ಕೋಲಾರ

'ತಾಯಿ ಇಟ್ಟ ಮುಹೂರ್ತ' ಚಿತ್ರೀಕರಣಕ್ಕೆ ಚಾಲನೆ

Published On :

ಕ.ಪ್ರ.ವಾರ್ತೆ ಭಾರತಿನಗರ ಜು. 23
ಇಲ್ಲಿಗೆ ಸಮೀಪದ ಕಾಳಕೆಂಪನದೊಡ್ಡಿಯಲ್ಲಿ ಶ್ರೀಮಲೆಮಹದೇಶ್ವರ ಸಿನಿ ಕ್ರಿಯೆಷನ್ಸ್ ವತಿಯಿಂದ 'ತಾಯಿ ಇಟ್ಟ ಮುಹೂರ್ತ' ಕಿರುಚಿತ್ರದ ಚಿತ್ರೀಕರಣಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಬರೆದು ನಿರ್ದೇಶಿಸುತ್ತಿರುವ ಕೆ.ಮಾದೇಶ್ ಹೆಗ್ಗಡೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ತಾಯಿ ಎನ್ನುವ ಪದಕ್ಕೆ ಇರುವ ಸ್ಥಾನ ಎಷ್ಟು ಮಹತ್ವದ್ದು, ಸಂಸಾರದಲ್ಲಿ ಅವಳು ನಿರ್ವಹಿಸುವ ಕರ್ತವ್ಯ ಎಷ್ಟು ಪ್ರಧಾನವಾಗಿರುತ್ತದೆ ಎಂಬ ಅಂಶಗಳನ್ನು ಈ ಚಿತ್ರವು ಒಳಗೊಂಡಿದೆ ಎಂದರು.
ಚಿತ್ರದ ನಾಯಕ ನಟರಾಗಿ ರವಿಸಾಗರ್, ನಾಯಕಿಯಾಗಿ ಮೈಸೂರಿನ ಧರಣಿಶ್ರೀ, ತಾಯಿ ಪಾತ್ರದಲ್ಲಿ 'ಕುಬೇರಪ್ಪ ಅಂಡ್ ಸನ್ಸ್‌', 'ಲಕುಮಿ' ಧಾರಾವಾಹಿಗಳಲ್ಲಿ ನಟಿಸಿರುವ ಅಪೂರ್ವ ಅವರು ನಟಿಸಿದ್ದಾರೆ ಎಂದು ವಿವರಿಸಿದರು.
ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ತಮಿಳಿನ ರಾಜ ಕರೂರ್ ಇತರೆ ಸಹ ಕಲಾವಿದರು ನಟಿಸುತ್ತಿದ್ದಾರೆ. ಛಾಯಾಗ್ರಾಹಕ ಜೀವನ್ ಆಂಟನಿ, ಸಹ ನಿರ್ದೇಶನ ಕ್ವಾಟರ್ ಮಂಜು, ಮೇಕಪ್ ರಘು, ಸ್ಥಿರಚಿತ್ರಣ ಚಿ.ಗಿರೀಶ್ ಹೆಗ್ಗಡೆ, ಪ್ರೊಡಕ್ಷನ್ ಮ್ಯಾನೇಜರ್ ಬೀರೇಶ್ ಮತ್ತು ಇತರರು ತಾಂತ್ರಿಕ ವರ್ಗದಲ್ಲಿದ್ದಾರೆ. ಧಾರಾವಾಹಿ ಉತ್ತಮ ರೀತಿಯಲ್ಲಿ ಮೂಡಿಬರಲಿದೆ ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.