ನೀರಿನ ವಿಚಾರ: ಹಾಲಿ, ಮಾಜಿ ಶಾಸಕ ಬೆಂಬಲಿಗರ ಜಟಾಪಟಿ
ಚಿಂತಾಮಣಿ: ಕುಡಿಯುವ ನೀರಿನ ವಿಷಯದಲ್ಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲಿಗರಿಗೂ ಹಾಗೂ ಮಾಜಿ ಶಾಸಕ ಸುಧಾಕರ್ ಬೆಂಬಲಿಗರಿಗೂ ನಡೆದ ಜಟಾಪಟಿ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ನಲ್ಲಿನಗರಸಭೆಯಿಂದ ಬೋರ್ವೆಲ್ ಕೊರೆಸಲಾಯಿತು.
ಪಟ್ಟಣದ ವಿವಿಧ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದು, ಕೆಲ ನಗರಸಭಾ ಅಧಿಕಾರಿಗಳು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕೈಗೊಂಬೆಗಳಾಗಿದ್ದಾರೆಂದು ಆರೋಪಿಸಿ ಪ್ರಭಾರ ನಗರಸಭಾ ಆಯುಕ್ತ ಗಂಗಣ್ಣನವರನ್ನು ಕೊಠಡಿಯಲ್ಲಿ ಭಾನುವಾರ ಕೂಡಿ ಹಾಕಿದ ಸುಧಾಕರ್ ಬೆಂಬಲಿಗರು ಹಾಗೂ ಹಲವು ನಗರಸಭಾ ಸದಸ್ಯರು ಪ್ರತಿಭಟನೆ ನಡೆಸಿದ್ದರು.
ಇದರ ಬೆನ್ನಲ್ಲೆ ಅಧಿಕಾರಿಗಳು ಮಂಗಳವಾರ ಊರಿನ ಮುಂದಿನ ಪ್ರದೇಶದಲ್ಲಿ ನಗರಸಭೆಯಿಂದ ಬೋರ್ವೆಲ್ ಕೊರೆಸಲು ಮುಂದಾದಾಗ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರು ಜಮಾವಣೆಗೊಂಡಾಗ ಬಿಗುವಿನ ಪರಿಸ್ಥಿತಿ ಉಂಟಾಯಿತು. ಹೀಗಾಗಿ ಪೊಲೀಸ್ ವೃತ್ತ ನಿರೀಕ್ಷಕ ಜನಾರ್ದನ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಬೋರ್ವೆಲ್ ಕೊರೆಸಲಾಯಿತು.
ಪೊಲೀಸರಿಗೆ ದೂರು: ನಗರಸಭೆ ಪೌರಾಯುಕ್ತ ರಾಮೇಗೌಡರು ಪ್ರಭಾರಿಯನ್ನು ವಿನಾಕಾರಣ ಗಂಗಣ್ಣನವರಿಗೆ ನೀಡಿ ಸುದೀರ್ಘ ಸಮಯ ರಜೆ ಹಾಕಿ, ಸಚಿವರೊಬ್ಬರ ಆಪ್ತ ಕಾರ್ಯದರ್ಶಿಯಾಗಿದ್ದೇನೆಂದು ಸುಳ್ಳು ಹೇಳಿಕೊಂಡು ವರ್ಗಾವಣೆಗೆ ಕಸರತ್ತು ಮಾಡುತ್ತಾ ಚಿಂತಾಮಣಿ ನಗರಸಭೆ ಆಡಳಿತವನ್ನು ದಿವಾಳಿ ಮಾಡಿ ಜನತೆಗೆ ದ್ರೋಹ ಬಗೆದಿದ್ದಾರೆಂತಲೂ ಹಾಗೂ ಕಳೆದ ಹಲವು ದಿನಗಳಿಂದ ರಾಮೇಗೌಡರು ಕಾಣೆಯಾಗಿದ್ದಾರೆಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲಿತ ನಗರಸಭಾ ಸದಸ್ಯರಾದ ಆರ್.ಪ್ರಕಾಶ್, ಡಿ.ಸಾದಪ್ಪ, ಮಂಜುನಾಥ್, ನಟರಾಜ್,ಜಿಯಾ ಸೇರಿದಂತೆ ಇನ್ನೂ ಹಲವು ಸದಸ್ಯರು ಪಟ್ಟಣದ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಾರ್ವಜನಿಕರ ಆರೋಪ: ಘನತಾಜ್ಯ ವಿಲೇವಾರಿ,ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇನ್ನೂ ಹಲವಾರು ಸಮಸ್ಯೆಗಳು ಪಟ್ಟಣದಲ್ಲಿ ತಾಂಡವಾಡುತ್ತಿದ್ದರೂ ನಗರಸಭಾ ಅಧಿಕಾರಿಗಳು ನಿರ್ಲಕ್ಷ ತಾಳಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

