ಕಲಾವಿದರಿಗೆ ಅಹಂ ತರವಲ್ಲ
ಶ್ರೀನಿವಾಸಪುರ: ಮನುಷ್ಯರಿಗೆ ಹಣ ಇದ್ದರೆ ಅಹಂಕಾರ ಬರುತ್ತದೆ. ಆದರೆ, ಕಲಾವಿದನಿಗೆ ಹಣ ಬಂದರೆ ಆಹಂಕಾರಪಡಬಾರದೆಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ಕುಮಾರ್ ಸಲಹೆ ನೀಡಿದರು.
ಪಟ್ಟಣದಲ್ಲಿ ನೂತನವಾಗಿ ರಚನೆಗೊಂಡಿರುವ ಜನ್ಮಭೂಮಿ ವೇದಿಕೆಯ ವತಿಯಿಂದ ಏರ್ಪಡಿಸಲಾಗಿದ್ದ ತೆಲುಗು ಮಾ ಟಿವಿ ಜಾನಪದ ಗಾಯಕ ಶಿವಗನಾಗಲು ಮತ್ತು ತಂಡದವರನ್ನು ಸನ್ಮಾನಿಸಿ ಮಾತನಾಡಿದರು.
ಜಾನಪದ ಕಲೆಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಜನರ ಮಧ್ಯೆಯಿಂದ ಮಾಯಲಾಗಿ ಜಾನಪದ ನೃತ್ಯಗಳು ನಶಿಸಿ ಹೋಗಿ ಭಾರತೀಯ ಸಾಂಸ್ಕೃತಿಕತೆಗೆ ಅಪಾರ ನಷ್ಟವನ್ನುಂಟು ಮಾಡುತ್ತಿವೆ. ಆದ್ದರಿಂದ ಕಲಾವಿದರು ಆಪಾರವಾದ ನಂಬಿಕೆಯನ್ನಿಟ್ಟುಕೊಂಡು ಜಾನಪದ ಉಳಿವಿಗಾಗಿ ಬಾಳಿ ಬದುಕಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ನೀರಿಲ್ಲದ ಬರಡು ಭೂಮಿಯಾಗುವ ಸಂಭವ ಜಾಸ್ತಿಯಾಗಿರುವುದರಿಂದ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರಪಡುವುದನ್ನು ತಪ್ಪಿಸಿಕೊಳ್ಳಲು ಪ್ರತಿಯೊಂದು ವರ್ಗದವರು ಶಾಶ್ವತ ನೀರಾವರಿಯ ಹೋರಾಟಕ್ಕೆ ಕೈಜೋಡಿಸಿ ಕೋಲಾರ ಜಿಲ್ಲೆಗೆ ಶಾಶ್ವತ ವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಮನವಿ ಮಾಡಿಕೊಂಡರು.
ಮ್ಯಾಕಲ ನಾರಾಯಣಸ್ವಾಮಿ, ಬಿ. ವೆಂಕಟರೆಡ್ಡಿ, ಎಲ್. ಗೋಪಾಲಕೃಷ್ಣ ಬಂದಾರ್ಲಹಳ್ಳಿ, ವಿ. ರವಣಪ್ಪ, ಸಂಜಯರೆಡ್ಡಿ, ಬಿ. ಎಂ. ಪ್ರಕಾಶ್, ಎನ್. ಸತ್ಯನಾರಾಯಣ್, ಕೆ.ಕೆ. ಮಂಜು, ಪೆರಿಚೂರಿ ಸುರೇಂದ್ರಕುಮಾರ್, ಶೇಷಾಪುರ ಗೋಪಾಲ್, ಪಾಳ್ಯ ಗೋಪಾಲರೆಡ್ಡಿ ಇತರರು ಹಾಜರಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

