ಸಾಲಬಾಧೆ: ಹುನೇಗಲ್ನಲ್ಲಿ ರೈತ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಗೆ ಮಾಡಿದ ಸಾಲ ಬಾಧೆಯನ್ನು ತಾಳಲಾರದೇ ರೈತನೊಬ್ಬ ಕ್ರಿಮಿನಾಶಕ ಔಷಧ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುನೇಗಲ್ ಗ್ರಾಮದಲ್ಲಿ ಗುರುವಾರ ನಡೆದಿದೆ.
ಹುನೇಗಲ್ ಗ್ರಾಮದ ರೈತ ಗೋಪಾಲಪ್ಪ (52 ವರ್ಷ) ಆತ್ಮಹತ್ಯೆಗೆ ಶರಣಾದ ರೈತ. ತಮ್ಮ ತೋಟದಲ್ಲಿ ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆದಿದ್ದರು. ಇವರ ಪರಿಶ್ರಮಕ್ಕೆ ನೀರಾವರಿ ಸಮಸ್ಯೆ ಮತ್ತು ವಿದ್ಯುತ್ ಸಮಸ್ಯೆಯ ನಡುವೆಯೂ ಉತ್ತಮ ಫಸಲು ಸಹ ಬಂದಿತ್ತು. ಇದರಿಂದ ಬಂದ ಫಸಲಿನಿಂದ ಮಾಡಿದ ಸಾಲವನ್ನು ತೀರಿಸಬಹುದೆಂಬ ನಿರೀಕ್ಷೆಯಲ್ಲಿದ್ದ. ಆದರೆ, ಕಳೆದ ಕೆಲ ತಿಂಗಳಿಂದ ದ್ರಾಕ್ಷಿ ಬೆಲೆಯಲ್ಲಿ ಕಂಡುಬಂದ ಭಾರಿ ಕುಸಿತದಿಂದ ಅವರ ಎಲ್ಲಾ ನಿರೀಕ್ಷೆಗಳು ಉಲ್ಟಾಪಲ್ಟಾ ಆಗಿದೆ.
ಬೆಂಗಳೂರು ಬ್ಲೂ ದ್ರಾಕ್ಷಿಗೆ ಬೇಡಿಕೆ ಕುಸಿದು ಹೋಗಿದ್ದು ದ್ರಾಕ್ಷಿಯನ್ನು ಕೇಳುವವರೇ ಇರಲಿಲ್ಲ. ಅಲ್ಲದೆ, ಈತನ ದ್ರಾಕ್ಷಿ ತೋಟದಲ್ಲಿಯೇ ಕೊಳೆತು ಹೋಗಿದೆ. ಬ್ಯಾಂಕಿನಲ್ಲಿನ 2 ಲಕ್ಷ ಸಾಲದ ಜತೆಗೆ ಖಾಸಗೀ ವ್ಯಕ್ತಿಗಳಿಂದಲೂ ಮಾಡಿದ ಸಾಲವನ್ನು ಯಾವ ರೀತಿ ತೀರಿಸಬೇಕೆಂಬ ಚಿಂತೆಗೆ ಜಾರಿದ್ದ ಗೋಪಾಲಪ್ಪನಿಗೆ ಸಾಲಗಾರರ ಕಿರುಕುಳ ಜಾಸ್ತಿಯಾಗಿತ್ತು. ಇದರಿಂದ ಬೇಸತ್ತು ತಮ್ಮ ತೋಟದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

