ಲಂಚ: ಅನುಷ್ಠಾನಾಧಿಕಾರಿ ಬಂಧನ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಮಾ.27
ಫಲಾನುಭವಿಗೆ ಸಹಾಯ ಧನದ ಚೆಕ್ ನೀಡಲು ರು. 2,000 ಲಂಚ ಸ್ವೀಕರಿಸುತ್ತಿದ್ದ ನಗರಸಭೆ ರೋಜಾಗಾರ್ ಯೋಜನೆಯ ಸಂಯೋಜನಾಧಿಕಾರಿಯೊಬ್ಬರು ಬುಧವಾರ ಸ್ಥಳೀಯ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಎಸ್ಜೆಆರ್ವೈ ಕಾರ್ಯಕ್ರಮದ (ದ್ವಿತೀಯ ದರ್ಜೆ ಸಹಾಯಕರು) ಅನುಷ್ಠಾನಾಧಿಕಾರಿ ಗಿರಿಜಮ್ಮ (42 ವರ್ಷ) ಫಲಾನುಭವಿಯಿಂದ ಲಂಚವನ್ನು ಪಡೆದುಕೊಳ್ಳುವಾಗ ಸಿಕ್ಕಿ ಬಿದ್ದವರು. ನಗರದ ನಯಿಮಾ ಬಾಬು ಎಂಬ ಮಹಿಳೆ ರೇಷ್ಮೆ ಉದ್ಯಮ ಕೈಗೊಳ್ಳಲು ಎಸ್ಜೆಆರ್ವೈ ಯೋಜನೆಯಡಿ ಸಹಾಯ ಧನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅರ್ಹ ಫಲಾನುಭವಿಯಾಗಿ ಆಯ್ಕೆಯಾಗಿದ್ದರು. ಇದರಿಂದ ಇವರಿಗೆ 25 ಸಾವಿರ ರು. ಸಬ್ಸಿಡಿಯಲ್ಲಿ ರು. 1 ಲಕ್ಷ ಸಹಾಯ ಧನ ಸಿಕ್ಕಿದೆ. ಈ ಹಣದ ಚೆಕ್ ಅನ್ನು ಪಡೆದುಕೊಳ್ಳಲು ನಗರಸಭೆಯ ಎಸ್ಜೆಆರ್ವೈ ಯೋಜನಾ ಕಚೇರಿಗೆ ನಯಿಮಾಬಾಬು ಸಾಕಷ್ಟು ಬಾರಿ ಅಲೆದಾಡಿದ್ದು ಗಿರಿಜಮ್ಮ 10 ಸಾವಿರ ರೂ ಲಂಚವನ್ನು ಕೇಳಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಕೊನೆಗೆ 8 ಸಾವಿರ ಫಿಕ್ಸ್ ಮಾಡಿಕೊಂಡು ನಯಿಮಾಬಾಬು ಅವರಿಂದ ಮಂಗಳವಾರ 6 ಸಾವಿರ ಪಡೆದುಕೊಂಡಿದ್ದಾರೆ.ಬುಧವಾರ ಉಳಿದ ಹಣ 2 ಸಾವಿರ ಕೈಗೆ ತೆಗೆದುಕೊಳ್ಳುತ್ತಿದ್ದಂತೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಸಾಕ್ಷಿ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಎಸ್ಪಿ ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಸಬ್ಇನ್ಸ್ಪೆಕ್ಟರ್ ಮಂಜೇಶ್ಗೌಡ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

