ಕೋಳಿಫಾರಂ ತ್ಯಾಜ್ಯದಿಂದ ರೋಗ ಭೀತಿ
ಗೌರಿಬಿದನೂರು: ತಾಲೂಕಿನ ಚಂದನದೂರು ರಸ್ತೆಯ ಕೊರಸಿಗೆ ನಂಜಮ್ಮಮಠದ ಬಳಿಯಲ್ಲಿರುವ ಲೋಟಸ್ ಕೋಳಿಫಾರಂನ ತ್ಯಾಜ್ಯದಿಂದ ವಿಚಿತ್ರ ಬಣ್ಣಗಳುಳ್ಳ ನೋಣಗಳು ಉತ್ಪತ್ತಿಯಾಗಿ ಅವುಗಳಿಂದ ಸುತ್ತಮುತ್ತಲ 10 ಹಳ್ಳಿಗಳಿಗೆ ಸೋಂಕಿನಿಂದ ರೋಗಗಳು ಬರುತ್ತಿದ್ದು ತಕ್ಷಣವೇ ಕೋಳಿಫಾರಂ ಮುಚ್ಚಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ ನಡೆಸಿತು.
ಕೋಳಿ ಫಾರಂನಿಂದ ಉಂಟಾಗುವ ತ್ಯಾಜ್ಯ ಕಶ್ಮಲಗಳಿಂದ ಉತ್ಪತ್ತಿಯಾಗುತ್ತಿದ್ದ ಬಣ್ಣಬಣ್ಣಗಳುಳ್ಳ ನೊಣಗಳು ಸುತ್ತಮುತ್ತಲಿನ ಹಳ್ಳಿಗಳಲ್ಲಿ ನುಗ್ಗಿ ಊಟ ಮಾಡುವಾಗ, ತಿಂಡಿ ತಿನ್ನುವಾಗ ಊಟದ ತಟ್ಟೆಗಳಲ್ಲಿಯೇ ಬೀಳುತ್ತಿತ್ತು.
ಮಕ್ಕಳ ಬಿಸಿ ಊಟಕ್ಕೆ ನೊಣಮುತ್ತುತ್ತಿತ್ತು, ಹಸುಗಳಲ್ಲಿ ಹಾಲು ಕರೆಯಲು ಸಾಧ್ಯವಾಗದಷ್ಟು ನೊಣಗಳ ಕಾಟ ಹೆಚ್ಚಿತ್ತು ಹಾಗೂ ಜ್ವರ, ಕೆಮ್ಮು, ನೆಗಡಿ ರೋಗಗಳಿಗೆ ತುತ್ತಾಗಿದ್ದ ಜನ ಇಡಗೂರು ಗ್ರಾಪಂ, ದೊಡ್ಡಕುರುಗೋಡು ಗ್ರಾಪಂ್ತ, ಹಾಲಗಾನಹಳ್ಳಿ ಪಂಚಾಯ್ತಿ ಕಾರ್ಯಾಲಯದಿಂದ ಲಿಖಿತ ಎಚ್ಚರಿಕೆ ನೋಟೀಸ್ ನೀಡಿದ್ದರೂ ಲೋಟಸ್ ಕಂಪನಿಯು ಈ ಬಗ್ಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ.ಇದರಿಂದ ನೊಂದ ಸಾರ್ವಜನಿಕರು ಕರ್ನಾಟಕ ರೈತಸಂಘ, ಹಸಿರುಸೇನೆ ಸಂಘಟನೆಯ ಮೂಲಕ ಲೋಟಸ್ ಕೋಳಿ ಫಾರಂ ಬಳಿ ಪ್ರತಿಭಟನೆ ನಡೆಸಿ ಸರ್ಕಾರ ತಕ್ಷಣವೇ ಈ ಕೋಳಿಫಾರಂನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

