ಕೋಲಾರ

'ಗ್ರಾಹಕರ ಉತ್ತಮ ಸೇವೆಗೆ ಬಿಎಸ್‌ಎಲ್‌ಎನ್ ಬದ್ಧ'

Published On :

ಕ.ಪ್ರ.ವಾರ್ತೆ ಮುಳಬಾಗಲು ಮಾ.25
ಸಿಬ್ಬಂದಿ ಕಡಿತ, ವಿದ್ಯುತ್ ಕಡಿತ ಬಿಎಸ್‌ಎಲ್‌ಎಲ್ ಪೈಪ್‌ಲೈನ್‌ಗಳು ಆಳವಡಿಸುವ ಕಡೆಗಳಲ್ಲಿ ನೀರು, ರಸ್ತೆ ಡ್ರೈನ್ ಸೌಕರ್ಯಗಳಿಗಾಗಿ ನಿರಂತರ ರಸ್ತೆ ಅಗೆತ, ಇವುಗಳ ಹೊರತಾಗಿಯೂ ಗ್ರಾಹಕರಿಗೆ ಬಿಎಸ್‌ಎಲ್‌ಎನ್ ಉತ್ತಮ ಸೇವೆ ನೀಡಲು ಶ್ರಮಿಸುತ್ತಿದೆ ಎಂದು ಕೋಲಾರ ಬಿಎಸ್‌ಎನ್‌ಎಲ್ ವಿಭಾಗದ ಡಿಜಿಎಂ ನಿರ್ಮಲಾ ಹೇಳಿದರು.ಪಟ್ಟಣದಲ್ಲಿ ಸೋಮವಾರ ಬಿಎಸ್‌ಎನ್‌ಎಲ್ ವತಿಯಿಂದ ದೂರವಾಣಿ ಗ್ರಾಹಕರ ಸಭೆ ಹಾಗೂ ಮುಕ್ತವಾದ ಸಂವಾದದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಪಟ್ಟಣ ಸೇರಿದಂತೆ 14 ದೂರವಾಣೆ ಕೇಂದ್ರಗಳು, 16 ಟವರ್ ಮತ್ತು 337 ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಗ್ರಾಮಾಂತರ ದೂರವಾಣೆ ಕೇಂದ್ರಗಳಲ್ಲಿ 1500 ಗಳಿಗೆ ನಿರಂತರ ಬ್ರಾಡ್‌ಬಾಂಡ್ ಸೇವೆ ಒದಗಿಸಲಾಗಿದೆ. ಅದರ ಸದುಪಯೋಗ ಪಡೆಯಲು ಅವರು ಕೋರಿದರು. ಕಾರ್ಯಕ್ರಮದಲ್ಲಿ ಸಿಎಒ ರಾಘವನ್, ಎಜಿಎಂ ರಾಮಚಂದ್ರ, ಯಲ್ಲಪ್ಪ, ಎಸ್‌ಡಿಇಗಳಾದ ಕೆ.ಎನ್.ನಿರ್ಮಲ, ಗುಲ್ಜರ್‌ಸಾಬ್ ಮುಂತಾದವರು ಭಾಗವಹಿಸಿದ್ದರು.
ಊರುಕುಂಟೆ ಮಿಟ್ಟೂರು ಗ್ರಾಮದ ವೆಂಕಟಾಚಲ ಮಾತನಾಡಿ, ತಮ್ಮ ಗ್ರಾಮಕ್ಕೆ ಬಿಎಸ್‌ಎನ್‌ಎಲ್ ಟವರ್ ಸೌಲಭ್ಯ ನೀಡಲು ಒತ್ತಾಯಿಸಿದರು.
ಮಡಿವಾಳ ಗ್ರಾಮದ ಜಿ.ಪಾಪಣ್ಣ ಮಾತನಾಡಿ, ಖಾಸಗಿ ದೂರವಾಣಿ ಸಂಸ್ಥೆಗಳು ಸೇವೆ ಸಲ್ಲಿಸಿದಂತೆ ಬಿಎಸ್‌ಎನ್‌ಎಲ್ ಸಹ ಉತ್ತಮ ಸೇವೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.