ಕೋಲಾರ

ಬಿಇಒ ವರ್ಗ ವಿರೋಧಿಸಿ ಸಮತಾ ಸೈನಿಕ ದಳ ಧರಣಿ

Published On :

ಮಾಲೂರು: ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮ ರೆಡ್ಡಿ ಅವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಸ್ಥಳೀಯ ಕರ್ನಾಟಕ ಸಮತಾ ಸೈನಿಕದಳ ಕಾರ್ಯಕರ್ತರು ಶುಕ್ರವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ಧರಣಿ ನಡೆಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಮೈಲಾಂಡಹಳ್ಳಿ ನಾರಾಯಣಸ್ವಾಮಿ ತಾಲೂಕಿನ ಸಾರ್ವಜನಿಕ ಕ್ಷೇತ್ರದಲ್ಲಿ ಕಾನೂನು ಚೌಕಟ್ಟಿನಲ್ಲಿ ಒಂದು ಹೂಸ ಬದಲಾವಣೆ ತಂದ ಭ್ರಷ್ಟಾಚಾರ ವಿರೋಧಿ ನಡಾವಳಿಕೆಯ ಬಿಇಓ ವೆಂಕಟರಾಮರೆಡ್ಡಿ ವರ್ಗಾವಣೆಯಲ್ಲಿ ಇಲ್ಲಿನ ಶಾಸಕ ಕೈವಾಡ ಇದೆ.   ತಮ್ಮ ಮಾತಿಗೆ ಮನ್ನಣೆ ನೀಡಿಲ್ಲ ಎಂಬ ಉದ್ದೇಶದಿಂದ ವರ್ಗಾವಣೆ ಮಾಡುವಂತೆ ಪತ್ರ ನೀಡಿರುವ ಶಾಸಕರ ವರ್ತನೆ ಖಂಡನೀಯ. ಈ ದಕ್ಷ ಪ್ರಾಮಾಣಿಕ ಅಧಿಕಾರಿಯನ್ನು ಇಲ್ಲಿಯ ಕಾರ್ಯನಿರ್ವಹಿಸುವಂತೆ ಮಾಡಲು ಮುಖ್ಯಮಂತ್ರಿಗಳು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ವರ್ಗಾವಣೆ ರದ್ದು ಪಡಿಸದಿದ್ದರೆ ಸಂಘಟನೆ ಮೂಲಕ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದರು. ಮಿಲಟರಿ ರಮೇಶ್, ರಾಧಮ್ಮ, ಚೌಡಪ್ಪ, ಎಸ್. ನಾರಾಯಣಸ್ವಾಮಿ, ಎಂ. ರವಿ ಕುಮಾರ್, ಮುನಿಯಪ್ಪ, ಮೂರ್ತಿ, ಟಿ.ಕೆ. ಸುರೇಶ್, ಕಾವ್ಯಾನಂದ, ಟಿ. ಮುನಿರಾಜು, ಸುನೀಲ್ ಕುಮಾರ್ ಇದ್ದರು.

ಪರಿಹಾರ ನೀಡದೇ ಮನೆ ಖಾಲಿ ಮಾಡಲ್ಲ: ಎಚ್ಚರಿಕೆ
ಚಿಕ್ಕಬಳ್ಳಾಪುರ:  ನೋಟಿಸ್ ವಿತರಣೆಯಾಗಿರುವುದರಿಂದ ನಿವಾಸಿಗಳೊಂದಿಗೆ ಸೇರಿರುವ ದಲಿತ ಸಂಘಟನೆಗಳು ಯಾವುದೇ ಕಾರಣಕ್ಕೂ ಪರಿಹಾರ ನೀಡದೇ ಮನೆಗಳನ್ನು ಖಾಲಿ ಮಾಡಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿವೆ.
ಶುಕ್ರವಾರ ಅಂಬೇಡ್ಕರ್ ಕಾಲೋನಿಯ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಈ ಸಂದರ್ಭ ಮತ ಚಲಾಯಿಸದಿರುವುದು ಮತ್ತು ವಾರ್ಡಿನಲ್ಲಿ ಅಭ್ಯರ್ಥಿಗಳು ಸ್ಪರ್ಧಿಸದೇ ಚುನಾವಣೆ ಬಹಿಷ್ಕರಿಸುವುದು, ಈಗಾಗಲೇ ಸಲ್ಲಿಸಿರುವ ನಾಮಪತ್ರ ಹಿಂಪಡೆಯುವುದು ಮುಂತಾದ ನಿರ್ಧಾರಕ್ಕೆ ತೀರ್ಮಾನಿಸಲಾಗಿದೆ. ಕೂಡಲೇ ಜಿಲ್ಲಾಡಳಿತ ಸಭೆ ಕರೆದು ನಿವಾಸಿಗಳ ಪರವಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.