ಕೋಲಾರ

ಕಾಲುಬಾಯಿ ಜ್ವರ: ಹಸು ಸಾವು, ರೈತರ ಆತಂಕ

Published On :

ಗೌರಿಬಿದನೂರು: ತಾಲೂಕಿನಾದ್ಯಂತ ಹರಡುತ್ತಿರುವ ಕಾಲುಬಾಯಿ ಜ್ವರದಿಂದ ಹತ್ತಾರು ಹಸುಗಳು ಮೃತಪಡುತ್ತಿರುವ ಘಟನೆಗಳು ನಡೆದಿವೆ.
ಪ್ರಮುಖವಾಗಿ ಕಾಲುಬಾಯಿ ಜ್ವರಕ್ಕೆ ಆರು ತಿಂಗಳಿಗೊಮ್ಮೆ ಚುಚ್ಚುಮದ್ದನ್ನು ಹಾಕಿಸಬೇಕು, ಚುಚ್ಚುಮದ್ದು ಹಾಕಿದ ಎರಡು ಆಥವಾ ಮೂರು ದಿನ ಹಸುಗಳು ಹಾಲನ್ನು ಕಡಿಮೆ ನೀಡುತ್ತದೆ ಅಲ್ಲದೆ ಸ್ವಲ್ಪ ಜ್ವರದಿಂದ ಬಳಲುತ್ತದೆ. ಈ ಕಾರಣಕ್ಕಾಗಿ ರೈತರು ತಮ್ಮ ಹಸುಗಳಿಗೆ ಕಾಲು ಬಾಯಿ ಜ್ವರ ಚುಚ್ಚುಮದ್ದು ಹಾಕಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪಶುಸಂಗೋಪನಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಡಾ. ಪ್ರಕಾಶ್ ತಿಳಿಸಿದರು. 3 ವರ್ಷಗಳಿಗೊಮ್ಮೆ ಮರುಕಳಿಸುತ್ತಿರುವ ಈ ವ್ಯಾಧಿ ಸೂಕ್ಷ್ಣ ಜೀವಿಗಳಿಂದ (ವೈರಸ್) ಹಸುಗಳನ್ನು ರಕ್ಷಿಸಲು ವಿವಿಧ ಚುಚ್ಚುಮದ್ದುಗಳನ್ನು ಕಂಡು ಹಿಡಿಯಬೇಕಾಗಿದೆ ಎಂದು ಅವರು ತಿಳಿಸಿದರು.
3 ತಿಂಗಳ ಸಣ್ಣ ಕರುಗಳಿಂದ ಹಿಡಿದು ದೊಡ್ಡ ಹಸುಗಳವರೆಗೆ ಈ ಕಾಯಿಲೆ ಬರುವ ಸಾಧ್ಯತೆ ಇದೆ. ತಾಲೂಕಿನ ಡಿ.ಪಾಳ್ಯ ಹೋಬಳಿಯಲ್ಲಿ ಇವರೆಗೂ 54 ಹಸುಗಳಿಗೆ ಈ ಕಾಯಿಲೆ ಕಂಡುಬಂದಿದ್ದು, 10 ಹಸುಗಳು ಮೃತಪಟ್ಟಿವೆ ಎಂದು ತಿಳಿಸಿದರು.  ಚುಚ್ಚುಮದ್ದು ಹಾಕಿಸಿರುವ ಹಸುಗಳಿಗೆ ಈ ವ್ಯಾಧಿ ಸೋಕಿಲ್ಲ, ಈ ರೋಗ ಬಂದ ನಂತರ ಚುಚ್ಚು ಮದ್ದು ಹಾಕಿಸಿದರೂ ಪ್ರಯೋಜನವಿಲ್ಲ ಎಂದು ಅವರು ತಿಳಿಸಿದರು. ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ತಪ್ಪದೆ ಕಾಲು ಬಾಯಿ ಜ್ವರದ ಚುಚ್ಚುಮದ್ದನ್ನು ಹಾಕಿಸಿ ತಮ್ಮ ಹಸುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಕೆಜಿಎಫ್: ಜೀವನದಲ್ಲಿ ಜಿಗುಪ್ಸೆ ಹೊಂದಿದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರ್‌ಡಿ ಬ್ಲಾಕ್ ನಿವಾಸಿ ಸ್ವಾಮಿನಾಥನ್ ಎಂಬವರ ಮಗನಾದ ರಿಚರ್ಡ್(52) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ರಿಚರ್ಡ್ ಕಳೆದ 25 ವರ್ಷಗಳ ಹಿಂದೆ ಭಾರತ ಸೇನೆಯಲ್ಲಿ 8 ವರ್ಷ ಸೇವೆ ಸಲ್ಲಿಸಿ ನಂತರ ಅಲ್ಲಿಂದ ಬಂದು ಮತ್ತೆ ಸೇನೆಗೆ ಹೋಗದೆ ಅಂದಿನಿಂದ ಪ್ರತಿದಿನ ಕುಡಿತದ ಚಟವಿಟ್ಟುಕೊಂಡಿದ್ದ. ಆಗಾಗ ಆತನಿಗೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಅದೇ ರೀತಿ ಕಳೆದ ಗುರುವಾರ ಅದೇ ರೀತಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ನೋವು ತಾಳಲಾರದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ತಮ್ಮ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ ಲೋಪ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ
ಮಾಲೂರು: ಪದವಿ ಕಾಲೇಜಿನ ಫಲಿತಾಂಶದಲ್ಲಿ ಲೋಪದೋಷ ಸರಿಪಡಿಸಬೇಕೆಂದು ಅಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟಿಸಿದರು.
ಪಟ್ಟಣದ ಮಾರಿಕಾಂಬ ಮಹಾದ್ವಾರದ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಭರತ್ ಭೂಷಣ್, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಬಾರಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೆ ಗೊಂದಲ ಮೂಡಿಸುವಂತಹ ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದಿದ್ದ ಹಲವು ವಿದ್ಯಾರ್ಥಿಗಳು ಫಲಿತಾಂಶ ಶೂನ್ಯ ಎಂದು ಬಂದಿದ್ದು, ಕೆಲವರಿಗೆ ಫಲಿತಾಂಶವೇ ಬಂದಿಲ್ಲ. ಈ ರೀತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಎಬಿವಿಪಿ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.