ಕೋಲಾರ

ವಿದ್ಯುತ್ ತಂತಿ ತಗುಲಿ ವ್ಯಕ್ತಿಗೆ ತೀವ್ರ ಗಾಯ

Published On :

ಮಾಲೂರು: ಹಾದಿ ಮಧ್ಯೆ ಕಳಗೆ ಸಾಗಿದ್ದ ವಿದ್ಯುತ್ ತಂತಿಯನ್ನು ದಾಟಿ ಮುಂದೆ ಹೋಗಲು  ವಿದ್ಯುತ್ ತಂತಿಯನ್ನು ಪಕ್ಕಕ್ಕೆ ಸರಿಸಲು ಯತ್ನಿಸಿದ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಪಟ್ಟಣದ ರೈಲ್ವೇ ಸೇತುವೆ ಬಳಿಯ ನೂತನ ಬಡಾವಣೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಬಲಗೈ ಸಂಪೂರ್ಣ ಸುಟ್ಟು ಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ವತ್ರೆಗೆ ಸೇರಿರುವ ವ್ಯಕ್ತಿಯನ್ನು ತಾಲೂಕಿನ ಕೂಮ್ಮನಹಳ್ಳಿಯ ನಿವಾಸಿ ರಂಗಸ್ವಾಮಿ(68)ಎಂದು ಗುರುತಿಸಲಾಗಿದೆ. ಕಾರ್ಯದ ನಿಮಿತ್ತ ರೈಲ್ವೇ ಹಳಿ ದಾಟಿ ಬಂದಿದ್ದ ರಂಗಸ್ವಾಮಿ ವಾಪಸ್ ಬರುವಾಗ ರಸ್ತೆ ಪಕ್ಕದಲ್ಲೇ ನೂತನವಾಗಿ ನಿರ್ಮಿತವಾಗುತ್ತಿರುವ ಬಡಾವಣೆಯಿಂದ ಬಂದಿದ್ದ ವಿದ್ಯುತ್ ತಂತಿ ಧರೆಗೆ ಸಮೀಪದಲ್ಲಿ ಹಾದುಹೋಗಿದ್ದು, ಅದನ್ನು ಪಕ್ಕಕ್ಕೆ ಸರಿಸಿ ಸಾಗಲು ಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ನೂತನ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗಾಗಿ ಬಂದಿದ್ದ ಬುಲ್ಡೋಜರ್ ನಿರ್ವಾಹಕನ ನಿರ್ಲಕ್ಷ್ಯದಿಂದ ಕಂಭಕ್ಕೆ ಗುದ್ದಿದ್ದ ಕಾರಣ ಕಂಭವು ಬಗ್ಗಿತ್ತಲ್ಲದೆ ಕಂಬದಿಂದ ಸಾಗಿ ಬಂದಿದ್ದ ವಿದ್ಯುತ್ ತಂತಿ ಕಾಲು ದಾರಿ ಬಳಿ ಧರಗೆ ಇಳಿದಿತ್ತು. ಇದನ್ನು ಗಮನಿಸದ ರಂಗಸ್ವಾಮಿ ಕಂಬಿಯನ್ನು ಸರಿಸಲು ಹೋಗಿ ವಿದ್ಯುತ್ ಶಾಕ್ಗೆ ಸಿಲುಕಿಕೊಂಡರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೆಸ್ಕಾಂ ಅಭಿಯಂತರ ವಾಸುದೇವ, ಪ್ರಶಾಂತ್, ಪೊಲೀಸ್ ಇನ್ಸ್ಪೆಕ್ಟರ್ ಕೇಶವ ಮೂರ್ತಿ, ಎಸ್ಐ ಶಿವಸ್ವಾಮಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರಲ್ಲದೇ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

'ಧ್ಯಾನದಿಂದ ಜ್ಞಾನಪಶಕ್ತಿ ವೃದ್ಧಿ'
ಗೌರಿಬಿದನೂರು:  ಗೌರಿಬಿದನೂರು ತಾಲೂಕು ಮಂಚೆನಹಳ್ಳಿ ಹೋಬಳಿ ಕೇಂದ್ರದ ಶ್ರೀವೀರಹನುಮಾನ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಧ್ಯಾನದ ಬಗ್ಗೆ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶ್ರೀಬ್ರಹ್ಮರ್ಷಿ ಪತ್ರಜೀ ಅವರ ಅನುಯಾಯಿಗಳಾದ ಎಸ್.ವಿ. ನಂಜುಂಡಪ್ಪ ಮಾತನಾಡಿ, ಪ್ರತಿನಿತ್ಯ ನಿರಂತರವಾಗಿ ಕೆಲ ನಿಮಿಷಗಳಾದರೂ ಧ್ಯಾನ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಜ್ಞಾಪಕಶಕ್ತಿ ಬೆಳವಣಿಗೆಯಾಗುತ್ತದೆ ಎಂದ ಅವರು, ಧ್ಯಾನದ ವಿವಿಧ ಉಪಯೋಗಗಳಬಗ್ಗೆ ತಿಳಿಸಿಕೊಟ್ಟರು. ಮಕ್ಕಳಿಗೆ ಶಾಲೆ ಆವರಣದಲ್ಲಿ ಧ್ಯಾನ ಮಾಡುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ತೋರಿಸಿ ಕೊಡಲಾಯಿತು. ಪಿರಮಿಡ್ ಧ್ಯಾನ ಸಂಸ್ಥೆ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, ಪ್ರತಿಯೊಬ್ಬರಿಗೂ ಧ್ಯಾನದ ಬಗ್ಗೆ ಅತ್ಯವಶ್ಯವಿದೆ. ಮಾನಸಿಕ ನೆಮ್ಮದಿ ದೊರೆಯುತ್ತದೆ. ಬೌದ್ಧಿಕ ವಿಕಾಸ ಜ್ಞಾನಾರ್ಜನೆ ಹೆಚುತ್ತದೆ ಎಂದರು.

