ಕೋಲಾರ

ಪ್ರೇಮವಿವಾಹಕ್ಕೆ ವಿರೋಧ ಯುವತಿ ಆತ್ಮಹತ್ಯೆ

Published On :

ಚಿಂತಾಮಣಿ: ಪ್ರೀತಿಸಿದ ಯುವಕನ ಜೊತೆ ವಿವಾಹವಾಗಲು ಪೋಷಕರು ಅಡ್ಡಿಪಡಿಸಿದ ಹಿನ್ನೆಲೆ ಯುವತಿಯೊಬ್ಬಳು ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಂದೇನಹಳ್ಳಿಯಲ್ಲಿ ಗುರುವಾರ ರಾತ್ರಿ 12 ಗಂಟೆಗೆ ನಡೆದಿದೆ. ಹುಸೇನ್ ಸಾಬ್ ಎಂಬವರ ಪುತ್ರಿ ಮದೀನಾ ಬೇಗಂ (18) ಮೃಪಟ್ಟವರು. 3 ವರ್ಷಗಳಿಂದ ಚಿಂತಾಮಣಿ ನಗರದ ಎನ್‌ಎನ್‌ಟಿ ವೃತ್ತ ನಿವಾಸಿ ಅಸಗರ್ ಎಂಬನನ್ನು ಪ್ರೀತಿಸುತ್ತಿದ್ದರು. ಈ ಬಗ್ಗೆ ಚಿಕ್ಕಪ್ಪ ಹಾಗೂ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಪ್ರೇಮ ವಿವಾಹಕ್ಕೆ ಬಿಲ್‌ಕುಲ್ ಒಪ್ಪಿಗೆ ಇಲ್ಲವೆಂದು ಎಚ್ಚರಿಸಿದ್ದರು. ಈ ಮಧ್ಯೆ ಗುರುವಾರ ರಾತ್ರಿ ತನ್ನ ಪ್ರಿಯಕರನ ಜೊತೆ ಕಾಣಿಸಿಕೊಂಡ ಪರಿಣಾಮ ಪೋಷಕರು ಕೆಂಡಾಮಂಡಲವಾಗಿ ಪ್ರೇಮ ವಿವಾಹಕ್ಕೆ ಅಡ್ಡಿಪಡಿಸಿದರು. ಅಲ್ಲದೆ, ಹತ್ತಿರದ ಸಂಬಂಧಿ ಯುವಕನೊಂದಿಗೆ ಮದುವೆಗೆ ಒತ್ತಾಯಿಸಿದ್ದರು. ಇದರಿಂದ ಮನನೊಂದ ಮದೀನಾ ಬೇಗಂ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಪೋಷಕರ ದೂರು:  ತಮ್ಮ ಮಗಳಿಗೆ ಅಸಗರ್ ಒತ್ತಾಯ ಹೇರಿ ವಿವಾಹಕ್ಕೆ ಮುಂದಾಗಿದ್ದ. ಮದೀನಾ ಸಾವಿಗೆ ಅವನೇ ಕಾರಣ ಎಂದು ಆರೋಪಿಸಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧಾರದ ಮೇಲೆ ಅಸಗರ್‌ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಸಬ್‌ಇನ್‌ಸ್ಪೆಕ್ಟರ್ ರೋಷಯ್ಯ ತಿಳಿಸಿದ್ದಾರೆ. ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ಪರೀಕ್ಷೆಗೆ ರವಾನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.