'ಬಾಳಲು ಬಿಡದ ಶ್ರೀನಿವಾಸಗೌಡ, ಬೆಂಬಲಿಗರು'
ಕೋಲಾರ: ಮಾಜಿ ಸಚಿವ ಶ್ರೀನಿವಾಸಗೌಡ ಮತ್ತವರ ಬೆಂಬಲಿಗರು ತಮ್ಮ ಪತಿ ಬದುಕಿದ್ದಾಗ ನೀಡಿದ ಕಿರುಕುಳ ಸಾಲದೆಂಬಂತೆ ಅವರು ನಿಧನರಾದ ಮೇಲೂ ನಮ್ಮನ್ನು ಬದುಕಲು ಬಿಡುತ್ತಿಲ್ಲ ಎಂದು ಜ್ಯೋತಿ ಬ್ಯಾಂಕ್ ಮುನಿಯಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ತಮ್ಮ ಪತಿ ಬದುಕಿದ್ದಾಗ ಕಳೆದ 2 ತಿಂಗಳಿಂದ ಮಾಜಿ ಸಚಿವರ ಪಟಾಲಂ ತಮಗೆ ನೀಡಿದ ಕಿರುಕುಳದ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ. ನನ್ನ ಪತಿಯವರು ಸಾವಿಗೀಡಾದ ಸ್ಥಳ ಪರಿಶೀಲನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರಷ್ಟೇ ಅಲ್ಲದೆ ಇಡೀ ಗ್ರಾಮಸ್ಥರು ನೋಡಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದು ಅನುಮಾನಸ್ಪದ ಸಾವಾಗಿದ್ದು ತನಿಖೆಗೆ ಒತ್ತಾಯಿಸಲಾಗಿದೆಯೇ ಹೊರತು ಶ್ರೀನಿವಾಸಗೌಡ ಹಾಗೂ ಅವರ ತಂಡ ಈ ಕೊಲೆ ಮಾಡಿದೆ ಎಂದು ಹೇಳಿಲ್ಲ. ಆದರೂ ಜೆಡಿಎಸ್ನವರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಾ ಗ್ರಾಮದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಬಣದ ಮುಖಂಡನ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ್ದಕ್ಕೆ ಅರಗಿಸಿಕೊಳ್ಳಲಾಗದ ಇವರು ವಿನಾಕಾರಣ ಇಲ್ಲಸಲ್ಲದ ದೂರುಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇನ್ನು ಮುಂದೆ ತಮ್ಮ ಪತಿಯ ಹೆಸರನ್ನು ಜೆಡಿಎಸ್ನವರು ಬಳಸಿಕೊಳ್ಳಬಾರದು ಎಂದಿದ್ದಾರೆ. ತಮ್ಮ ಪತಿ ಕಾರ್ಯಗಳು ಮುಗಿದ ನಂತರ ಜನತೆ ಮುಂದೆ ಕೆಲವು ವಿಚಾರ ಬಹಿರಂಗಪಡಿಸುವುದಾಗಿ ಅವರು ತಿಳಿಸಿದ್ದಾರಲ್ಲದೆ, ಅವರನ್ನು ಬದುಕಿದ್ದಾಗಲೂ ಈ ಜೆಡಿಎಸ್ನವರು ಬಿಟ್ಟಿರಲಿಲ್ಲ, ನಿಧನರಾದ ಮೇಲೂ ಕಾಡುತ್ತಿದ್ದಾರೆ. ಇನ್ನಾದರೂ ಈ ವಿಚಾರವನ್ನು ಶ್ರೀನಿವಾಸಗೌಡರು ರಾಜಕೀಯ ದೃಷ್ಟಿಯಿಂದ ನೋಡುವುದನ್ನು ಬಿಡಲಿ ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

