ಇಂದಿರಾ ಆವಾಸ್: ಜಿಲ್ಲೆಗೆ 2911 ಮನೆ ಮಂಜೂರು
ಕ.ಪ್ರ.ವಾರ್ತೆ ಕೋಲಾರ ಜು. 24
ಕೇಂದ್ರ ಸರ್ಕಾರದ ಇಂದಿರಾ ಆವಾಸ್ ಯೋಜನೆಯಡಿ 2001ರ ಜನಸಂಖ್ಯೆಯನ್ನು ಆಧರಿಸಿ ಕೋಲಾರ ಜಿಲ್ಲೆಗೆ 2911 ಮನೆಗಳನ್ನು ಮಂಜೂರು ಮಾಡಲಾಗಿದೆ.
2012-13ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ಒಟ್ಟು 87816 ಮನೆಗಳು ಮಂಜೂರಾಗಿದ್ದರೆ, ಕೋಲಾರ ಜಿಲ್ಲೆಯಲ್ಲಿ 2001ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದ ಜನಸಂಖ್ಯೆ 2,88,700 ಹಾಗೂ ಪರಿಶಿಷ್ಟ ಪಂಗಡದ 64120 ಮಂದಿ, ಅಲ್ಪಸಂಖ್ಯಾತರು 65899 ಹಾಗೂ ಇತರೆ ವರ್ಗಕ್ಕೆ ಸೇರಿದವರು 5,62,842 ಸೇರಿದಂತೆ ಒಟ್ಟು 9,82,561 ಮಂದಿಯ ಲೆಕ್ಕಾಚಾರದಡಿ 2911 ಮನೆಗಳನ್ನು ಮಂಜೂರು ಮಾಡಲಾಗಿದೆ.
ಕೇಂದ್ರ ಸರ್ಕಾರದ ಈ ಲೆಕ್ಕಾಚಾರದ ಅನ್ವಯ 2013-14ನೇ ಸಾಲಿಗೆ ಜಿಲ್ಲೆಯ ಐದು ತಾಲೂಕಿಗೆ ಇಂದಿರಾ ಅವಾಸ್ ಯೋಜನೆಯಡಿ ಎಸ್ಸಿ ಸಮುದಾಯಕ್ಕೆ 1920 ಮನೆ, ಎಸ್ಟಿ ಸಮುದಾಯಕ್ಕೆ 574, ಅಲ್ಪಸಂಖ್ಯಾತರಿಗೆ266 ಹಾಗೂ ಇತರೆ ವರ್ಗಕ್ಕೆ 150 ಮನೆಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ.
ಈ ಹಿಂದೆ ಪ್ರತಿ ವರ್ಷವೂ ಇಂದಿರಾ ಆವಾಸ್ ಯೋಜನೆಯಡಿ ಜಿಲ್ಲಾವಾರು ಗುರಿ ನಿಗದಿಪಡಿಸುವಾಗ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು ತಾಲೂಕುವಾರು ಮತ್ತು ಗ್ರಾಮ ಪಂಚಾಯಿತಿವಾರು ಗುರಿಯನ್ನು ನಿಗದಿಪಡಿಸಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುತ್ತಿತ್ತು.
ಆದರೆ, 2013-14ನೇ ಸಾಲಿನಿಂದ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಬದಲಾಯಿಸಿ 2001ರ ಜನಸಂಖ್ಯೆಯ ಆಧಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಸಾಮಾನ್ಯ ವರ್ಗಕ್ಕೆ ಜಿಲ್ಲಾವಾರು ಮನೆಗಳ ಗುರಿಯನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ ಎಂದು ಜಿ.ಎಂ ಸಿಇಒ ಝುಲ್ಫಿಖಾರ್ ಉಲ್ಲಾ ತಿಳಿಸಿದ್ದಾರೆ.
ಪ್ರತಿ ಮನೆಯ ಘಟಕ ವೆಚ್ಚ 1.50 ಲಕ್ಷ: ಇಂದಿರಾ ಅವಾಸ್ ಯೋಜನೆಯಡಿ ಪ್ರತಿ ಮನೆಗೆ ಘಟಕ ವೆಚ್ಚ 1.50 ಲಕ್ಷ ರು.ಗಳಾಗಿದ್ದು ಕೇಂದ್ರ ಸರ್ಕಾರ ತನ್ನ ಪಾಲಿನ 52500 ರು. ಹಾಗೂ ರಾಜ್ಯ ಸರ್ಕಾರ ಪಾಲು 67500, ಬ್ಯಾಂಕ್ ಸಾಲ 20 ಸಾವಿರ, ಫಲಾನುಭವಿಯ ವಂತಿಕೆ 10 ಸೇರಿ 1.50 ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಡಿ ವಿಕಲಚೇತನರು, ಮಾಜಿ ಸೈನಿಕರು, ವಿಧುರರು, ಹಿರಿಯ ನಾಗರೀಕರನ್ನು ಹೊರತುಪಡಿಸಿ ಎಲ್ಲ ಫಲಾನುಭವಿಗಳು ಕಡ್ಡಾಯವಾಗಿ ಮಹಿಳೆಯರೇ ಆಗಿರಬೇಕೆಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಚಿಸಿದೆ.
ಫಲಾನುಭವಿಗಳ ಆಯ್ಕೆಯಲ್ಲಿ ವಿಧವೆಯರು, ಜೀತ ವಿಮುಕ್ತರು, ವಿಕಲಚೇತನರು ಹಾಗೂ ಮಾಜಿ ಸೈನಿಕರಿಗೆ ಆದ್ಯತೆ ನೀಡಬೇಕು, ನಂತರದಲ್ಲಿ ಗುಡಿಸಲು ವಾಸಿಗಳಿಗೆ, ಶಿಥಿಲಗೊಂಡಿರುವ ಕಚ್ಚಾ ಮನೆಯ ನಿವಾಸಿಗಳಿಗೆ , ನಿವೇಶನ ಹೊಂದಿ ಬಾಡಿಗೆ ಮನೆಯಲ್ಲಿ ವಾಸವಿರುವವರು, ನಿವೇಶನ ಹೊಂದಿದ್ದು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದು, ಕುಟುಂಬವು ಪ್ರತ್ಯೇಕವಾಗಿರಬೇಕು. ಈ ಎಲ್ಲ ಫಲಾನುಭವಿಗಳು ನೂತನ ಮಾರ್ಗಸೂಚಿಯನ್ವಯ ಅರ್ಹರಾಗಿದ್ದಾರೆ.
ರಾಜ್ಯಕ್ಕೆ ಮಂಜೂರಾಗಿರುವ ಮನೆಗಳ ವಿವರ
ಪರಿಶಿಷ್ಟ ಜಾತಿಗೆ 41820, ಪರಿಶಿಷ್ಟ ಪಂಗಡಕ್ಕೆ 26153, ಅಲ್ಪಸಂಖ್ಯಾತರಿಗೆ 14028 ಹಾಗೂ ಸಾಮಾನ್ಯ
ತಾಲೂಕು ಪ.ಜಾತಿ ಪ.ಪಂ ಅಲ್ಪಸಂಖ್ಯಾತರು ಇತರೆ ಒಟ್ಟು
ಶ್ರೀನಿವಾಸಪುರ 315 172 42 24 558
ಮುಳಬಾಗಲು 385 62 65 30 542
ಬಂಗಾರಪೇಟೆ 477 71 65 33 646
ಕೋಲಾರ 432 102 50 36 620
ಮಾಲೂರು 311 167 39 28 545
ಒಟ್ಟು 1920 574 266 151 2911
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

