ಕೋಲಾರ

ಕೇರಳಕ್ಕೆ ಅಕ್ರಮ ಮಣ್ಣು ಸಾಗಣೆ: ಆರು ಲಾರಿ ವಶ

Published On :

ಮಾಲೂರು: ಅಕ್ರಮವಾಗಿ ಕೆರೆ ಮಣ್ಣು ಸಾಗಿಸುತ್ತಿದ್ದ ಆರು ಲಾರಿಗಳನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಶಿವಾರ ಪಟ್ಟಣದ ಬಳಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಪಿಐ ಜಿ.ಕೇಶವಮೂರ್ತಿ ನೇತೃತ್ವದ ಪೊಲೀಸ್ ತಂಡ ಈ ದಾಳಿ ನಡೆಸಿದೆ. ಶಿವಾರ ಪಟ್ಟಣ ಸೇರಿದಂತೆ ಗ್ರಾಮದ ಸುತ್ತಮುತ್ತಲ ಗ್ರಾಮದ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣನ್ನು ತೆಗೆದು ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಅನುಮಾನ ಬರದಿರಲಿ ಎಂದು ಸಿಮೆಂಟ್ ಲೋಡ್ ರೀತಿಯಲ್ಲಿ ಮಣ್ಣುನ್ನು ತುಂಬಿ ಸಿಮೆಂಟ್ ಧೂಳನ್ನು ಲಾರಿಯ ಮೇಲೆಲ್ಲ ಉದುರಿಸಲಾಗುತ್ತಿತ್ತು.
ಅಭಿನಂದನೆ: ತಾಲೂಕಿನ ಗಡಿಭಾಗದ ಕೆರೆಗಳಲ್ಲಿ ಹೆಚ್ಚಾಗಿದ್ದ ಈ ಅಕ್ರಮ ಮಣ್ಣು ಸಾಗಣೆ ದಂಧೆಯು ತಾಲೂಕು ಆಡಳಿತದ ವೈಫಲ್ಯದಿಂದ ತಾಲೂಕಿನ ಒಳಭಾಗವಾದ ಶಿವಾರ ಪಟ್ಟಣಕ್ಕೂ ಹಬ್ಬಿದೆ. ಸ್ಥಳೀಯ ಹೆಂಚಿನ ಕಾರ್ಖಾನೆ ಈ ಅಕ್ರಮ ಮಣ್ಣಿನ ಸಾಗಣೆಯಿಂದ ಮಣ್ಣು ಸಿಗದೆ ಮುಚ್ಚಬೇಕಾದ ಸ್ಥಿತಿಯಲ್ಲಿದೆ. ಈ ಬಗ್ಗೆ ತಾಲೂಕು ಹಾಗೂ ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ ಈಗ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಅಕ್ರಮ ದಂಧೆಗೆ ಕಡಿವಾಣ ಹಾಕುತ್ತಿರುವುದು ಸಂತೋಷದ ವಿಷಯ. ಪೊಲೀಸ್ ಇಲಾಖೆಯನ್ನು ಹಾಗೂ ಶಾಸಕ ಕೃಷ್ಣಯ್ಯ ಶೆಟ್ಟಿ ಅವರನ್ನು ಅಭಿನಂದಿಸುತ್ತಿರುವುದಾಗಿ ತಾಲೂಕು ಹಂಚಿನ ಕಾರ್ಖಾನೆ ಮಾಲೀಕರ ಸಂಘ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.