ಅಶ್ವತ್ಥ ವೃಕ್ಷಕ್ಕೆ ಆವೃಕ್ಷ ಛೇದನ ಶಾಂತಿ ಹೋಮ
ಕ.ಪ್ರ.ವಾರ್ತೆ ಗೌರಿಬಿದನೂರು ಸೆ.19
ಸೆ. 12ರಂದು ನೆಲಕ್ಕುರುಳಿದ್ದ ತಾಲೂಕಿನ ಪೌರಾಣಿಕ ಪುಣ್ಯಕ್ಷೇತ್ರ ಹಾಗೂ ಐತಿಹಾಸಿಕ ಸ್ಥಳವಾದ ವಿದುರಾಶ್ವತ್ಥದ ಅಶ್ವತ್ಥವೃಕ್ಷಕ್ಕೆ ಆವೃಕ್ಷ ಛೇದನ ಶಾಂತಿ ಮತ್ತು ಕಲಾಕರ್ಷಣಾ ಹೋಮ ಮತ್ತು ಹವನವನ್ನು ಬೆಂಗಳೂರಿನ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವೈಕಾನಸ ಆಗಮ ಪಂಡಿತರಾದ ರಘನಾಥ ಭಟ್ಟರು ಮತ್ತು 4 ಜನ ಉಪಆಗಮಿಕರ ತಂಡದೊಂದಿಗೆ ವಿಧಿವತ್ತಾಗಿ ನೆರವೇರಿಸಿದರು. ಸುಮಾರು 5600 ವರ್ಷಗಳಷ್ಟು ಹಳೆಯದಾದ ಮರವು ವರ್ಷಗಳು ಕಳೆದಂತೆ ಒಂದೊಂದೇ ಕೊಂಬೆ ಕಳೆದುಕೊಳ್ಳುತ್ತಿತ್ತಾದರೂ ಇದರ ವಿಶೇಷವೆಂದರೆ ಒಂದು ಬೇರು ಮುರಿಯುವ ಹೊತ್ತಿಗೆ ಮತ್ತೊಂದು ಬೇರು ಹುಟ್ಟಿರುತ್ತದೆ. ಈಗಾಗಲೇ ಸುಮಾರು 5 ಅಡಿ ಎತ್ತರವಿರುವ ಹೊಸ ಚಿಗುರಿನ ಕೊಂಬೆ ಹುಟ್ಟಿಕೊಂಡಿದೆ.
ಈ ಮರ ಬಿದ್ದಿರುವುದರಿಂದ ಜನಕ್ಕಾಗಿ, ಕ್ಷೇತ್ರಕ್ಕಾಗಲೀ, ರಾಷ್ಟ್ರಕ್ಕಾಗಲೀ ಯಾವುದೇ ಕೇಡಾಗಲೀ ತೊಂದರೆಯಾಗಲೀ ಇಲ್ಲ. ಇದು ಪ್ರಕೃತಿ ಸಹಜವಾಗಿ ಬಿದ್ದಿದೆ ಎಂದು ವೈಖಾನಸಾಗಮ ಪಂಡಿತರಾದ ರಘುನಾಥ ಭಟ್ಟರು ತಿಳಿಸಿದರು. ವೃಕ್ಷವು ದ್ವಾಪರಯುಗ ಹಾಗೂ ಕಲಿಯುಗ ನಡುವಿನ ಕೊಂಡಿಯಂತೆ ಇರುವ ಇದು ಕುರುಕ್ಷೇತ್ರ ಯುದ್ಧದ ನಂತರ ವಿಧುರ ತನ್ನ ಪಾಪ ಕಳೆದುಕೊಳ್ಳಲು ದಂಡಕಾರಣ್ಯದ ಉತ್ತರ ಪಿನಾಕಿನಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಕೈಗೆ ಅಶ್ವತ್ಥ ವೃಕ್ಷದ ಕೊಂಬೆ ಸಿಗುತ್ತದೆ. ನಂತರ ಮೈತ್ರೇಯಿ ಋಷಿಯ ಸಲಹೆಯಂತೆ ವಿದುರಾಶ್ವತ್ಥ ಪುಣ್ಯ ಕ್ಷೇತ್ರಕ್ಕೆ ಬಂದು ಅಲ್ಲಿ ನೆಟ್ಟು ಬೆಳೆಸುತ್ತಾರೆ. ನಂತರದ ದಿನಗಳಲ್ಲಿ ಅದು ಬೃಹತ್ ಅಶ್ವತ್ಥ ವೃಕ್ಷವಾಗಿ ಬೆಳೆಯಿತು ಎಂಬ ಐತಿಹ್ಯವಿದೆ. ವಿದುರಾಶ್ವತ್ಥಕ್ಕೆ ಬರುವ ಭಕ್ತಾದಿಗಳು ಮದುವೆ, ಸಂತಾನ, ಗ್ರಹಚಾರ, ನಾಗದೋಷಗಳನ್ನು ಪರಿಹರಿಸಿಕೊಳ್ಳಲು ಹರಕೆಯನ್ನು ಸಲ್ಲಿಸುತ್ತಾರೆ.
1938ರ ಏಪ್ರಿಲ್ 11ರಂದು ಧ್ವಜ ಸತ್ಯಾಗ್ರಹ ಮಾಡುತ್ತಿದ್ದ ದೇಶಭಕ್ತರ ಮೇಲೆ ಬ್ರಿಟಿಷರು ಗುಂಡು ಹಾರಿಸಿದ್ದರಿಂದ ಸುಮಾರು 10ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಇದರ ಹಿನ್ನೆಲೆಯಲ್ಲಿ ಇಲ್ಲಿ ಸ್ವಾತಂತ್ರ್ಯ ಸ್ಮಾರಕ ಉದ್ಯಾನವನ, ವೀರಸೌಧ, ಯಾತ್ರಿ ನಿವಾಸ ನಿರ್ಮಿಸಲಾಗಿದ್ದು, ಇದೊಂದು ಪ್ರವಾಸೋದ್ಯಮ ತಾಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

