ಶ್ರಾವಣ ಕೊನೆ ಶನಿವಾರ; ಜಿಲ್ಲಾದ್ಯಂತ ವಿಶೇಷ ಪೂಜೆ
ಕ.ಪ್ರ.ವಾರ್ತೆ ಮಾಲೂರು ಆ.31
ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರ,ಪೂಜೆ ನಡೆಯಿತು.
ಚಿಕ್ಕಕಡತೂರು ವೆಂಕಟೇಶ್ವರಸ್ವಾಮಿ ದೇವಾಲಯ: ಕೋಲಾರ ರಸ್ತೆಯಲ್ಲಿರುವ ಚಿಕ್ಕಕಡತೂರು ಗ್ರಾಮ ಬಳಿಯ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ಪೂಜಾ ಕೈಂಕರ್ಯಗಳು ನಡೆದವು. ಮುಖ್ಯ ಆರ್ಚಕ ಶ್ರೀನಿವಾಸ ಶಾಸ್ತ್ರಿ ನೇತೃತ್ವದಲ್ಲಿ ಹವನ-ಗಣ ಹೋಮಗಳು ನಡೆದವು. ಭಕ್ತಾದಿಗಳಿಗಾಗಿ ದೇವಾಲಯ ಸಮಿತಿಯವರು ಪ್ರಸಾದ ವಿತರಣೆ ಹಮ್ಮಿಕೊಂಡಿದ್ದರು. ಪ್ಲಾಸ್ಟಿಕ್ ನಿರ್ಮೂಲನ ಸಮಿತಿಯ ಅಧ್ಯಕ್ಷ ಮುನಿಸ್ವಾಮಿ, ಕೋಟಾ ಸೀನಪ್ಪ, ಗೋಪಿನಾಥ್, ತಬಲ ಅಪ್ಪಿ ಇದ್ದರು.
ಕಾಳಿಕಾಂಭ ದೇವಾಲಯ: ಕೋಲಾರ ರಸ್ತೆಯ ಬಂಗಾರಪೇಟೆ ಕ್ರಾಸ್ನಲ್ಲಿರುವ ಕಾಳಿಕಾಂಭ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ ನೆರವೇರಿತು. ಗುರೂಜಿ ಸಂತೋಷ ಕುಮಾರ್ ಆಚಾರ್ಯ, ವಿನಯ್, ಭರತ್ ಕುಮಾರ್,ಸುಬ್ರಮಣ್ಯ, ಎಸ್.ವಿ.ಕೃಷ್ಣಯ್ಯ,ಶ್ರೀನಿವಾಸ್, ವೆಂಕಟೇಶ್,ಮಂಜುನಾಥ್ ಇದ್ದರು.
ಭೂದೇವಿ-ಶ್ರೀದೇವಿ ಸಮೇತ ಶ್ರೀನಿವಾಸ ದೇವಾಲಯ: ಪಟ್ಟಣದ ಗೋಲ್ಡ್ ರಂಗಪ್ಪ ರಸ್ತೆಯಲ್ಲಿರುವ ಭೂದೇವಿ-ಶ್ರೀದೇವಿ ಸಮೇತ ಶ್ರೀನಿವಾಸ ದೇವಾಲಯದಲ್ಲಿ ಸ್ವಾಮಿಗೆ ಮಾಡಿದ್ದ ಅಲಂಕಾರ ಭಕ್ತಾದಿಗಳನ್ನು ಆಕರ್ಷಿಸುವಂತಿತ್ತು. ದೇವಾಲಯದ ಸಮಿತಿಯವರು ಭಕ್ತಾದಿಗಳಿಗಾಗಿ ಪ್ರಸಾದ ವಿತರಿಸಿದರು.
ವೀರಾಂಜನೇಯ ಸ್ವಾಮಿ ದೇವಾಲಯ: ಪಟ್ಟಣದ ರೇಲ್ವೆ ಸೇತುವೆ ಬಳಿಯ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ಕೋಂದಡರಾಮ ಅಲಂಕಾರ ಮಾಡಲಾಗಿತ್ತು. ಸಪ್ತದ್ವಾರ ಸೇರಿದಂತೆ ದೇವಾಲಯವನ್ನು ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಮುಖ್ಯ ಆರ್ಚಕ ವೇಣುಗೋಪಾಲ ಚಾರ್ಯರವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಪೊಜಾ ಕೈಂಕರ್ಯದಲ್ಲಿ ದೇವಾಲಯ ಸಮಿತಿಯವರು ಭಾಗವಹಿಸಿದ್ದರು.
