'ಕಾನೂನು ಸುವ್ಯವಸ್ಥೆಗೆ ಸಿಸಿಟಿವಿ ಕ್ಯಾಮರಾ ಸಹಕಾರಿ'
ಕೆಜಿಎಫ್: ಕ್ಷೇತ್ರದ ಬೇತಮಂಗಲ ಠಾಣೆಯಲ್ಲಿ ಇದೀಗ ಸಿಸಿ ಟಿವಿ ಕ್ಯಾಮರಾ ವ್ಯವಸ್ಥೆಗೊಳಿಸಲಾಗಿದೆ. ಇದರಿಂದ ಕಾನೂನು ಸುವ್ಯವಸ್ಥೆ ಜಾರಿಗೆ ತರಲು ಅನುಕೂಲವಾಗಲಿದೆ ಎಂದು ಪೊಲೀಸ್ ರಕ್ಷಣಾಧಿಕಾರಿ ಡಾ.ರೋಹಿಣಿ ಕಟೋಚ್ ಸಫೆಟ್ ತಿಳಿಸಿದರು.
ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಯಿಂದ ಪೊಲೀಸ್ ಠಾಣೆಗೆ ದೂರು ಬರುವ ಸಾರ್ವಜನಿಕರಿಗೆ ಅನುಕೂಲ ಆಗಲಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ನ್ಯಾಯಾ ಒದಗಿಸಲು ನೆರವಾಗಲಿದೆ ಎಂದರು. ಬೇತಮಂಗಲ ಗ್ರಾಮದ ವ್ಯಾಪ್ತಿಯ ಚಿತ್ರ ಮಂದಿರದ ಮಾಲೀಕರೊಬ್ಬರು ಪೊಲೀಸ್ ಠಾಣೆಗೆ 40000 ವೆಚ್ಚದ ಈ ಸಿಸಿ ಟಿವಿ ಕ್ಯಾಮರಾ ವ್ಯವಸ್ಥೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಪಿಎಸ್ಐ ಜಗದೀಶ್ ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮರಾ ಠಾಣೆಯ ಒಳಗೆ ಮತ್ತು ಹೊರಗೆ ನಡೆಯುವ ಎಲ್ಲಾ ಸಂಗತಿಗಳನ್ನು, ರಾತ್ರಿ ಹಗಲು ಗಮನಿಸುವ ಕೆಲಸ ಮಾಡುತ್ತದೆ. ಇದರಿಂದ ಸಾರ್ವಜನಿಕರಲ್ಲಿ ಕರ್ತವ್ಯದ ಬಗ್ಗೆ ಮೂಡುವ ಸಂಶಯ ನಿವಾರಿಸಬಹುದು ಎಂದು ಅವರು ತಿಳಿಸಿದರು. ಇಂತಹ ಸಿಸಿ ಟಿವಿ ಕ್ಯಾಮರಾಗಳು ಕೆಜಿಎಫ್ ನಗರ ಠಾಣೆಗಳ ಸುತ್ತಮುತ್ತಲಿನಲ್ಲಿ ನಡೆಯುವಂತಹ ಕೊಲೆ, ಸುಲಿಗೆ, ಹಲ್ಲೆ ಮುಂತಾದ ಪ್ರಕರಣ ನಿಯಂತ್ರಿಸಲು ಅತ್ಯವಶ್ಯಕ. ಮುಂದಿನ ದಿನಗಳಲ್ಲಿ ಇದರ ಕಾರ್ಯವನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

