ಕೋಲಾರ

ನಿವೃತ್ತ ಅಧಿಕಾರಿಗೆ ಬೀಳ್ಕೊಡುಗೆ

Published On :

ಮಾಲೂರು: ಸೇವೆಯ ಪ್ರಾಮಾಣಿಕತೆ ನಿವೃತ್ತಿಯ ಬೀಳ್ಕೊಡುಗೆಯಲ್ಲಿ ಕಾಣಲಿದೆ ಎಂಬುಂದಕ್ಕೆ ಇಲ್ಲಿನ ಪೋಸ್ಟ್ ಮಾಸ್ತರ್ ಬೀಳ್ಕೊಡುಗೆ ಸಮಾರಂಭಕ್ಕೆ ಸೇರಿರುವ ಜನರೇ ಸಾಕ್ಷಿ ಎಂದು ಜಿಲ್ಲಾ ಉಪ ಅಂಚೆ ಅಧೀಕ್ಷಕ ಶಿವಶಂಕರ ಪ್ರಸಾದ್ ಹೇಳಿದರು.
ಪಟ್ಟಣದ ಕೃಷಿಕ ಸಮಾಜದಲ್ಲಿ ಸ್ಥಳೀಯ ಅಂಚೇ ಕಚೇರಿ ಸಿಬ್ಬಂದಿ ಇಲ್ಲಿಂದ ನಿವೃತ್ತಿಗೊಂಡ ಇಲ್ಲಿನ ಅಂಚೆ ಕಚೇರಿಯ ಗ್ರೇಡ್ ಒನ್ ಪೋಸ್ಟ್ ಮಾಸ್ತರ್ ವಿ. ಶ್ರೀರಾಮಪ್ಪ ಅವರನ್ನು ಸನ್ಮಾನಿಸಿ ನಂತರ ಮಾತನಾಡಿ, ಅಂಚೆ ಕಚೇರಿಯಲ್ಲಿ ಅತಿ ಜವಾಬ್ದಾರಿಯುತ ಕಾರ್ಯನಿರ್ವಹಿಸಬೇಕಾಗಿದ್ದು,ಅದನ್ನು ಸಮರ್ಥವಾಗಿ ನಿರ್ವಹಿಸುವ ಜತೆಗೆ ಸಾರ್ವಜನಿಕರು, ಸಿಬ್ಬಂದಿಯೊಡನೆ ಸೌಹಾರ್ದ ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಎಎಸ್‌ಪಿ ಸುಬ್ಬರಾಯ ಫೈ, ನಿವೃತ್ತ ಅಂಚೆ ಅಧೀಕ್ಷಕ ನೀಲಪ್ಪ ನಾಯಕ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿ ಪೋಸ್ಟ್‌ಮ್ಯಾನ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಕೋಲಾರದ ಅಮೀರ್ ಜಾನ್, ಅಣ್ಣಯ್ಯಪ್ಪ, ನಾರಾಯಣಪ್ಪ ಹಾಗೂ ಬಂಗಾರಪೇಟೆಯ ಎನ್. ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಎಲ್ಲ ಅಂಚೆ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಅಂಚೆ ಕಚೇರಿಯ ಪೋಸ್ಟ್ ಮಾಸ್ತರ್ ಲೀಲಾವತಿ, ಕೆ.ನಾಗರಾಜ್, ವೆಂಕಟಸ್ವಾಮಿ, ಮುನಿಸ್ವಾಮಿ, ಪ್ರವೀಣ್ ಕುಮಾರ್, ನೇತ್ರಾವತಿ, ಎಚ್. ಕೃಷ್ಣಪ್ಪ, ಟೇಕಲ್ ಆನಂದ್, ಅಮರನಾಥ್ ರೆಡ್ಡಿ ಇದ್ದರು.

ಪೊಲೀಸ್ ಅಧಿಕಾರಿಗಳ ವರ್ಗಾವಣೆ
ಕೆಜಿಎಫ್: ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಬ್ ಇನ್ಸ್‌ಪೆಕ್ಟರ್‌ಗಳನ್ನು ಇತರೆ ಠಾಣೆಗಳಿಗೆ ವರ್ಗಾಯಿಸುವಂತೆ ಪೊಲೀಸ್ ಮಹಾನಿರ್ದೇಶನಾಲಯ ಆದೇಶ ಹೊರಡಿಸಿದೆ.
   ಕೆಜಿಎಫ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎಸ್‌ಐಗಳಿಗೆ ಒಂದು ವರ್ಷ ಅವಧಿ ಮುಗಿದಿದ್ದು, ಈ ಹಿನ್ನಲೆಯಲ್ಲಿ ವರ್ಗಾವಣೆಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ರಾಬರ್ಟ್‌ಸನ್‌ಪೇಟೆ ಠಾಣಾ ಪಿಎಸ್‌ಐ ರಂಗಸ್ವಾಮಯ್ಯ ಮತ್ತು ಅಪರಾಧ ವಿಭಾಗಕ್ಕೆ ಪಿಎಸ್‌ಐ ಶ್ರೀನಿವಾಸ್, ಆಂಡ್ರಸನ್‌ಪೇಟೆ ಠಾಣಾ ಪಿಎಸ್‌ಐ ಎಲ್.ಆಂಜಪ್ಪ, ಚಾಂಪಿಯನ್‌ರೀಫ್ ಠಾಣಾ ಪಿಎಸ್‌ಐ ಮಧುಸೂದನ್, ಉರಿಗಾಂ ಅಪರಾಧ ವಿಭಾಗಕ್ಕೆ ಪಿಎಸ್‌ಐ ನಾರಾಯಣಸ್ವಾಮಿ, ಬೆಮೆಲ್ ನಗರ ಠಾಣಾ ಪಿಎಸ್‌ಐ ವಂಸಂತ್, ಬೇತಮಂಗಲ ಠಾಣಾ ಪಿಎಸ್‌ಐ ಜಗದೀಶ್ ಅವರನ್ನು ವರ್ಗಾವಣೆ ಗೊಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.