ಬ್ಯಾಂಕ್ ಖಾತೆ ಹ್ಯಾಕ್: ನೈಜೀರಿಯಾ ಪ್ರಜೆ ಸೆರೆ
ಕ.ಪ್ರ.ವಾರ್ತೆ ಮೈಸೂರು ಜೂ. 25
ಬ್ಯಾಂಕ್ ಖಾತೆ ಹ್ಯಾಕ್ ಮಾಡಿ 10 ಲಕ್ಷ ಲಪಟಾಯಿಸಿದ್ದ ನೈಜೀರಿಯಾ ಪ್ರಜೆಯನ್ನು ಹರಿಯಾಣ ರಾಜ್ಯದ ಫರಿದಾಬಾದ್ ಸೈಬರ್ ಕ್ರೈಂ ಪೊಲೀಸರು ಮಂಗಳವಾರ ಮೈಸೂರಿನಲ್ಲಿ ಬಂಧಿಸಿದ್ದಾರೆ. ನೈಜೀರಿಯಾ ಪ್ರಜೆ ಇಮ್ಯಾನ್ಯುಲ್ ಜೋಸೆಫ್ (25) ಬಂಧಿತ ಆರೋಪಿ. ಈತನು ಹರಿಯಾಣದ ಫರಿದಾಬಾದ್ ನಿವಾಸಿ ಅನಿಲ್ ಮಂಜಾನ್ ಎಂಬವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ, ತನ್ನ ಖಾತೆಗೆ ಹಂತ ಹಂತವಾಗಿ 10 ಲಕ್ಷದವರೆಗೆ ವರ್ಗಾಯಿಸಿಕೊಂಡಿದ್ದ. ಖಾತೆಯಲ್ಲಿ ಹಣ ಕಡಿಮೆ ಆಗುತ್ತಿರುವುದನ್ನು ಗಮನಿಸಿದ ಅನಿಲ್, ಬ್ಯಾಂಕಿಗೆ ತೆರಳಿ ಪರಿಶೀಲಿಸಿದಾಗ ಬೇರೆ ಖಾತೆಗೆ ಜಮಾ ಆಗಿತ್ತು.
ಈ ಸಂಬಂಧ ಅನಿಲ್ ಫರಿದಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಹಣ ವರ್ಗವಾಗಿದ್ದು ಬೆಂಗಳೂರಿನ ಖಾತೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಹರಿಯಾಣ ಪೊಲೀಸರು ತನ್ನ ಬೆನ್ನಿಗೆ ಹತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಜೋಸೆಫ್ ಮೈಸೂರಿಗೆ ಬಂದಿದ್ದ. ತನ್ನ ಪ್ರಿಯತಮೆ ಉಳಿದುಕೊಂಡಿದ್ದ ಮೈಸೂರಿನ ವಿಜಯನಗರದ ಅಪಾರ್ಟ್ಮೆಂಟ್ನಲ್ಲಿ ಜೋಸೆಫ್ ಸಹ ಉಳಿದುಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಸೋಮವಾರ ಬೆಳಗಿನ ಜಾವ ಜೋಸೆಫ್ನನ್ನು ಪೊಲೀಸರು ಬಂಧಿಸಿ, ಹರಿಯಾಣಕ್ಕೆ ಕರೆದುಕೊಂಡು ಹೋಗಿದ್ದಾರೆ.
9 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಮನೆ ಬಾಗಿಲು ಮುರಿದು 9 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ. ಗುರುರಾಜ್ ಬಡಾವಣೆ ಅರ್ಕಾವತಿ ರಸ್ತೆ ನಿವಾಸಿ ವಿಶ್ವೇಶ್ ಎಂಬವರ ಮನೆಯಲ್ಲಿದ್ದ 9 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ಇನ್ನಿತರ ವಸ್ತುಗಳು ಕಳವಾಗಿದೆ.
2 ಲಕ್ಷ ಮೌಲ್ಯದ ಬಳೆ, ಉಂಗುರ ಕಳವು: ಗಿರಿದರ್ಶಿನಿ ಬಡಾವಣೆ ನಿವಾಸಿ ಲತಾ ಕಾಂಜರಾಜ್ ಎಂವರಿಗೆ ಸೇರಿದ 2 ಲಕ್ಷ ಮೌಲ್ಯದ 1 ಉಂಗುರ ಮತ್ತು 4 ಬಳೆಗಳು ಕಳವಾಗಿದೆ. ಪರಿಚಯಸ್ಥರೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಎರಡು ಪ್ರಕರಣಗಳು ನಜರ್ಬಾದ್ ಠಾಣೆಯಲ್ಲಿ ದಾಖಲಾಗಿವೆ.
