ಕೋಲಾರ

ಕೆ.ಜಿ.ಹಳ್ಳಿ ವ್ಯಾಪ್ತಿ ಡೆಂಘೀ ವಿರುದ್ಧ ಅರಿವು ಜಾಥಾ

Published On :

ಟೇಕಲ್: ಕೋಲಾರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಡೆಂಘೀ ಜ್ವರ ವಿರುದ್ಧ ಹೋರಾಡಿ ಜನ ಜಾಗೃತಿಯನ್ನುಂಟು ಮಾಡುವ ಆರೋಗ್ಯ ಅರಿವಿನ ಯಾತ್ರೆ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯವೆಂದು ಟೇಕಲ್ ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡರು ಅಭಿಪ್ರಾಯಪಟ್ಟರು.ಅವರು ಟೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಆರೋಗ್ಯ ಕೇಂದ್ರ, ಕೆ.ಜಿ.ಹಳ್ಳಿ ಗ್ರಾಪಂ, ಯುವಜನ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಸಂಪೂರ್ಣ ಸಂಪರ್ಕ ಕಾರ್ಯಕರ್ತರ ಸಹಯೋಗದೊಂದಿಗೆ ಕೆ.ಜಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಅರಿವಿನ ಜಾಥಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಆರೋಗ್ಯ ಅರಿವಿನ ಯಾತ್ರೆಗೆ ಕೆ.ಜಿ.ಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ರಮೇಶ್ ಹಸಿರು ಬಾವುಟ ಮೂಲಕ ಚಾಲನೆ ನೀಡಿದರು. ಈ ವೇಳೆ ವೈದ್ಯ ಡಾ. ಪ್ರಕಾಶ್, ಹಿರಿಯ ಆರೋಗ್ಯ ಸಹಾಯಕ ರಾಜು, ಸಂಪೂರ್ಣ ಸಂಪರ್ಕ ಜಿಲ್ಲಾ ಸಂಯೋಜಕ ಎಂ. ನಂದೀಶ್, ತಾ. ಮೆಲ್ವಿಚಾರಕ ಎಸ್. ಬಾಬು ಮುಂತಾದವರು ಡೆಂಘೀ ಲಕ್ಷಣಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಪದ್ಮನಾಭಯ್ಯ, ಗೋವಿಂದಸ್ವಾಮಿ, ಪಿ.ಡಿ.ಒ. ಗೋವಿಂದೆಗೌಡ, ಗ್ರಾಪಂ ಸದಸ್ಯೆ ಶಾಂತಮ್ಮ, ಅರಳೇರಿ ನಾರಾಯಣಸ್ವಾಮಿ, ಪ್ರಕಾಶ್, ಅನುಸೂಯಮ್ಮ, ಶೈಲಜಾ, ಗಾಯತ್ರಿಭಾಯಿ, ಮುನಿಯಪ್ಪ, ವೆಂಕಟಲಕ್ಷ್ಮೀ, ಕಲಾ ತಂಡದವರಾದ ಯಲ್ಲಪ್ಪ, ಬಸಪ್ಪ ಮುಂತಾದವರು ಉಪಸ್ಥಿತರಿದ್ದರು.ಆರೋಗ್ಯ ಅರಿವಿನ ಯಾತ್ರೆ ಕೆ.ಜಿ.ಹಳ್ಳಿ, ಹುಣಸಿಕೋಟೆ, ಉಳ್ಳೇರಹಳ್ಳಿ, ಜಂಗಾನಹಳ್ಳಿ, ಹಳೇಪಾಳ್ಯ, ಕೆಂಪಸಂದ್ರ, ಓಬಟ್ಟಿ, ಅನಿಗಾನಹಳ್ಳಿ ಇನ್ನೂ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಅರಿವನ್ನು ಮೂಡಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.