ಕೋಲಾರ

ಅರಹಳ್ಳಿ ಗ್ರಾಪಂ ಉಪ ಚುನಾವಣೆ: ವರ್ತೂರ್ ಬಣದ ಅಭ್ಯರ್ಥಿ ಆಯ್ಕೆ

Published On :

ಕ.ಪ್ರ.ವಾರ್ತೆ ಕೋಲಾರ ಜು.27
ತಾಲೂಕಿನ ಅರಹಳ್ಳಿ ಗ್ರಾಪಂ ವ್ಯಾಪ್ತಿಯ ಬಾರಾಂಡಹಳ್ಳಿ ಗ್ರಾಮದ ಗ್ರಾಪಂ ಸದಸ್ಯ ಹೆಚ್. ನಾರಾಯಣಸ್ವಾಮಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಶನಿವಾರ ನಡೆದ ಉಪ ಚುನಾವಣೆಯಲ್ಲಿ ಅದೇ ಗ್ರಾಮದ ಎಂ. ಮಂಜುನಾಥ್ ಅವಿರೋಧ ಆಯ್ಕೆಯಾಗಿದ್ದಾರೆ.
ಶಾಸಕ ವರ್ತೂರು ಪ್ರಕಾಶ್ ಅವರು ತಮ್ಮ ನಿವಾಸದಲ್ಲಿ ನೂತನ ಸದಸ್ಯರನ್ನು ಅಭಿನಂದಿಸಿ ಮಾತನಾಡಿ, ನಾರಾಯಣಸ್ವಾಮಿ ಅವರು ಸಹ ತಮ್ಮ ಬಣದ ಸದಸ್ಯರಾಗಿದ್ದು, ಪ್ರತಿ ಚುನಾವಣೆಯಲ್ಲೂ ನನ್ನ ಬಣದ ಗೆಲುವಿಗೆ ಶ್ರಮಿಸಿದ್ದರು. ಆದರೆ, ಇವರ ನಿಧನದಿಂದ ತುಂಬಲಾರದ ನಷ್ಟವುಂಟಾಗಿತ್ತು ಎಂದು ಸ್ಮರಿಸಿದ ಅವರು ಇವರ ನಿಧನದಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಮತ್ತೆ ನಮ್ಮ ಬಣದವರು ಸದಸ್ಯರಾಗಿರುವುದು ಸಂತಸ ತಂದಿದೆ ಎಂದರು.
ದಿ. ನಾರಾಯಣಸ್ವಾಮಿ ಅವರಂತೆ ಮಂಜುನಾಥ್ ಸಹ ಜನಸಾಮಾನ್ಯರ ಕಷ್ಟ ಸುಖಗಳಲ್ಲಿ ಭಾಗಿಗಳಾಗಿ, ಜನರ ಆಶೋತ್ತರಗಳಿಗೆ ಸ್ಪಂದಿಸಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ಗ್ರಾಪಂ ಅಧ್ಯಕ್ಷ ಮುನಿಸ್ವಾಮಿರೆಡ್ಡಿ, ಚಂದ್ರಪ್ಪ, ವೆಂಕಟರಾಜ್, ಬಸಪ್ಪ, ಗೋವಿಂದಪ್ಪ, ನಂದೀಶ್, ಬಾಲಾಜಿ ಹನುಮಪ್ಪ, ಹೂಹಳ್ಳಿ ಚಂದ್ರಶೇಖರ್, ಮಹೇಶ್, ರಾಘವೇಂದ್ರ, ಹೊದಲವಾಡಿ ನಾರಾಯಣಸ್ವಾಮಿ ಮತ್ತಿತರರು ಇದ್ದರು.
ಸಿಮೆಂಟ್ ರಸ್ತೆ ನಿರ್ಮಾಣ:  ಕೋಲಾರ ತಾಲೂಕಿನ ಚಿಕ್ಕಹಸಾಳ ಗ್ರಾಮದಲ್ಲಿ 5 ಲಕ್ಷ ರು. ವೆಚ್ಚದಲ್ಲಿ ನಡೆಸಲಾಗುತ್ತಿರುವ ಸಿಮೆಂಟ್ ರಸ್ತೆ ಕಾಮಗಾರಿಗೆ ಶಾಸಕ ವರ್ತೂರು ಪ್ರಕಾಶ್ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಗ್ರಾಪಂ ಉಪಾಧ್ಯಕ್ಷ ರಘು, ಸದಸ್ಯ ಮುನಿಯಪ್ಪ, ಕೃಷ್ಣಸಿಂಗ್, ಶಂಕರಪ್ಪ, ರಘುರಾಂ, ರಾಜಪ್ಪ, ಮಂಜುನಾಥ್, ಛತ್ರಕೋಡಿಹಳ್ಳಿ ರಾಜಗೋಪಾಲ್, ಮುಳವಾಗಿಲಪ್ಪ, ಚಂದ್ರಶೇಖರ್, ಚೌಡಪ್ಪ, ಲಕ್ಷ್ಮಣ್, ರಾಮು, ಜಗನ್ನಾಥ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.