ನೆರಿನತ್ತೆ ಜನರಿಂದ ಖಾಲಿ ಬಿಂದಿಗೆ ಪ್ರದರ್ಶನ
ಬಂಗಾರಪೇಟೆ: ಕುಡಿಯುವ ನೀರಿನ ಸಮಸ್ಯೆ ನೀಗಿಸುವಲ್ಲಿ ಗ್ರಾಮ ಪಂಚಾಯ್ತಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿ ಕಾಮಸಮುದ್ರ ಪಂಚಾಯ್ತಿಯ ನೆರಿನತ್ತೆ ಗ್ರಾಮಸ್ಥರು ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಖಾಲಿ ಬಿಂದಿಗೆಳನ್ನು ಪ್ರದರ್ಶಿಸಿ ಪ್ರತಿಭಟಿಸಿದ ಘಟನೆ ಗುರುವಾರ ನಡೆದಿದೆ.
ಕಾಮಸಮುದ್ರ ಹೋಬಳಿ ಕೇಂದ್ರವಾಗಿದ್ದರೂ ಹಲವು ಸಮಸ್ಯೆಗಳಲ್ಲೇ ಇಲ್ಲಿನ ಜನರ ಬದುಕು ಸಾಗಿಸುವಂತಾಗಿದೆ. ಪಂಚಾಯ್ತಿ ವ್ಯಾಪ್ತಿಯ ನೆರಿನತ್ತ ಗ್ರಾಮದಲ್ಲಿ ಇದ್ದ ಒಂದು ಬೋರ್ ಸಹ ನೀರಿಲ್ಲದೆ ಸಂಪೂರ್ಣವಾಗಿ ಒಣಗಿದ್ದರೂ ಪಂಚಾಯ್ತಿ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರೂ ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಕಳೆದ ನಾಲ್ಕೈದು ದಿನಗಳಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಉದ್ಭವವಾಗಿದ್ದು ಬೆಳಗ್ಗೆ ಎದ್ದರೆ ಮಹಿಳೆಯರು ಸೇರಿಂದತೆ ಮನೆ ಮಂದಿಯಲ್ಲಾ ದೂರದ ತೋಟಗಳಿಗೆ ಬಿಂದಿಗೆಗಳನ್ನು ಹಿಡಿದು ಹೋಗುವ ದುಸ್ಥಿತಿ ನಿರ್ಮಾಣವಾಗಿದೆ. ಪಂಚಾಯ್ತಿ ಸದಸ್ಯರು ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ. ಗುರುವಾರ ದಿಢೀರನೆ ನೂರಾರು ಮಹಿಳೆಯರು ಪಂಚಾಯ್ತಿ ಕಚೇರಿಗೆ ಲಗ್ಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರು ಪ್ರತಿಭಟನೆ ಮಾಡುತ್ತಿರುವ ವಿಷಯ ಅರಿತರೂ ಪಿಡಿಒ ಕಚೇರಿ ಕಡೆ ಸುಳಿಯಲಿಲ್ಲ ಇದರಿಂದ ಪ್ರತಿಭಟನಾಕಾರರ ಆಕ್ರೋಶ ಮತ್ತಷ್ಟು ನೆತ್ತಿಗೇರಿತು.
ನಂತರ ಕಾರ್ಯದರ್ಶಿ ಸೋಮಶೇಖರ್ ಸ್ಥಳಕ್ಕೆ ಬಂದು ಎರಡು ದಿನದೊಳಗೆ ನೀರಿನ ಸಮಸ್ಯೆ ನೀಗಿಸುವುದಾಗಿ ನೀಡಿದ ಭರವಸೆ ಮೇರೆಗೆ ಪ್ರತಿಭಟನೆಯನ್ನು ಕೈ ಬಿಟ್ಟರು. ಪ್ರತಿಭಟನೆ ನೇತೃತ್ವವನ್ನು ಗ್ರಾಮ ಮುಖಂಡರಾದ ತಿಮ್ಮರಾಯ, ವೆಂಕಟಪ್ಪ ಮತ್ತು ಸೈಯದ್ ಹುಸೇನ್ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

