ಪತಿ, ಪತ್ನಿಯರ ದುಡಿಮೆಯಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ
ಕೋಲಾರ: ಪ್ರತಿಯೊಂದು ಕುಟುಂಬದಲ್ಲಿ ಗಂಡನ ಜೊತೆಗೆ ಹೆಂಡತಿಯು ದುಡಿಯುವುದರಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಹಿಳೆಯರನ್ನು ಕೇವಲ ನಾಲ್ಕು ಗೋಡೆಗಳ ಮಧ್ಯ ಇರುವಂತೆ ಮಾಡಿದರೆ ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ನಾಗರಿಕ ಸಮಾಜ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು, ಹೆಣ್ಣು ಸಹ ದುಡಿಯಲು ಸಮರ್ಥಳು ಎಂಬ ಪರಿಕಲ್ಪನೆ ಮೈಗೂಡಿಸಿಕೊಂಡಲ್ಲಿ ದೇಶದ ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ ಎಂದರು.
ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎಂಬ ಮಾತು ಮಾಯವಾಗಬೇಕು, ಎಲ್ಲಾ ರಂಗಗಳಲ್ಲಿ ಮಹಿಳೆ ಮುಂದೆ ಬರಲು ಅವಕಾಶ ಕಲ್ಪಿಸುವ ಮೂಲಕ ಮಹಿಳೆಗೆ ಹೆಚ್ಚಿನ ಗೌರವ ಸಮಾಜದಲ್ಲಿ ಸಿಗುವಂತಾದರೆ ಮಾತ್ರ ದೇಶದ ಪ್ರಗತಿ ಸಾಧ್ಯವೆಂದು ಒತ್ತಿ ಹೇಳಿದರು. ನಮ್ಮಲ್ಲಿನ ಆಚಾರ-ವಿಚಾರಗಳಿಂದ ಸಮಾಜ ಬದಲಾಗುತ್ತಿದೆ, ಮಹಿಳೆಯರು ಆತ್ಮಸ್ಥೈರ್ಯ ಬೆಳೆಸಿಕೊಂಡು ಮನೆಗೆ ನಾಂದದೀಪವಾಗಬೇಕು, ಗಂಡನ ಜೊತೆ ತಾನೂ ದುಡಿಯುವ ಮೂಲಕ ಕುಟುಂಬದ ಶ್ರೇಯೋಭಿವೃದ್ಧಿಗೆ ಪ್ರಯತ್ನಿಸಿದಾಗ ಪ್ರತಿಯೊಂದು ಮನೆಯಲ್ಲಿ ಸದಾ ಸಂತೋಷ ಕಾಣಬಹುದಾಗಿದೆ ಎಂದ ಜಿಲ್ಲಾಧಿಕಾರಿಗಳು, ಹಕ್ಕುಗಳನ್ನು ಹೇಳುವ ಜನರು ಭಾದ್ಯತೆಗಳಿಂದ ದೂರ ಸರಿಯುವುದು ಸರಿಯಲ್ಲ. ಸರ್ಕಾರಿ ಉದ್ಯೋಗವೇ ಬೇಕೆಂಬ ಧೋರಣೆ ಬಿಟ್ಟು ಸ್ವಂತವಾಗಿ ಏನಾದರೂ ಉದ್ಯಮ ಆರಂಭಿಸಿ ಸ್ವಾವಲಂಬಿಗಳಾಗಿ ಬದುಕಲು ಅವಕಾಶಗಳಿವೆ ಎಂದು ತಿಳಿಸಿದರು.
ಕಾಲೇಜಿಗೆ ಮೂಲ ಸೌಕರ್ಯ: 3265 ವಿದ್ಯಾರ್ಥಿಗಳು ಹಾಗೂ 100ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡಿರುವ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದು ದುರದೃಷ್ಟಕರ, ವಿದ್ಯಾ ಮಂದಿರದಲ್ಲಿ ನೀರು, ಗಾಳಿ, ಬೆಳಕು ಪರಿಪಕ್ವವಾಗಿದ್ದಲ್ಲಿ ಮಾತ್ರ ವಿದ್ಯಾರ್ಥಿಗಳು ನೆಮ್ಮದಿಯಿಂದ ಪಾಠ ಕೇಳಲು ಆಗುತ್ತದೆ. ಅದೇ ರೀತಿ ಬೋಧಕರಿಗೂ ಅನುಕೂಲವಾಗುತ್ತದೆ, ಕಾಲೇಜಿಗೆ ನೀರಿನ ವ್ಯವಸ್ಥೆ ಕೋರಲಾಗಿದ್ದು ಅಂತರ್ಜಲ ತಜ್ಞರಿಂದ ಸಮೀಕ್ಷೆ ಮಾಡಿಸಿ ಸೂಕ್ತ ಸ್ಥಳ ತೋರಿಸಿದಲ್ಲಿ ಕೊಳವೆ ಬಾವಿ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

