ಕೋಲಾರ

ಪ್ರಾಮಾಣಿಕತೆ ಅಭಿವೃದ್ಧಿಗೆ ಪೂರಕ

Published On :

ಶಿಡ್ಲಘಟ್ಟ: ಆಡಳಿತ ಮಂಡಳಿ ಪ್ರಾಮಾಣಿಕತೆಯಿಂದ ನಡೆದರೆ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯವೆಂದು ಶಾಸಕ ಎಂ. ರಾಜಣ್ಣ ಹೇಳಿದರು.
ತಾಲೂಕಿನ ಮೇಲೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಮೇಲಂತಸ್ತಿನ ನೂತನ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಇತ್ತಿಚೆಗೆ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿದ್ದು ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಹಾಗೂ ಉತ್ಪಾದಕರು ಹೆಚ್ಚಿನ ಸಹಕಾರವನ್ನು ನೀಡಬೇಕು ಎಂದರು.
ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ. ಗುಡಿಯಪ್ಪ ಮಾತನಾಡಿ, ಸಹಕಾರಿ ಸಂಘಗಳ ಮುಖಾಂತರ ರೈತರನ್ನು ಸಬಲರನ್ನಾಗಿಸಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ, ಹಾಲಿನ ಉತ್ಪಾದನೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ, ಉತ್ಪಾದಕರು ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಶ್ರೀನಿವಾಸ್, ಪಶುವೈಧ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಜಯಶೀಲರೆಡ್ಡಿ, ಬಿ.ಎನ್. ರವಿಕುಮಾರ್, ಆರ್.ಎ. ಉಮೇಶ್, ಕೆ.ಎಸ್. ಮಂಜುನಾಥ್, ಎಂ. ಮುನಿಕೃಷ್ಣಪ್ಪ, ಕೋ-ಚಿ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಿ.ಎಂ. ಚಂದ್ರಪ್ಪ, ರಮೇಶ್, ಸೂರ್ಯನಾರಾಯಣಗೌಡ ಹಾಜರಿದ್ದರು.

ಎಲ್‌ಐಸಿ ಪ್ರೀಮಿಯಂ ಕನೆಕ್ಷನ್ ಸೆಂಟರ್ ಉದ್ಘಾಟನೆ
ಶಿಡ್ಲಘಟ್ಟ:
ಎಲ್‌ಐಸಿ ಪಾಲಸಿದಾರರು ತಮ್ಮ ಎಲ್ಲಾ ವ್ಯವಹಾರಗಳಿಗಾಗಿ ಚಿಂತಾಮಣಿ-ಚಿಕ್ಕಬಳ್ಳಾಪುರ ಕಚೇರಿಗಳಿಗೆ ಹೋಗಿ ಹಣ ಹಾಗೂ ಸಮಯ ವ್ಯರ್ಥ ಮಾಡುವದನ್ನು ತಪ್ಪಿಸಲು ಶಿಡ್ಲಘಟ್ಟದಲ್ಲೇ ಮಿನಿ ಕಚೇರಿ ಸ್ಥಾಪಿಸಿ ಎಲ್ಲಾ ಸೇವೆ ನೀಡುವ ಕನಸು ನನಸಾಗಿದೆ ಎಂದು ಚಿಂತಾಮಣಿ ಎಲ್‌ಐಸಿ ಕಚೇರಿ ಅಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಪಟ್ಟಣದ ದಿಬ್ಬೂರಹಳ್ಳಿ ರಸ್ತೆಯ ಪ್ರಥಮದರ್ಜೆ ಕಾಲೇಜು ಮುಂಭಾಗದ ಎಲ್‌ಐಸಿ ಡಿವಿಜನಲ್ ಕ್ಲಬ್ ಸದಸ್ಯ ಕನಕಪ್ರಸಾದ್ ಕಚೇರಿಯಲ್ಲೆ ಎಲ್‌ಐಸಿ ಅಧಿಕೃತ ಪ್ರೀಮಿಯಂ ಕನೆಕ್ಷನ್ ಸೆಂಟರ್ ಸ್ಥಾಪಿಸಿ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಪಾಲಸಿದಾರರು ನಗದುಹಣ ಪಾವತಿಸಲು, ಸಾಲಪಡೆಯಲು, ತಮ್ಮ ಯಾವುದೇ ರೀತಿಯ ವಿಚಾರಣೆ ಇಲ್ಲೇ ಮಾಡಬಹುದಾಗಿದೆ ಎಂದರು.
ಶಾಸಕ ಎಂ. ರಾಜಣ್ಣ, ಅಪ್ಸರ್ ಪಾಷಾ, ಕೆ.ವಿ. ಶ್ರೀನಿವಾಸಾಚಾರ್, ವೆಂಕಟೇಶ್, ಎಲ್.ಐ.ಸಿ ಅಭಿವೃದ್ಧಿಅಧಿಕಾರಿ ಮೋಹನ್ ದಾಸ್, ಸಿಬ್ಬಂದಿ ಲಕ್ಷ್ಮಯ್ಯ, ಎಲ್.ಐ.ಸಿ ಪ್ರತಿನಿಧಿಗಳಾದ ನಾಗರಾಜ್, ನಟರಾಜ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.