ರೈತರಿಗೆ ಸಕಾಲದಲ್ಲಿ ಸಾಲ ನೀಡಿ: ಶಿವಶಂಕರರೆಡ್ಡಿ
ಗೌರಿಬಿದನೂರು: ರೈತರಿಗೆ ಸಕಾಲದಲ್ಲಿ ಸಾಲ ನೀಡುವುದರ ಜೊತೆಗೆ ತೆಗೆದುಕೊಂಡ ಸಾಲವನ್ನು ಸಕಾಲದಲ್ಲಿ ಪಾವತಿಸುವಂತೆ ರೈತರಿಗೆ ಬ್ಯಾಂಕ್ ಅಧಿಕಾರಿಗಳು ತಿಳುವಳಿಕೆ ನೀಡಬೇಕೆಂದು ವಿಧಾನಸಭೆ ಉಪಾಧ್ಯಕ್ಷಎನ್.ಹೆಚ್.ಶಿವಶಂಕರರೆಡ್ಡಿ ಬ್ಯಾಂಕ್ ಛಅಧಿಕಾರಿಗಳಿಗೆ ಸೂಚನೆ ನೀಡಿದರು. ಶುಕ್ರವಾರ ಇಲ್ಲಿನ ಹೊಸೂರು ಹೋಬಳಿ ಸೊನಗಾನಹಳ್ಳಿಯಲ್ಲಿ ಕೆನರಾಬ್ಯಾಂಕ್ ಆರ್ಥಿಕ ಸೇರ್ಪಡೆ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ ಒಂದು ತಿಂಗಳ ಹಿಂದೆ ರೂಪುಗೊಂಡ ಈ ಶಾಖೆ ಇಂದು ಪ್ರಾರಂಭಗೊಂಡಿದೆ. ಈ ಹಿಂದೆ ಹಣವಂತರಿಗೆ, ಸ್ಥಿತಿವಂತರಿಗೆ ಮಾತ್ರ ಸೀಮಿತವಾದ ಬ್ಯಾಂಕ್ಗಳು, ಇಂದು ಗ್ರಾಮೀಣ ಜನರ ಬಗ್ಗೆ ಕಾಳಜಿ ವಹಿಸಿ ಅವರ ಬಳಿಗೆ ಬರುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮರುಪಾವತಿಯೆಡೆಗೂ ಕಾಳಜಿ ಇರಲಿ: ಈ ನಿಟ್ಟಿನಲ್ಲಿ ರೈತರೂ ಕೂಡ ಬ್ಯಾಂಕ್ನಲ್ಲಿ ಸಾಲ ಪಡೆದಷ್ಟೆ ಕಾಳಜಿಯಿಂದ ಮರುಪಾವತಿ ಕರಾರುವಕ್ಕಾಗಿ ಸಕಾಲದಲ್ಲಿ ಹಿಂತಿಗಿಸುವ ಮನೋಭಾವ ತಳೆಯಬೇಕು ಇದರಿಂದ ಮರಳಿ ಸಾಲ ಪಡೆಯುವುದಕ್ಕೆ ಆದ್ಯತೆ ಸಿಗುತ್ತದೆ. ಮಹಿಳಾ ಸ್ವ ಸಹಾಯ ಸಂಘಗಳಿಗೆ ತರಬೇತಿ ನೀಡುವ ಯೋಜನೆಯನ್ನು ಬ್ಯಾಂಕುಗಳು ಹಾಕಿಕೊಂಡಿದೆ ಎಂದರು. ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಆರ್.ಜಿ.ಸ್ವಾಮಿ ಮಾತನಾಡಿ, 14ಹಳ್ಳಿಗಳಿಂದ ಕೂಡಿದ ಸೊನಗಾನಹಳ್ಳಿಯಲ್ಲಿ ಎಟಿಎಂ ಪ್ರಾರಂಭಿಸುವ ಭರವಸೆ ನೀಡಿದರು. ಉಪ ವ್ಯವಸ್ಥಾಪಕ ಸಂಪತ್ಕುಮಾರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥ ಭಟ್, ನಾಗೇಂದ್ರ ಪ್ರಸಾದ್, ಮಹೇಂದ್ರಕುಮಾರ್, ಮಂಜುನಾಥಸ್ವಾಮಿ, ಹನುಮಂತರಾಯಪ್ಪ, ಹೊಸೂರು ಕೆನರಾ ಬ್ಯಾಂಕ್ ಪ್ರಬಂಧಕ ಮಧುಸೂಧನ ಭಟ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

