'ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಃಸಿದ್ಧ'
ಕ.ಪ್ರ.ವಾರ್ತೆ ಚಿಂತಾಮಣಿ ಮಾ.25
ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಈ ಬಾರಿ ಬಹಳ ಮಹತ್ವವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಬದಲಾವಣೆ ತನ್ನಿ ಎಂದು ಶಾಸಕ ವಿ.ಮುನಿಯಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲೂಕಿನ ಚಿಲಕಲನೇರ್ಪು ಹೋಬಳಿ ಶೆಟ್ಟಿನಾಯಕನಹಳ್ಳಿ ಗ್ರಾಮದಲ್ಲಿ ದಿವಂಗತ ಶ್ರೀನಾಥ್ ಕ್ರಿಕೆಟ್ ಟೂರ್ನ್‌ಮೆಂಟ್ ಹಾಗೂ ಬದ್ರಿ ಯುವಕರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಗ್ರೇಸ್ ಪಕ್ಷವು ಬಹುಮತ ಪಡೆಯುವುದು ಶತಃಸಿದ್ದವೆಂದು ಹೇಳಿದರು.
ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಶ್ರೀಮತಿ ವಾಣಿಕೃಷ್ಣಾರೆಡ್ಡಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ದಿವಂಗತ ಮಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿ ನಂತರ ಉತ್ತರಾಧಿಕಾರಿಯಾದ ನನ್ನನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಿ.ಫಾರಂ ವಿಷಯದಲ್ಲಿ ವಚನ ಭ್ರಷ್ಟರಾಗಿದ್ದಾರೆಂದು ಆರೋಪ ಮಾಡಿದರು. ತಾಲೂಕಿನಲ್ಲಿ 62 ವರ್ಷಗಳಿಂದ ಒಂದೇ ಕುಟುಂಬದ ಸುದೀರ್ಘ ಪಾಲನೆಯಲ್ಲಿದ್ದ ನಗರಸಭೆ ಪಾಲನೆಯನ್ನು ಕಿತ್ತೊಗೆದು ಐತಿಹಾಸಿಕ ಸಾಧನೆ ಮಾಡಿದ ನಗರ ಮತದಾರರನ್ನು ಗೌರವಿಸದ ಜೆ.ಕೆ.ಕೃಷ್ಣಾರೆಡ್ಡಿ ಜನತಾದಳ ನಾಯಕರು ಆತ್ಮ ಪ್ರಶಂಸೆಯಲ್ಲಿ ತೊಡಗಿರುವುದು ಅತ್ಯಂತ ಹಾಸ್ಯಾಸ್ಪದ ಎಂದರು.
ದಾನ ಧರ್ಮಗಳ ಹೆಸರಿನಲ್ಲಿ ರಾಜಕೀಯ ಪ್ರವೇಶ ಮಾಡಿದ ಜೆ.ಕೆ. ಮತದಾರರೊಂದಿಗೆ ನೇರ ಸಂಪರ್ಕವಾಗಲಿ, ಮತದಾರರ ಪಟ್ಟಿಯ ಬಗ್ಗೆ ಪ್ರಾಥಮಿಕ ಜ್ಞಾನವಾಗಲಿ, ಮೂಲಭೂತ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಾರಾಸಗಟಾಗಿ ಖರೀದಿಸಿ, ರಾಜಕೀಯ ಕಲುಷಿತಗೊಳಿಸುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ ಎಂದು ಆರೋಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಜೆ.ಡಿ.ಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಅಶ್ವತ್ಥರೆಡ್ಡಿ, ಶಿವಾರೆಡ್ಡಿ, ರವಣಪ್ಪ, ವೆಂಕಟರೆಡ್ಡಿ, ನಾಗೇಶರೆಡ್ಡಿ, ನಾರಾಯಣಸ್ವಾಮಿ ಸೇರಿದಂತೆ ಹಲವಾರು ಮಂದಿ ಸೇರ್ಪಡೆಗೊಂಡರು. ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷ ನರಸಿಂಹಯ್ಯ, ಜಿಪಂ ಸದಸ್ಯ ಎನ್.ವಿ.ಶ್ರೀರಾಮರೆಡ್ಡಿ, ಮುಖಂಡರಾದ ವಿ.ಬಯ್ಯಣ್ಣ, ಅನಂಪಲ್ಲಿ ಕೃಷ್ಣಾರೆಡ್ಡಿ, ಗೋಡಲಹಳ್ಳಿ ಅಶ್ವತ್ಥರೆಡ್ಡಿ, ಬಾಲರೆಡ್ಡಿಪಲ್ಲಿ ಪ್ರಸಾದ್, ಕೃಷ್ಣಪ್ಪ, ಶ್ರೀನಾಥರೆಡ್ಡಿ, ಸೀತಾರಾಮಶೆಟ್ಟಿ, ಮದ್ದಿರೆಡ್ಡಿ ಹಾಗೂ ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

