ವರ್ತೂರ್ ಪ್ರಕಾಶ್ ಸೋಲಿಸಲು ಕರೆ
ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರವನ್ನು ಹಣದ ಮದದಿಂದ ಕಲುಷಿತಗೊಳಿಸಿರುವ ಸಚಿವ ವರ್ತೂರ್ ಪ್ರಕಾಶ್ ಅವರನ್ನು ಸೋಲಿಸಿ ವರ್ತೂರ್ಗೆ ಕಳುಹಿಸಿ ಎಂದು ಮಾಜಿ ಸಚಿವ, ಜೆಡಿಎಸ್ ಅಭ್ಯರ್ಥಿ ಕೆ.ಶ್ರೀನಿವಾಸಗೌಡ ಮತದಾರರಿಗೆ ಕರೆ ನೀಡಿದ್ದಾರೆ.
ಅವರು ಸೋಮವಾರ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ವಕ್ಕಲೇರಿ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದರು.
ರಾಜ್ಯದೆಲ್ಲೆಡೆ ಕುಮಾರಸ್ವಾಮಿ ಅಲೆ ಇದ್ದು, ಅವರು ಮುಖ್ಯಮಂತ್ರಿಗಳಾದರೆ, ಜಿಲ್ಲೆಗೆ ಶಾಶ್ವತ ನೀರಾವರಿ ತಂದೇ ತರುತ್ತಾರೆಂಬ ಭರವಸೆ ಇದ್ದು, ಮತದಾರ ಬಂಧುಗಳು ಜೆ.ಡಿ.ಎಸ್. ಪಕ್ಷವನ್ನು ಬೆಂಬಲಿಸುವ ಮೂಲಕ ಕುಮಾರಸ್ವಾಮಿ ಅವರ ಕೈ ಬಲಪಡಿಸಲು ತಮ್ಮನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ಕೋರಿದರು.
ರಾಜಕೀಯ ತೆವಲುಗಳಿಗಾಗಿ ಕೊಲೆ ಮಾಡಿಸುವಂತಹ ಬುದ್ದಿ ನಮಗೆ ಹುಟ್ಟಿನಿಂದಲೂ ಬಂದಿಲ್ಲ, ಅದೇನಿದ್ದರೂ ಕೆರೆ-ಕುಂಟೆಗಳನ್ನು ಮಾರಿ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಹೊಡೆದು ಹಣ ದೋಚುವವರ ಬುದ್ಧಿ ಎಂದು ಸಚಿವರ ಹೆಸರು ಹೇಳದೇ ಟೀಕಿಸಿದರು.
ಜಿ.ಪಂ. ಅಧ್ಯಕ್ಷೆ ಚೌಡೇಶ್ವರಿ ರಾಮಚಂದ್ರ, ಜೆಡಿಎಸ್ ತಾಲೂಕು ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲ್, ಮುಖಂಡರಾದ ವಕ್ಕಲೇರಿ ವೆಂಕಟೇಶಪ್ಪ, ವಕ್ಕಲೇರಿ ರಾಮು, ಟಿಎಪಿಎಂಎಸ್ ಅಧ್ಯಕ್ಷ ನಾಗನಾಳ ಸೋಮಣ್ಣ, ಎಪಿಎಂಸಿ ಅಧ್ಯಕ್ಷ ಈರಣ್ಣ, ನಿರ್ದೇಶಕ ಬಣಕನಹಳ್ಳಿ ನಟರಾಜ್, ಎಂ.ಬಾಲಗೋವಿಂದ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