'ಧಾರ್ಮಿಕ ಕಾರ್ಯದಿಂದ ನೆಮ್ಮದಿ ಪ್ರಾಪ್ತಿ'
ಮಾಲೂರು:  ಮಾನಸಿಕ ನೆಮ್ಮದಿ ನೀಡುವ ಧಾರ್ಮಿಕ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶ್ರೀ ಸಂತೋಷಕುಮಾರ ಆಚಾರ್ಯ ಹೇಳಿದರು. ಪಟ್ಟಣದ ಹೊರವಲಯದ ಟೇಕಲ್ ಕ್ರಾಸ್ ಬಳಿ ನೂತನವಾಗಿ ನಿರ್ಮಿತವಾಗಿರುವ ಶ್ರೀಕಾಳಿಕಾಂಬ ದೇವಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾ ಮಂಡಲ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯ ಬದುಕುವುದಾಗಿ ದುಡಿಯುವ ಕಾರ್ಯಗಳಲ್ಲಿ ಹಣ ಗಳಿಸಬಹುದು. ಆದರೆ ಮಾನಸಿಕ ನೆಮ್ಮದಿ ಗಳಿಸಲು ಸಾಧ್ಯವಿಲ್ಲ. ಆದರೆ ಸರ್ವಶಕ್ತ ಭಗವಂತನ ಆರಾಧಿಸುವ ಕೈಂಕರ್ಯಗಳಲ್ಲಿ ಭಾಗವಹಿಸಿದರೆ ನೆಮ್ಮದಿ ಹಾಗೂ ಜೀವನದ ಸಾರ್ಥಕತೆ ಪಡೆಯಬಹುದು ಎಂದರು. ಮಹಾ ಮಂಡಲಪೂಜಾ ಮಹೋತ್ಸವ ಅಂಗವಾಗಿ ಕಾಳಿಕಾದೇವಿಗೆ ಗಂಗೆ ಪೂಜೆ, ಮಹಾಗಣಪತಿ ಪೂಜೆ,ಪುಣ್ಯಾಹ, ಕಳಶ ಸ್ಥಾಪನೆ, ಗಣಪತಿ, ಸುಬ್ರಮಣ್ಯ, ಆಂಜನೇಯ ನವಗ್ರಹ ಸಮೇತ ಶ್ರೀಕಾಳಿಕಾದೇವಿ ಹೋಮ ಹಾಗೂ ಮಹಾಮಂಗಳಾರತಿ ನಡೆಯಿತು. ಸಂಜೆ 4 ಗಂಟೆಗೆ ಗುರೂಜೀ ಸಂತೋಷಕುಮಾರ ಆಚಾರ್ಯ ಸಮ್ಮುಖದಲ್ಲಿ ಸುಮಂಗಲಿಯರ ಪೂಜೆ ನಡೆಯಿತು. ರತ್ನಮ್ಮ, ಸುಬ್ರಮಣಿ, ರತ್ನಪ್ಪ, ಪಾರ್ವತಮ್ಮ, ಸುಬ್ರಮಣ್ಯಂ, ಬಾಬು, ಚಂದ್ರಶೇಖರ್, ಶಿಲ್ಪಾ, ಶಂಕರ್, ರವೀಂದ್ರ ರೆಡ್ಡಿ, ಭಾಗ್ಯಲಕ್ಷ್ಮಿ, ರವಿಕುಮಾರ್, ನಾಗರಾಜ್, ಶ್ರೀನಿವಾಸ್ ರೆಡ್ಡಿ, ಚಿನ್ನಸ್ವಾಮಿ, ಚಾಮುಂಡಮ್ಮ, ಗೌರಮ್ಮ, ನಾರಾಯಣಮ್ಮ, ಸುಮಿತ್ರಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.