾಮಾಣಿಕತೆ ಮೆರೆದಾಗ ಮಾತ್ರ ಸರ್ಕಾರಿ ಕೆಲಸ ದೇವರ ಕೆಲಸವಾಗಲು ಸಾಧ್ಯ. ಇಲ್ಲಿನ ರೈತರು, ವ್ಯಾಪಾರಿಗಳು ಹಾಗೂ ಸಿಬ್ಬಂದಿ ಉತ್ತಮ ಸಹಕಾರ ನೀಡಿದ್ದಾರೆ. ಇಲ್ಲಿನ ಕರ್ತವ್ಯವನ್ನು ನನ್ನ ಜೀವನದಲ್ಲಿ ಮರೆಯಲಾಗದ ಮಧುರ ಅನುಭವವಾಗಿದೆ ಎಂದರು. ಇದೇ ಸಂಧರ್ಭದಲ್ಲಿ ಕಾರ್ಯದರ್ಶಿ ಕುಮಾರ್ ಜತೆಯಲ್ಲಿ ವರ್ಗಾವಣೆಗೊಂಡಿದ್ದ ಮಾರುಕಟೆ ಅಧಿಕಾರಿ ಅಯ್ಯಪ್ಪ ಅವರನ್ನು ಸಹ ಸನ್ಮಾನಿಸುವ ಮೂಲಕ ಬೀಳ್ಕೊಡಲಾಯಿತು. ಸಹಾಯಕ ನಿರ್ದೇಶಕ ಶಿವಣ್ಣ, ವಿಜಯಲಕ್ಷ್ಮಿ, ಹಂಸ ಕಲಾ, ಜೈರಾಮೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

