ಸಿಲಿಂಡರ್‌ನ ಸುರಕ್ಷತಾ ಕ್ರಮಕ್ಕೆ ಸಲಹೆ
ಮಾಲೂರು: ಕುಟುಂಬದ ಹಿತದೃಷ್ಟಿಯಿಂದ ಯಾವುದೇ ಕಾರ್ಯ ನಿರ್ವಹಿಸುವಾಗ ಪ್ರತಿಯೊಬ್ಬರು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಸೂಕ್ತ ಎಂದು ಬೆಳಕು ಸಂಸ್ಥೆಯ ಸಂಯೋಜಕ ಮಂಜುನಾಥ್ ಜವಳಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹಾಗೂ ಕ.ಇಂ. ಫೌಂಡೇಶನ್‌ಗಳ ಸಹಕಾರದಲ್ಲಿ ಬೆಳಕು ಸಂಸ್ಥೆ ಇತ್ತೀಚೆಗೆ ಆಯೋಜಿಸಿದ್ದ ಸುರಕ್ಷಿತ ಅಡುಗೆ ಇಂಧನ ಬಳಕೆ ಹಾಗೂ ಗೋಬರ್ ಗ್ಯಾಸ್‌ನ ಮಹತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುರಕ್ಷತೆ ದೃಷ್ಟಿಯಿಂದ ಅಡುಗೆ ಮಾಡುವಾಗ ಮಹಿಳೆಯರು ತಪ್ಪದೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದರು.
ಪರಿಸರ ಪ್ರೇಮಿಯಾಗಿರುವ ಗೋಬರ್ ಗ್ಯಾಸ್ ಅನ್ನು ಬಳಸಿಕೊಳ್ಳುವ ಮೂಲಕ ಸುತ್ತಮುತ್ತಲ ಪರಿಸರವನ್ನು ಉತ್ತಮಗೊಳಿಸುವ ಜತೆಗೆ ಇಂಧನದ ವೆಚ್ಚ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಮಾರಿಕಾಂಬ ಗ್ಯಾಸ್ ಏಜೆನ್ಸಿಯ ರಾಘವೇಂದ್ರ ಮಾತನಾಡಿ, ಸಿಲಿಂಡರ್ ಉಪಯೋಗಿಸುವಾಗ ಯಾವುದೇ ಸಣ್ಣ ಲೋಪ ಕಾಣಿಸಿಕೊಂಡರೂ ಗ್ರಾಹಕರೇ ಸರಿ ಮಾಡಲು ಹೋಗದೆ ಏಜೆನ್ಸಿಯ ಸಹಾಯ ಪಡೆಯಬೇಕು ಎಂದರು.
ಕೋಲಾರದ ಎಸ್.ಕೆ.ಜಿ ಸಂಘದ ವಿದ್ಯಾಸಾಗರ್, ಉಮೇಶ್, ಬೆಳಕು ಸಂಸ್ಥೆಯ ರಂಗನಾಥ್ ಬಾಬು, ಕ.ಇಂ.ಫೌಂಡೇಷನ್‌ನ ರಾಧಿಕಾ ಮಾತನಾಡಿದರು.
ಇದೇ ವೇಳೆ ಮಾರಿಕಾಂಬ ಗ್ಯಾಸ್ ಏಜೆನ್ಸಿ ಅವರು ತೈಲ ಹಾಗೂ ನೈಸರ್ಗಿಕ ಅನಿಲ ಸಂರಕ್ಷಣೆಯ ಪ್ರಾತ್ಯಕ್ಷಿತೆ ಪ್ರದರ್ಶನ ಮಾಡಿದರು. ಶಾಂತಾ, ಶ್ರೀನಿವಾಸ್ ರೆಡ್ಡಿ ಇದ್ದರು.
ತಾಲೂಕಿನ ಚಿಕ್ಕ ಇಗ್ಗಲೂರು, ಇಂದುಮಂಗಲ, ಬ್ಯಾಟರಾಯನಹಳ್ಳಿ, ಹುಲ್ಕೂರು, ಪುರಮಾಕನಹಳ್ಳಿ, ಪುಡಶೆಟ್ಟಿಹಳ್ಳಿ ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ ಕಾರ್ಯಕ್ರಮವನ್ನು ಅಂಜಿನಮ್ಮ ಸ್ವಾಗತಿಸಿದರು. ಮಂಜುನಾಥ ನಿರೂಪಿಸಿದರು. ಆಂಜಿನಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

