ಕೋಲಾರ

ಸ್ಕೌಟ್ಸ್, ಗೈಡ್ಸ್ ತತ್ವಗಳನ್ನು ಪಾಲಿಸಿ

Published On :

ಕೋಲಾರ: ವಿದ್ಯಾರ್ಥಿ ಜೀವನ ಎಂಬುದು ಸುಂದರ ಹಾಗೂ ಸುವರ್ಣ ದಿನಗಳಾಗಿದ್ದು ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನವನ್ನು ರೂಪಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಲು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಟುವಟಿಕೆಗಳು ಪೂರಕವಾಗಿವೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಹಾಗೂ ವಕೀಲ ಕೆ.ವಿ. ಶಂಕರಪ್ಪ ತಿಳಿಸಿದರು.
ನಗರದ ಕಮಲಮಹಡಿ ಶಾಲೆಯಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನಾಚರಣೆಯ ಸಮಾರಂಭದಲ್ಲಿ ಜಿಲ್ಲಾ ಮುಖ್ಯ ಆಯುಕ್ತ ಹಾಗೂ ವಕೀಲ ಕೆ.ವಿ. ಶಂಕರಪ್ಪ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಮುಂದಿನ ಜೀವನಕ್ಕೆ ಬೇಕಾದ ಅಡಿಪಾಯವನ್ನು ನಿರ್ಮಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರ ಮತ್ತು ಮಾರ್ಗದರ್ಶನವನ್ನು ಪಡೆದುಕೊಂಡು ಲಾರ್ಡ್ ಬೇಡೆನ್ ಪಾನೆಲ್ ರವರ ಆದರ್ಶಗಳನ್ನು ಪರಿಪಾಲಿಸಿ ಎಂದು ಕರೆ ನೀಡಿದರು.
ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಎಂ.ವಿ. ಜನಾರ್ದನ್ ಮಾತನಾಡಿ ಇಂದು ಚಿಂತನಾ ದಿನ ನಾವು ಒಳ್ಳೆಯದನ್ನು ಚಿಂತೆ ಮಾಡಿ ಒಳ್ಳೆಯದನ್ನು ಕಾರ್ಯ ರೂಪಕ್ಕೆ ತಂದು ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಿ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ ಎಂದರು.
ಎಲ್ಲಾ ವಿದ್ಯಾರ್ಥಿಗಳು ನಿಮ್ಮ ಸುತ್ತಮುತ್ತಲಿನ ಗೆಳೆಯರಿಗೆ ಸ್ಕೌಟ್ಸ್ ಸಂಸ್ಥೆಯ ಉದ್ದೇಶಗಳನ್ನು ತಿಳಿಸಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಚಳುವಳಿಯಲ್ಲಿ ಭಾಗವಹಿಸಿ ಉತ್ತಮ ಸಮಾಜ ರೂಪಿಸುವಲ್ಲಿ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಕಮಲಮಹಡಿ ಶಾಲೆಯ ಮುಖ್ಯ ಶಿಕ್ಷಕರಾದ ಮುನಿಯಪ್ಪರವರು ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪಕರಾದ ಲಾರ್ಡ್ ಬೇಡೆನ್ ಪಾನೆಲ್ ಅವರು ವಿಶ್ವಮಾನ್ಯ ವ್ಯಕ್ತಿಯಾಗಿದ್ದು ಇವರು ಹಾಕಿಕೊಟ್ಟ ಚಟುವಟಿಕೆಗಳು ಸುಮಾರು 240 ದೇಶಗಳಲ್ಲಿ ಕೋಯ್ಯಂತರ ವಿದ್ಯಾರ್ಥಿಗಳು ಮತ್ತು ಯುವಕರು ಈ ಚಳುವಳಿಯಲ್ಲಿ ಭಾಗವಹಿಸುವಂತಾಗಿದೆ. ಇಂತಹ ವ್ಯಕ್ತಿಗಳ ಆದರ್ಶಗಳನ್ನು ಇಡೀ ವಿಶ್ವವೇ ಪಾಲಿಸಿ ಸಮಾಜದಲ್ಲಿ ಶಾಂತಿ, ಶಿಸ್ತು ಮತ್ತು ಸಹಕಾರ ಬೆಳೆಯಲಿ ಎಂದು ಆಶಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಭ್ರಷ್ಟಾಚಾರ, ಶಿಕ್ಷಣದ ಮಹತ್ವ, ಪರಿಸರ ಪ್ರಜ್ಞೆ, ನೀರಿನ ಮಹತ್ವ ಇತ್ಯಾದಿ ಸಮಾಜಿಕ ಕಳಕಳಿಯ ಘೋಷಣಾ ಫಲಕಗಳೊಂದಿಗೆ ಮೆರವಣಿಗೆ ಸಾಗಿದರು.
ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳಾದ ಕೆ. ಸುರೇಶ್, ಲಕ್ಷ್ಮೀ, ಉಮಾದೇವಿ, ಅಮಲ, ವಿಠಲ್‌ಣ ರಾವ್, ಸಂಪತ್ ಕುಮಾರ್, ಉಮಾಶ್ರೀ, ನಂಜುಂಡಹಳ್ಳಿ ಶ್ರೀನಿವಾಸಗೌಡ, ರಾಜಣ್ಣ, ಶ್ರೀನಿವಾಸ, ಮಂಜುಳ, ಕಿರಣ್ ಕುಮಾರ್, ನಾರಾಯಣಸ್ವಾಮಿ, ಪ್ರಭಾಕರ, ಮಂಜುನಾಥಚಾರಿ ಹಾಗೂ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ವಿ.ಬಾಬು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.