ಕೋಲಾರ

ಆಟೋ ಚಾಲಕರು ದಾಖಲೆ ನೀಡಿ ಕೋಡ್ ಪಡೆಯಲು ಸಿಐ ಸೂಚನೆ

Published On :

ಕ.ಪ್ರ.ವಾರ್ತೆ    ಚಿಕ್ಕಬಳ್ಳಾಪುರ    ಅ. 3
ಮಾಸಾಂತ್ಯದೊಳಗೆ ಆಟೋ ಚಾಲಕರು ತಮ್ಮ ವಾಹನದ ಅಧಿಕೃತ ದಾಖಲೆಗಳೊಂದಿಗೆ ಸಂಚಾರಿ ಪೊಲೀಸ್ ಠಾಣೆಗೆ ತೆರಳಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ಆರಕ್ಷಕ ವೃತ್ತ ನಿರೀಕ್ಷಕ ಬಾಲಾಜಿಸಿಂಗ್ ಸಲಹೆ ನೀಡಿದರು.
ಚಿಕ್ಕಬಳ್ಳಾಪುರಕ್ಕೆ ನೂತನವಾಗಿ ವರ್ಗವಾಗಿ ಬಂದ ನಂತರ ಬಾಲಾಜಿಸಿಂಗ್ ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ಆಟೋ ಚಾಲಕ-ಮಾಲೀಕರ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಕೆಂದ್ರ ಚಿಕ್ಕಬಳ್ಳಾಪುರದಲ್ಲಿ ಸಂಚಾರಿ ಗುಣಮಟ್ಟವನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಆಟೋ ಚಾಲಕರೂ ಸಂಚಾರಿ ಕಾನೂನು ಪರಿಪಾಲನೆ ಜೊತೆಗೆ ಶಿಸ್ತು ಮತ್ತು ಸಂಯಮ ಕಾಪಾಡಬೇಕಾಗಿದೆ ಎಂದು ತಿಳಿಸಿದರು.
ತಮ್ಮ ಆಟೋಗಳ ಅಧಿಕೃತ ದಾಖಲೆಗಳನ್ನು ಹಾಜರು ಪಡಿಸಿ ಮಾಸಾಂತ್ಯದೊಳಗೆ ತಮ್ಮ ಆಟೋಗಳ ನೋಂದಣಿ ಮಾಡಿಸಿ ಸಂಖ್ಯೆಯನ್ನು ಪಡೆದುಕೊಳ್ಳಬೇಕು. ನೋಂದಣಿ ಇಲ್ಲದ ಆಟೋಗಳಿಗೆ ಮುಂದಿನ ದಿನಗಳಲ್ಲಿ ಆಟೋ ನಿಲ್ದಾಣಗಳಲ್ಲಿ ನಿಲ್ಲಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಮಹಿಳೆಯರು ಆಟೋಗಳಲ್ಲಿ ನಿರ್ಭಯವಾಗಿ ಓಡಾಡುವ ಸಲುವಾಗಿ ಚಾಲಕರು ಸಭ್ಯತೆ ರೂಢಿಸಿಕೊಳ್ಳಬೇಕು. ತಮ್ಮ ಆಟೋಗಳನ್ನು ಹರಸಿ ಬರುವ ಪ್ರಯಾಣಿಕರೊಂದಿಗೆ ವಿನಯದಿಂದ ನಡೆದುಕೊಳ್ಳಬೇಕು ಎಂದರು.
ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಡಾಂಬು ಶ್ರೀನಿವಾಸ್ ಮಾತನಾಡಿ, ನಗರದಲ್ಲಿ ರಸ್ತೆಗಳು ತೀವ್ರ ಹದಗೆಟ್ಟಿದ್ದು ದುರಸ್ತಿಪಡಿಸುವ ನಿಟ್ಟಿನಲ್ಲಿ ನಗರಸಭೆ ಆಯುಕ್ತರೊಂದಿಗೆ ಸಮಾಲೋಚನೆ ನಡೆಸಿ ಆಟೋಗಳು ವ್ಯವಸ್ಥಿತವಾಗಿ ಓಡಾಡಲು ಅನುವಾಗುವಂತೆ ಮಾಡಬೇಕೆಂದು ಮನವಿ ಮಾಡಿದರು.
ಕಾರ್ಯದರ್ಶಿ ಕೆ.ಪಿ. ನವಮೋಹನ್ ಮಾತನಾಡಿ, ಅಟೋ ಚಾಲಕರು ಮಧ್ಯಮ ವರ್ಗದಿಂದಲೇ ಬಂದವರಾಗಿದ್ದು ಆಟೋ ಚಾಲನೆ ಮಾಡುವ ಸಂದರ್ಭದಲ್ಲಿ ಚಾಲನಾ ಪರವಾನಗಿ ಸೇರಿದಂತೆ ಆಟೋವಿನ ಎಲ್ಲಾ ದಾಖಲಾತಿಗಳನ್ನು ಹೊಂದಿ ವ್ಯವಸ್ಥಿತವಾಗಿ ನಗರದಲ್ಲಿ ಓಡಾಡುವಂತೆ ಅನುವು ಮಾಡಿಕೊಡಬೇಕು. ನಗರದಲ್ಲಿ ಪರವಾನಗಿ ಮತ್ತು ದಾಖಲಾತಿಗಳೇ ಇಲ್ಲದ ಹಾಗೂ ಆಟೋ ಕಂಡೀಶನ್ ಇಲ್ಲದ ಆಟೋಗಳು ಜಾಸ್ತಿ ಓಡಾಡುತ್ತಿದ್ದು ಇವುಗಳ ಸರಿಪಡಿಸುವಿಕೆಗೆ ಕಾಲಾವಕಾಶ ನೀಡಬೇಕೆಂದರು. ಸಂಚಾರಿ ಪೊಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.