ಬೈಕಿನಿಂದ ಬಿದ್ದ ವಿದ್ಯಾರ್ಥಿ ಸಾವು
ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದು ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ನಿವಾಸಿ ಮಹೇಶ್ಕುಮಾರ್ ಎಂಬವರ ಪುತ್ರ ಧರ್ಮೇಂದ್ರಕುಮಾರ್ (21) ಮೃತಪಟ್ಟವರು. ಇವರು ವಿದ್ಯಾವರ್ಧಕ ಕಾಲೇಜಿನ ವಿದ್ಯಾರ್ಥಿ. ತನ್ನ ಇಬ್ಬರು ಸ್ನೇಹಿತರೊಂದಿಗೆ ಗುರುವಾರ ರಾತ್ರಿ ಜೆ.ಕೆ. ಮೈದಾನದ ಬಳಿ ಬೈಕಿನಲ್ಲಿ ಹೋಗುತ್ತಿದ್ದಾಗ (ತ್ರಿಬಲ್ ರೈಡ್) ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಮೂವರು ಗಾಯಗೊಂಡಿದ್ದು, ಧರ್ಮೇಂದ್ರ ಮೃತಪಟ್ಟಿದ್ದಾರೆ. ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಕ್ಕಿಬಿದ್ದ ಕೊಲೆ ಆರೋಪಿಗಳು
ಮೈಸೂರು: ವ್ಯಕ್ತಿಯೊಬ್ಬನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ನಾಲ್ಕು ಮಂದಿ ಆರೋಪಿಗಳನ್ನು ಒಂದು ವರ್ಷದ ಬಳಿಕ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರು ತಾಲೂಕು ಇಲವಾಲ ನಿವಾಸಿ ಬಸವರಾಜು (43), ಪಡುವಾರಹಳ್ಳಿ ನಿವಾಸಿಗಳಾದ ಜವರಯ್ಯ (40), ಮಹದೇವ (35) ಮತ್ತು ಹಲ್ಲು ಮಹದೇವ (27) ಬಂಧಿತ ಆರೋಪಿಗಳು. ಈ ನಾಲ್ವರು ಸೇರಿ ಪಡುವಾರಹಳ್ಳಿ ನಿವಾಸಿಯಾದ ದೇವರಾಜ ಎಂಬವರನ್ನು ಕೊಲೆ ಮಾಡಿದ್ದರು.
ಪ್ರಕರಣದ ವಿವರ: ಗಾರೆ ಕೆಲಸದ ಮೆಸ್ತ್ರಿಯಾದ ಬಸವರಾಜು ಬಳಿ ದೇವರಾಜ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಪ್ರತಿ ದಿನ ದೇವರಾಜ ಮದ್ಯ ಸೇವಿಸಿ ಕೆಲಸಕ್ಕೆ ಬರುತ್ತಿದ್ದ. ಇದರಿಂದ ಕೆಲಸಕ್ಕೆ ಬಂದ ದೇವರಾಜನನ್ನು ಬಸವರಾಜು ವಾಪಸ್ ಕಳುಹಿಸಿದ್ದಾರೆ. ಇದರಿಂದ ಕುಪಿತಗೊಂಡ ದೇವರಾಜ, ಬಸವರಾಜ ಮಹಿಳೆಯೊಬ್ಬರೊಂದಿಗೆ ಅನೈತಿಕ ಸಂಬಂಧ ಇರಿಸಿರುವುದನ್ನು ಬಹಿರಂಗಪಡಿಸಿದ್ದಾನೆ.
ವ್ಯಕ್ತಿಯೊಬ್ಬ ಮೃತಪಟ್ಟಿದ್ದರಿಂದ ಆ ಶವ ಸಂಸ್ಕಾರಕ್ಕೆ ದೇವರಾಜ ಗೋಕುಲಂ ಸ್ಮಶಾನಕ್ಕೆ ಹೋಗಿದ್ದ. ಇದನ್ನು ಗಮನಿಸಿದ ಬಸವರಾಜು, ತನ್ನ ಸ್ನೇಹಿತರಾದ ಜವರಯ್ಯ, ಮಹದೇವ ಮತ್ತು ಹಲ್ಲು ಮಹದೇವನನ್ನು ಜತೆಗೆ ಕರೆದುಕೊಂಡು ಹೋಗಿದ್ದಾನೆ. ಶವ ಸಂಸ್ಕಾರದ ಬಳಿಕ ಎಲ್ಲರೂ ವಾಪಸ್ ಬಂದಿದ್ದು, ಸ್ಮಶಾನದಲ್ಲಿದ್ದ ದೇವರಾಜಗೆ ಬಸವರಾಜು ಮತ್ತು ಇತರರು ಮದ್ಯ ಕುಡಿಸಿದ್ದಾರೆ. ಬಳಿಕ ಉಸಿರು ಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರು ಗಟ್ಟಿ ದೇವರಾಜ ಮೃತಪಟ್ಟಿರುವುದಾಗಿ ವರದಿ ಬಂತು. ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ್ಚಲೀಸರು, ನಾಲ್ವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಎನ್.ಆರ್. ಉಪ ವಿಭಾಗದ ಎಸಿಪಿ ಟಿ.ಸಿ. ನಾಗರಾಜ ಮಾರ್ಗದರ್ಶನದಲ್ಲಿ ಜಯಲಕ್ಷ್ಮಿಪುರಂ ಠಾಣೆ ಇನ್ಸ್ಪೆಕ್ಟರ್ ಕೃಷ್ಣಪ್ಪ, ಎಸ್ಐಗಳಾದ ಶ್ರೀನಿವಾಸ್, ರಘುನಾಥ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

