ಕೋಲಾರ

ಪ್ರಮುಖರ ಹೆಸರು ತಪ್ಪದಂತೆ ಎಚ್ಚರ ವಹಿಸಿ: ಆಯಿಷಾ

Published On :

ಮುಳಬಾಗಲು: ಮತದಾರರ ಕೇಂದ್ರಗಳ ವ್ಯಾಪ್ತಿಗೆ ಬರುವ ಶಾಸಕರು, ಜಿ.ಪಂ., ತಾ.ಪಂ ಮತ್ತು ಗ್ರಾ.ಪಂ. ಸದಸ್ಯರು, ಅತಿ ಗಣ್ಯರು, ಸಮಾಜ ಸೇವಕರು, ಪತ್ರಕರ್ತರು ಮುಂತಾದವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ತಪ್ಪಿಹೋಗದಂತೆ ವಿಶೇಷ ಗಮನ ನೀಡಬೇಕು ಎಂದು ಕೋಲಾರ ಉಪ ವಿಭಾಗಾಧಿಕಾರಿ ಆಯಿಷಾ ಪರ್ವೀನ್ ಸೂಚಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸೋಮವಾರ ಚುನಾವಣಾ ಕಾರ್ಯಗಳನ್ನು ಪರಿಶೀಲಿಸಿದ ಅವರು ಮಾತನಾಡಿದರು. ಇದೇ ಸಂದರ್ಭ ವಿಧಾನಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿ ತಂಡಗಳನ್ನು ರಚಿಸಲಾಗಿದೆ ಎಂದು   ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ತಿಳಿಸಿದರು. ಮುಳಬಾಗಲು ಪಟ್ಟಣ ಪುರಸಭೆ ವ್ಯಾಪ್ತಿ, ಕಸಬಾ ಹೋಬಳಿ ಜಾರಿ ತಂಡದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ವೆಂಕಟಸ್ವಾಮಿ ಮೊ.9740575713, ವೆಂಕಟೇಶಪ್ಪ, ಕಂದಾಯ ನಿರೀಕ್ಷಕರು ಕಸಬಾ ಹೋಬಳಿ ಮೊ. 9760138942, ಬರಕುತುಲ್ಲಾ ಮುಳಬಾಗಲು ಪೊಲೀಸ್ ಠಾಣೆ ಲಪ್ಲತಯಯ್ಟದ 9760138932, ಎನ್.ಕಿರಣಕುಮಾರ್ ಪುರಸಭೆ ಕರ ವಸೂಲಿಗಾರ, ಮುನಿಸ್ವಾಮಿ ಅಬಕಾರಿ ರಕ್ಷಕರು 9448733944 ಹಾಗೂ ತಾಲೂಕಿನ ಆವಣೆ, ತಾಯಲೂರುಬೈರಕೂರು.
ದುಗ್ಗಸಂದ್ರ ಹೋಬಳಿಗಳಲ್ಲಿ ಮುಷೀರ್ ಅಹಮದ್ ಸಹಾಯಕ ಎಂಜನಿಯರ್, ಲೋಕೋಪಯೋಗಿ ಇಲಾಖೆ 9886437676, ಶೋಭನ್ ಬಾಬು ಪ್ರಭಾರ ಕಂದಾಯ ನಿರೀಕ್ಷಕರು ಪುರಸಭೆ 9741522564, ಅರವಿಂದ್ ಗ್ರಾಮ ಲೆಕ್ಕಿಗ ಕಸಬಾ ವೃತ್ತ ಮೊ, 9986071906, ಲಿಂಗಯ್ಯ ಮುಳಬಾಗಲು ಪೊಲೀಸ್ ಠಾಣೆ 9681502545 ವಿಜಯಕುಮಾರ್ ಅಬಕಾರಿ ರಕ್ಷಕ 9738832017 ಅವರನ್ನು ನೇಮಿಸಲಾಗಿದೆ ಎಂದು ರಾಮಮೂರ್ತಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.