ಶ್ರೀನಿವಾಸ ಕಲ್ಯಾಣೋತ್ಸವ, ಶನಿದೇವರ ಪುಷ್ಪ ಪಲ್ಲಕ್ಕಿ
ಗೌರಿಬಿದನೂರು: ಶ್ರಾವಣ ಮಾಸದ ಕಡೇ ಶನಿವಾರದ ಪ್ರಯುಕ್ತ ಹೊಸೂರು ಗ್ರಾಮದಲ್ಲಿ ವೆಂಕಟರಮಣಸ್ವಾಮಿಗೆ ಕಲ್ಯಾಣೋತ್ಸವ ವೈಭವದಿಂದ ನಡೆಯಿತು. ಸುಮಾರು 12 ಮಂದಿ ದಂಪತಿಗಳು ಕಲ್ಯಾಣೋತ್ಸವವನ್ನು ನೆರವೇರಿಸಿದರು. ಹೊಸಪೇಟೆಯ ಹೂವಿನ ಕೃಷ್ಣಪ್ಪ ಅವರು ಲಡ್ಡುಗಳನ್ನು ವಿತರಿಸಿದರು. ಕೋಮು ಸೌಹಾರ್ದತೆಗೆ ಹೆಸರಾಗಿರುವ ಈ ಗ್ರಾಮದಲ್ಲಿ ಮುಸಲ್ಮಾನ ಬಾಂಧವರು ಸಹ ಬಂದು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ರಾಮಮೂರ್ತಿ ಶಾಸ್ತ್ರಿಗಳ ನೇತೃತ್ವದಲ್ಲಿ ಶ್ರೀನಿವಾಸಾಚಾರ್ ಅವರು ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಿದರು. ಶನಿದೇವರ ಪುಷ್ಪ ಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಿತು. ಸಾವಿರಾರು ಮಂದಿ ಭಕ್ತರು ದೇವರ ದರ್ಶನ ಪಡೆದರು. ಅರ್ಚಕ ರಮೇಶ್ ಶಾಸ್ತ್ರಿ ಪೂಜೆ ನೆರವೇರಿಸಿದರು. ಕೆ. ರಾಮಚಂದ್ರರಾವ್, ಭಗವಂತ ಗುಪ್ತ, ಸೀತಾರಾಮ ಗುಪ್ತ ಮುಂತಾದವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಪಿಳ್ಳಾಂಜಿನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಆರ್ಚಕ ಸುಧೀಂದ್ರಕುಮಾರ್ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮುದುಗೆರೆಯ ಸಂಜೀವಪ್ಪ ಹಾಗೂ ರಾಮಕೃಷ್ಣಪ್ಪ ತಂಡದವರಿಂದ ನಡೆದ ಪಂಡರಿ ಭಜನೆ ಭಕ್ತರ ಮನಸೂರೆಗೊಂಡಿತು.
ಕೊಲದೇವಿ ಗ್ರಾಮದಲ್ಲಿ ಶನೇಶ್ಚರ ರಥೋತ್ಸವ
ಮುಳಬಾಗಲು: ತಾಲೂಕು ಕೊಲದೇವಿ ಗ್ರಾಮದಲ್ಲಿ ಶನೇಶ್ಚರಸ್ವಾಮಿ ದೇವರ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಮಂದಿ ಭಕ್ತಾದಿಗಳು ದೇವರಿಗೆ ಹರಕೆ ಹೊತ್ತು ಕರಿಎಳ್ಳಿನ ಬಟ್ಟೆ, ತೆಂಗಿನಕಾಯಿಯನ್ನು ದೇವರಿಗೆ ಸಮರ್ಪಿಸಿದರು. ಗ್ರಾಮದ ವೆಂಕಟೇಶಗೌಡ, ಮಿಲಿಟರಿ ನಾರಾಯಣಪ್ಪ, ಕಾಳಪ್ಪನವರ ರಾಮಕೃಷ್ಣಪ್ಪ, ಕೊಲದೇವಿ ಮಾಧವರಾವ್, ಮಂಡಿಕಲ್ ಘಟ್ಟು ವೆಂಕಟಾಟಲಯ್ಯ ಮುಂತಾದವರು ಭಾಗವಹಿಸಿದ್ದರು.
ಶ್ರದ್ಧಾ ಭಕ್ತಿಯಿಂದ ಶನಿದೇವರ ಬ್ರಹ್ಮ ರಥೋತ್ಸವ
ಗೌರಿಬಿದನೂರು: ಶ್ರಾವಣ ಮಾಸದ ಕಡೇ ಶನಿವಾರದ ಪ್ರಯುಕ್ತ ಪಟ್ಟಣದ ಬಿ.ಎಚ್. ರಸ್ತೆಯ ಶನಿದೇವರ ವಾರ್ಷಿಕ ಬ್ರಹ್ಮ ರಥೋತ್ಸವ ವೈಭವದಿಂದ ನಡೆಯಿತು. ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ತೇರಿನಲ್ಲಿ ಜೇಷ್ಠಾದೇವಿ ಸಮೇತ ಶನಿದೇವರು ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ವಿವಿಧ ಜಾನಪದ ಕಲಾ ವೃಂದಗಳು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ವಿಧಾನಸಭೆಯ ಉಪ ಸಭಾಪತಿ ಎನ್.ಎಚ್. ಶಿವಶಂಕರ ರೆಡ್ಡಿ ಅವರು ಬೆಳಗ್ಗೆ ದೇವರ ದರ್ಶನ ಪಡೆದರು. ದೇವಾಲಯದ ಆಡಳಿತ ಮಂಡಳಿಯ ಅಶ್ವತ್ಥನಾರಾಯಣ ಶೆಟ್ಟಿ, ಸೂರಣ್ಣ, ನಾಗರಾಜಪ್ಪ ಭಕ್ತಾದಿಗಳಿಗೆ ವ್ಯವಸ್ಥೆ ಮಾಡಿದ್ದರು. ಸಾವಿರಾರು ಮಂದಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಬ್ಯಾಟರಾಯ ಸ್ವಾಮಿಗೆ ಅಲಂಕಾರ
ಶಿಡ್ಲಘಟ್ಟ: ಶ್ರಾವಣ ಕೊನೆಯ ಶನಿವಾರವಾದಂದು ಬ್ಯಾಟರಾಯನ ಸ್ವಾಮಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು. ಬ್ಯಾಟರಾಯನ ಸ್ವಾಮಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

