ಕೋಲಾರ

'ಯುವಕರು ರಕ್ತದಾನಕ್ಕೆ ಮುಂದಾಗಲಿ'

Published On :

ಮಾಲೂರು: ರಕ್ತದಾನದಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡುವಂತೆ ಪ್ರೇರೇರಿಸುವ ಜವಾಬ್ದಾರಿ ಪೋಷಕರು- ಶಿಕ್ಷಕರ ಮೇಲಿದೆ ಎಂದು ಪ್ರಾಂಶುಪಾಲ ಡಾ. ಚಂದ್ರಶೇಖರ್ ನಂಗಲಿ ಹೇಳಿದರು.
ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಇಲಾಖೆ,ನರಸಿಂಹರಾಜ ರಕ್ತದಾನ ಕೇಂದ್ರ ಸಹಕಾರದಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, 30- 40 ವರ್ಷದ ನಂತರ ಮನುಷ್ಯನ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಅಧಿಕ. ವಿದ್ಯಾರ್ಥಿ ಜೀವನದಲ್ಲಿರುವ ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ಅನುರಾಧ ಮಾತನಾಡಿ, ಪ್ರತಿ ಆರೋಗ್ಯವಂತ ಮನುಷ್ಯ ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡಬಹುದಾಗಿದ್ದು, ಇತರರ ಜೀವ ಉಳಿಸಲು ಸಲುವಾಗಿ ರಕ್ತದಾನದಲ್ಲಿ ಭಾಗವಹಿಸಿ ಜೀವನ ಸಾರ್ಥಕತೆ ಪಡೆಯಕೊಳ್ಳಬೇಕು ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ, ಡಾ.ಮೀನಾಕ್ಷಿ, ಡಾ.ದಿವ್ಯಾ, ಡಾ. ಮಹೇಂದ್ರ ಪ್ರಸಾದ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ರಾಜ್ ಕುಮಾರ್, ಧನಂಜಯ, ಗೋವಿಂದು, ನಂದೀಶ್, ಸುಬ್ರಮಣಿ, ಉಪಾನ್ಯಾಸಕ ರಾದ ಜಯರಾಂ ರೆಡ್ಡಿ, ವಿಶ್ವೇಶ್ವರಯ್ಯ, ಪ್ರೊ. ಶಿವಮೂರ್ತಿ, ಅನಂತ್ ಮೂರ್ತಿ, ಡಾ.ಮುನಿನಾರಾಯಣಪ್ಪ ಇದ್ದರು.
92 ಬಾಟಲಿ ರಕ್ತ ಸಂಗ್ರಹ: ಬೆಳಗ್ಗೆಯಿಂದ ಸಂಜೆವರೆಗೆ ನಡೆದ ರಕ್ತದಾನ ಶಿಬಿರದಲ್ಲಿ ಕಾಲೇಜಿನ 92 ವಿದ್ಯಾರ್ಥಿಗಳು ಭಾಗವಹಿಸಿದ್ದರು. 92 ಬಾಟಲ್ ರಕ್ತ ಸಂಗ್ರಹವಾಗಿದೆ ಎಂದು ಆರೋಗ್ಯ ಇಲಾಖೆಯ ಗೋವಿಂದು ತಿಳಿಸಿದ್ದಾರೆ.
ರಕ್ತದಾನದಲ್ಲಿ ಭಾಗವಹಿಸಿದ್ದ ಪ್ರತಿ ವಿದ್ಯಾರ್ಥಿಗಳಿಗೂ ಶಾಸಕ ಮಂಜುನಾಥ್‌ಗೌಡ ಅವರು ಹಣ್ಣು ಹಾಗೂ ತಂಪಾದ ಪಾನೀಯ ನೀಡುವ ವ್ಯವಸ್ಥೆ ಮಾಡಿದ್ದರಲ್ಲದೆ ರಕ್ತದಾನ ನೀಡಿದ ವಿದ್ಯಾರ್ಥಿಗಳನ್ನು ಪ್ರಶಂಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.