ಹೆಚ್ಚುವರಿ ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಗೌರಿಬಿದನೂರು ಜು.24
ಅಧಿಕ ಜನರನ್ನು ಹೊತ್ತುಬರುವ ಒಂದೇ ಬಸ್ಸಿನಲ್ಲಿ ಪ್ರಯಾಣಿಸಲಾಗದೇ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನಾಮಗೊಂಡ್ಲು - ಜರಬಂಡಹಳ್ಳಿ ಮಾರ್ಗದ ಮೂಲಕ ಮಂಚೇನಹಳ್ಳಿಗೆ ಹೆಚ್ಚುವರಿ ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಸ್ ಸೌಲಭ್ಯ ಪಡೆದಿದ್ದಾರೆ. 9 ಗಂಟೆಗೆ ಬರುವ ಒಂದೇ ಬಸ್ಸಿನಲ್ಲಿ ಜಾಗವಿಲ್ಲದೆ, ಆಟೋಗಳ ಮೊರೆಹೋಗುವಂತಾಗಿದೆ. ಬಡ ವಿದ್ಯಾರ್ಥಿಗಳ ಗೋಳು ಕೇಳುವವರ್ಯಾರು ಎಂದು ಬಸ್ ಸಿಗದೆ ಕಾಲೇಜಿಗೆ ಹೋಗಲಾಗದೇ ಪರದಾಡುತ್ತಿರುವ ಬಡವಿದ್ಯಾರ್ಥಿಗಳಲು ಅಳಲು ವ್ಯಕ್ತಪಡಿಸುತ್ತಾರೆ.
ವರ್ಷದಲ್ಲಿ 4 ಬಾರಿ ಮನವಿ ಪತ್ರ ನೀಡಿದರೂ ಅಧಿಕಾರಿಗಳು ವಿದ್ಯಾರ್ಥಿಗಳ ಬಸ್ ಸಮಸ್ಯೆ ಬಗಹರಿಸುವಲ್ಲಿ ವಿಫಲವಾಗಿದ್ದಾರೆ ಎಂದು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು. ಗೌರಿಬಿದನೂರು ಮೂಲಕ ನಾಮಗೊಂಡ್ಲು ಜರಬಂಡಹಳ್ಳಿ ಮೂಲಕ ಮಂಚೇನಹಳ್ಳಿಗೆ ಬರವ ಬಸ್ ತುಬಿಹೋಗಿರುತ್ತದೆ.
ವಿದ್ಯಾರ್ಥಿಗಳಿಗೆ ಬಸ್ ಹತ್ತಲೂ ಸಹ ಸ್ಥಳವಿರುವುದಿಲ್ಲ. ಜರಬಂಡಹಳ್ಳಿ ಪಂಚಾಯಿತಿ ವ್ಯಾಪ್ತಿಯಿಂದ ಹೆಚ್ಚು ವಿದ್ಯಾರ್ಥಿಗಳು ಹೋಬಳಿ, ತಾಲೂಕು, ಜಿಲ್ಲಾ ಕೆಂದ್ರಗಳಿಗೆ ಕಾಲೇಜು ವಿದ್ಯಾಭ್ಯಾಸಕ್ಕೆ ತೆರಳುವುದರಿಂದ, ಒಂದೇ ಬಸ್ ಬರುತ್ತದೆ. ಇದರಿಂದ ಕಾಲೆಜುಗಳಿಗೆ ತೆರಳಲು ಪ್ರತಿನಿತ್ಯ ಬಸ್ನ ಬಾಗಿಲಲ್ಲಿ ನೇತಾಡುತ್ತಾ ಬರಬೇಕಾದ ಪರಿಸ್ಥಿತಿ ಇದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹೋಬಳಿ ಕೇಂದ್ರಕ್ಕೆ ಪ್ರೌಢಶಾಲೆ, ಪಿಯುಸಿ, ಪದವಿ, ಓದುತ್ತಿರುವ ನೂರಾರು ವಿದ್ಯಾರ್ಥಿಗಳು ಬೆಳಗಿನಿಂದಲೇ ಕಾದು ಕುಳಿತರೆ ಜನರನ್ನು ತುಂಬಿಕೊಂಡು ಬರುವ ಕೆಎಸ್ಆರ್ಟಿಸಿ ಬಸ್ ಹತ್ತಲೂ ಸಹ ಸ್ಥಳವಿರುವುದಿಲ್ಲ. ನೂರಾರು ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಗ್ರಾಮಗಳಲ್ಲೇ ಉಳಿಯುವಂತಾಗಿದೆ. ಪರ್ಯಾಯ ಮಾರ್ಗವಾಗಿ ಆಟೋ ಹತ್ತಿದರೆ 10 ರಿಂದ 12 ನೀಡಬೇಕಾಗುತ್ತದೆ. ಹಳ್ಳಿಗಾಡಿನ ಬಡ ಮಕ್ಕಳಿಗೆ ದಿನ ನಿತ್ಯ ಹಣ ನೀಡಲಾಗದೆ, ಕಾಲೇಜಿಗೆ ಹೋಗೋದೆ ಬೇಡ ಎನ್ನಾತ್ತಾರೆ ಪೋಷಕರು. ಈ ಸಮಸ್ಯೆಗಳ ಬಗ್ಗೆ ಅನೇಕ ಬಾರಿ ಮನವಿ ಪತ್ರ ನೀಡಿದರೂ ಅಧಿಕಾರಿಗಳು ಮಾಡುವುದಾಗಿ ಕಳುವಹಿಸುವುದಾಗಿ ಹೇಳಿ ಜಾರಿಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ವಿನಯ್, ಗಜೇಂದ್ರ, ಸತೀಶ್, ನವೀಂದ್ರ, ವಿಜಯೇಂದ್ರ, ಬಾಬು, ಶಾಲಾಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

