ಮನೆಗೆ ನುಗ್ಗಿ ಚಿನ್ನಾಭರಣ ಲೂಟಿ
ಕ.ಪ್ರ.ವಾರ್ತೆ ಚನ್ನಪಟ್ಟಣ ಮಾ.10
ಹಗಲುವೇಳೆಯೇ ಮನೆ ಕಳವು ಮಾಡಿರುವ, ಮನೆಗೆ ನುಗ್ಗಿ ಗೃಹಿಣಿಯ ಸರ ಕಳವು ಮಾಡಲು ಪ್ರಯತ್ನಿಸಿರುವ ಘಟನೆ ಪಟ್ಟಣದ ಕೋದಂಡ ರಾಮ ಬಡಾವಣೆಯಲ್ಲಿ ಸಂಭವಿಸಿದೆ.
ಬುಧವಾರ ಬೆಳಿಗ್ಗೆ 9 ಗಂಟೆಯ ಸುಮಾರಿನಲ್ಲಿ ಕೋದಂಡರಾಮ ಬಡಾವಣೆ 2ನೇ ಅಡ್ಡರಸ್ತೆಯಲ್ಲಿರುವ ರಾಮಣ್ಣ ಎಂಬುವರ ಮನೆಗೆ ನುಗ್ಗಿದ ಕಳ್ಳರು 1ಲಕ್ಷ ರು. ನಗದು 1.18 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ದೂರು ದಾಖಲಿಸಿ ಕೊಂಡಿರುವ ಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗೃಹಿಣಿ ಮೇಲೆ ಹಲ್ಲೆ : ಮನೆಗೆ ನುಗ್ಗಿ ಗೃಹಿಣಿಯ ಮಾಂಗಲ್ಯ ಸರ ಕಸಿಯಲು ಯತ್ನಿಸಿದ ಕಳ್ಳರು ಸರ ಕಳವು ಮಾಡಲು ಅಡ್ಡಿಪಡಿಸಿದ ಮಹಿಳೆಯ ಕುತ್ತಿಗೆ ಹಿಸುಕಿ ತೀವ್ರ ಗಾಯ ಗೊಳಿಸಿರುವ ಘಟನೆ ಕೊದಂಡ ರಾಮ ಬಡಾವಣೆ ಒಂದನೇ ಅಡ್ಡರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ವಾಸಿ ಲಕ್ಷ್ಮೀನಾರಾಯಣ್ ಎಂಬುವರ ಪತ್ನಿ ಪ್ರಭಾವತಿ ಸರಗಳ್ಳರಿಂದ ಹಲ್ಲೆಗೀಡಾಗಿ ತೀವ್ರ ಅಸ್ವಸ್ಥ ಗೊಂಡಿರುವ ಗೃಹಿಣಿಯಾಗಿದ್ದು, ಮಧ್ಯಾಹ್ನದ ಸಮಯದಲ್ಲಿ ಹಿಂಭಾಗದ ಕಾಂಪೌಂಡ್ ಹಾರಿ ಮನೆಗೆ ನುಗ್ಗಿದ ಕಳ್ಳರು ಸರಕಸಿಯಲು ಮುಂದಾಗಿದ್ದಾರೆ. ಇದಕ್ಕೆ ಗೃಹಿಣಿ ಪ್ರತಿರೋಧ ವ್ಯಕ್ತ ಪಡಿಸುತ್ತಿರುವಾಗಲೇ ಗದ್ದಲ ಕೇಳಿ ಮುಂಭಾಗದ ಪಿಲ್ಲೇಚರಿಯಲ್ಲಿದ್ದ ಅವರ ಪತಿ ಮನೆಯೊಳಗೆ ಬರುತ್ತಿದ್ದಂತೆ ಕುಪಿತಗೊಂಡ ಕಳ್ಳರು ಪ್ರಭಾವತಿಯ ಕುತ್ತಿಗೆಯನ್ನು ಬಲವಾಗಿ ಹಿಸುಕಿ ಪರಾರಿಯಾಗಿದ್ದಾರೆ. ತೀವ್ರ ಅಸ್ವಸ್ಥ ಗೊಂಡಿರುವ ಪ್ರಭಾವತಿಯನ್ನು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುರ ಪೊಲೀಸರು ದೂರು ದಾಖಲಿಸಿ ಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

