ಕೋಲಾರ

ದುಡ್ಡು ಮಾಡುವುದೇ ವೈದ್ಯರ ವೃತ್ತಿಯಲ್ಲ: ಡಾ.ಮಹದೇವಯ್ಯ

Published On :

ಕೋಲಾರ: ವೈದ್ಯಕೀಯ ವೃತ್ತಿಯ ಘನತೆ ಹೆಚ್ಚಿಸುವ ಮೂಲಕ ಜನತೆಯಲ್ಲಿ ಇರುವ ತಪ್ಪು ಭಾವನೆ ಹೋಗಲಾಡಿಸಬೇಕೆಂದು ಸ್ಪ್ಯಾಸ್ಟಿಕ್ ಸೊಸೈಟಿಯ ವೈದ್ಯಕೀಯ ನಿರ್ದೇಶಕ ಡಾ. ಮದ್ದೂರು ಎಸ್. ಮಹದೇವಯ್ಯ ವೈದ್ಯರಿಗೆ ಸಲಹೆ ನೀಡಿದರು.
ಕೋಲಾರದ ಶ್ರೀದೇವರಾಜ್ ಅರಸು ವೈದ್ಯಕೀಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ವೃತ್ತಿ ಎಂದರೆ ಹಣ ಮಾಡುವುದು ಎಂಬ ತಪ್ಪು ಅಭಿಪ್ರಾಯ ಸಮಾಜದಲ್ಲಿ ಮೂಡಿದೆ. ಇದನ್ನು ಪ್ರಾಮಾಣಿಕ ಸೇವೆಯ ಮೂಲಕ ನಿವಾರಣೆ ಮಾಡಬೇಕಾದ ಜವಾಬ್ದಾರಿ ವೈದ್ಯರ ಮೇಲಿದೆ ಎಂದರು.
ಆರೋಗ್ಯ ಸಮಸ್ಯೆಗಳಿಂದ ನಮ್ಮ ಬಳಿ ಬರುವ ಬಡ ರೋಗಿಗಳಿಗೆ ಸರಳ ಚಿಕಿತ್ಸೆ ನೀಡುವ ಮೂಲಕ ಕಾಯಿಲೆ ಗುಣಪಡಿಸಬೇಕು, ಹಣಕ್ಕಾಗಿ ರೋಗಿಗಳನ್ನು ಪೀಡಿಸಬಾರದೆಂದು ತಿಳಿಸಿದರು. ಡಾ.ನೂಕಾಪುರ್ ಹಾಗೂ ಡಾ.ವಿಜಯಾನಂದಸ್ವಾಮಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪ್ರೇಮನಾಥ ಎಫ್. ಕೊಟೂರ್, ಸಂಯೋಜನಾಧಿಕಾರಿ ಡಾ. ಎಂ.ಎಚ್. ಚಂದ್ರಪ್ಪ, ನಿರ್ದೇಶಕ ಜಿ.ಎಚ್. ಆಂಜನಪ್ಪ, ಉಪ ಪ್ರಾಂಶುಪಾಲ ಡಾ.ಶ್ರೀರಾಮುಲು, ಆರ್.ಎಲ್. ಜಾಲಪ್ಪ ಆಸ್ಪತ್ರೆಯ ವ್ಯೆದ್ಯಕೀಯ ಅಧೀಕ್ಷಕ ಡಾ. ವಿ.ಲಕ್ಷಯ್ಯ, ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಡಾ.ಆನಿಲ್, ಡಾ.ಬೀರೇಗೌಡ, ಡಾ.ರವೀಶ್ ಇದ್ದರು.
ಡಾ.ದಿನೇಶ್ ಸಾಗತಿಸಿ, ಡಾ. ಸಿ.ಮುನಿನಾರಾಯಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.