ಇಂದಿಗೆ ಒಂದು ವರ್ಷ ಪೂರೈಸಿದ ಕೋಲಾರ ನಗರ ಸಾರಿಗೆ
ಕೋಲಾರ: ನಗರ ಜನತೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕಳೆದ ವರ್ಷ ಆರಂಭಿಸಿದ ಅಂತರಗಂಗೆ ನಗರ ಸಾರಿಗೆಗೆ ಜು.28ಕ್ಕೆ ವಾರ್ಷಿಕೋತ್ಸವದ ಸಂಭ್ರಮ.
ಕಳೆದ 2012ರ ಜುಲೈ 28ರಂದು ಕೋಲಾರ ನಗರ ಸಾರಿಗೆ ಬಸ್ಸುಗಳ ಸಂಚಾರ ಆರಂಭಿಸಲಾಯಿತು. ದುಬಾರಿ ಆಟೋರಿಕ್ಷಾ ದರ ಇನ್ನಿತರ ಕಾರಣಗಳಿಂದಾಗಿ ಸಾರ್ವಜನಿಕರು ಕಳೆದ ಹಲವಾರು ವರ್ಷಗಳಿಂದ ನಗರ ಸಾರಿಗೆಗಾಗಿ ಹೋರಾಟ ನಡೆಸಿದರ ಫಲದಿಂದ ಅಂತರಗಂಗೆ ನಗರ ಸಾರಿಗೆಯನ್ನು ಜಾರಿಗೆ ತರಲಾಗಿತ್ತು. ಅಂದಿನ ಸಾರಿಗೆ ಸಚಿವ ಆರ್. ಅಶೋಕ್ ನಗರ ಸಾರಿಗೆ ಉದ್ಘಾಟಿಸಿದ್ದರು. ಹತ್ತು ಹೈಟೆಕ್ ಬಸ್ಸುಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಒದಗಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೋಲಾರ ವಿಭಾಗಕ್ಕೆ ಇದರಿಂದ ನಷ್ಟವಾಗುತ್ತಿದ್ದರೂ ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು 11 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ನಗರ ಸಾರಿಗೆಯ ಪ್ರಯೋಜನ ಪಡೆದುಕೊಂಡಿದ್ದಾರೆ.
ಪ್ರತಿದಿನ ಸರಾಸರಿ 3400 ಮಂದಿ ಪ್ರಯಾಣಿಕರು ನಗರ ಸಾರಿಗೆಯಲ್ಲಿ ಓಡಾಡುತ್ತಿದ್ದಾರೆ. ನಗರದಿಂದ ಪೂಜಾ ಕಲ್ಯಾಣ ಮಂಟಪ, ಟಮಕ, ವಡಗೂರು, ಹುದುಕೂಳ, ಅರಹಳ್ಳಿ, ಕೋಲಾರ ಎಪಿಎಂಸಿ ಮತ್ತಿತರ ಕಡೆಗಳಿಗೆ ನಗರ ಸಾರಿಗೆ ಬಸ್ಸುಗಳ ವ್ಯವಸ್ಥೆ ಇರುವುದರಿಂದ ರೈತರು, ವಿದ್ಯಾರ್ಥಿಗಳು, ಬಡವರು,ಮಹಿಳೆಯರು ಹಾಗೂ ಕಾರ್ಮಿಕ ವರ್ಗಕ್ಕೆ ಪ್ರಯೋಜನವಾಗುತ್ತಿದೆ. ನಗರ ಸಾರಿಗೆಯನ್ನು ವರ್ತೂಲ ಸಾರಿಗೆಯಾಗಿ ಮಾರ್ಪಡಿಸಿದಲ್ಲಿ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ ಎಂದು ನಗರ ಸಾರಿಗೆಗಾಗಿ ಹೋರಾಟ ನಡೆಸಿದ್ದ ಸಮಾಜ ಸೇವಕ ನಾಗರಾಜ ಶಣೈ ಅಭಿಪ್ರಾಯಪಟ್ಟಿದ್ದಾರಲ್ಲದೆ ಕೋಲಾರ ನಗರ ಚಿಕ್ಕದಾಗಿರುವುದರಿಂದ ಪ್ರಯಾಣ ದರವನ್ನು ಕಡಿಮೆ ಮಾಡಿದಲ್ಲಿ ಸಾರಿಗೆ ಸಂಸ್ಥೆಗೆ ಈಗ ಆಗುತ್ತಿರುವ ನಷ್ಟವನ್ನು ಪ್ರಯಾಣಿಕರ ಸಂಖ್ಯೆಯ ಹೆಚ್ಚಳದಿಂದ ತುಂಬಬಹುದಾಗಿದೆ ಎಂದಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಖಾಸಗಿ ಟೆಂಪೋ, ಮ್ಯಾಕ್ಸಿ ಕ್ಯಾಬ್ಗಳ ಸಂಚಾರ ನಿಂತಿತ್ತು. ಈಗ ಮತ್ತೆ ವಾಹನಗಳು ಬೀದಿಗೆ ಇಳಿದಿರುವುದರಿಂದ ಸರ್ಕಾರಿ ಬಸ್ಸುಗಳ ಮೇಲೆ ಪರಿಣಾಮ ಬೀರುವುದರಿಂದ ಸಾರಿಗೆ ಸಂಸ್ಥೆಯವರು ಪ್ರಯಾಣಿಕರನ್ನು ಅಕರ್ಷಿಸಲು ಮತ್ತು ಹೆಚ್ಚಿನ ಅನುಕೂಲ ನೀಡುವ ಮೂಲಕ ಸಂಸ್ಥೆಗೆ ಆದಾಯ ಹೆಚ್ಚಿಸಲು ಚಿಂತನೆ ಮಾಡಬೇಕೆಂದು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

