'ಅಧಿಕಾರದಲ್ಲಿದ್ದಾಗ ನೀರು ಏಕೆ ತರಲಿಲ್ಲ'
ಕೋಲಾರ: ಸಚಿವ ವರ್ತೂರ್ ಪ್ರಕಾಶ್ ಕೋಲಾರ ಕ್ಷೇತ್ರದ ನಾಲ್ಕೂವರೆ ವರ್ಷದ ಕೂಸು. ಆದರೆ, ತಾವು 15 ವರ್ಷಗಳ ಕಾಲ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ನೀರು ಏಕೆ ತರಲಿಲ್ಲವೆಂದು ವರ್ತೂರ್ ಬಣದ ಹಿರಿಯ ಮುಖಂಡ, ದರಖಾಸ್ತು ಸಮಿತಿಯ ಅಧ್ಯಕ್ಷ ಬೆಗ್ಲಿ ಸೂರ್ಯಪ್ರಕಾಶ್ ಪ್ರಶ್ನಿಸಿದ್ದಾರೆ.
ಮಂಗಳವಾರ ತಾಲೂಕಿನ ವಕ್ಕಲೇರಿಯಲ್ಲಿ ಹಮ್ಮಿಕೊಂಡಿದ್ದ ವರ್ತೂರ್ ಬಣದ ಸಮಾವೇಶದಲ್ಲಿ ಮಾತನಾಡಿ, ವೋಟಿಗಾಗಿ ಒಕ್ಕಲಿಗರ ಬಗ್ಗೆ ಪ್ರೀತಿ ವ್ಯಕ್ತಪಡಿಸುತ್ತಿರುವ ಮಾಜಿ ಸಚಿವರು ಕ್ಷೇತ್ರದಲ್ಲಿ ಈವರೆಗೆ ಯಾವುದೇ ಒಬ್ಬ ಒಕ್ಕಲಿಗರನ್ನು ಬೆಳೆಸಲಿಲ್ಲವೆಂದು ಆರೋಪಿಸಿದರು.
ಸಿ.ಭೈರೇಗೌಡರ ಮಗ ಕೃಷ್ಣಾ ಭೈರೇಗೌಡರು ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರ ಎದುರಾಳಿಯಾಗಿದ್ದ ಜನ್ನಘಟ್ಟ ವೆಂಕಟಮುನಿಯಪ್ಪಅವರನ್ನು ಗೊಡ್ಡು ಎತ್ತಿಗೆ ಮತ ಹಾಕಬೇಡಿ ಎಂದು ಜರಿದಿದ್ದರು. ಈಗ ಚಿಗರೆತ್ತು ಆಗಿರುವ ವರ್ತೂರ್ ಪ್ರಕಾಶ್ ವಿರುದ್ಧ ಗೊಡ್ಡೆತ್ತು ಸ್ಪರ್ಧಿಸಬಹುದೇ ಎಂದು ಲೇವಡಿ ಮಾಡಿದರು.
ವಕ್ಕಲೇರಿ ಗ್ರಾಪಂ ಅಧ್ಯಕ್ಷ ರಾಜಪ್ಪ ಮಾತನಾಡಿ, ಹೋಬಳಿಗೆ ಸೇರಿದ 58 ಗ್ರಾಮಗಳ ಅಭಿವೃದ್ಧಿಗೆ ವರ್ತೂರ್ ಬಣ ಬಿಟ್ಟು ಜೆಡಿಎಸ್ ಸೇರಿರುವ ರಾಮು ಅಡ್ಡಿಪಡಿಸುತ್ತಿದ್ದಾರೆ. ಸಮಾವೇಶದ ಸಿದ್ಧತೆಗೂ ಅವರಿಂದ ತೊಂದರೆಯಾದರೂ ಜನತೆ ನಮ್ಮ ನಿರೀಕ್ಷೆಗೂ ಮೀರಿ ಬಂದಿದ್ದಾರೆಂದರು.
ಗ್ರಾಪಂ ಉಪಾಧ್ಯಕ್ಷೆ ಸಲ್ಮಾ ಮಸ್ತಾನಾ, ಸದಸ್ಯ ಹರ್ಷವರ್ಧನ್ ಮಾತನಾಡಿದರು. ಸಮಾವೇಶದ ಕೇಂದ್ರ ಬಿಂದುವಾಗಿದ್ದ ಸಚಿವ ವರ್ತೂರ್ ಪ್ರಕಾಶ್ ಅವರನ್ನು ಬೆಂಬಲಿಗರು ಅದ್ಧೂರಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತಂದರು.
100 ಬಹುಮಾನ: ಮಾಜಿ ಸಚಿವ ಶ್ರೀನಿವಾಸಗೌಡರಿಗೆ ತಾಕತ್ತು ಇದ್ದರೆ ಒಂದು ಹಳ್ಳಿಯಲ್ಲಿ ಕನಿಷ್ಠ 100 ಜನರನ್ನು ಸೇರಿದಲ್ಲಿ ಅವರಿಗೆ 100 ಬಹುಮಾನ ನೀಡುವೆ ಎಂದು ಸಚಿವ ವರ್ತೂರ್ ಪ್ರಕಾಶ್ ಅವರು ವ್ಯಂಗ್ಯವಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

