ಕೋಲಾರ

ಸಹಜ ಸ್ಥಿತಿಯತ್ತ ಡಿ.ಪಾಳ್ಯ ಶಾಲೆ

Published On :

ಕ.ಪ್ರ.ವಾರ್ತೆ ಗೌರಿಬಿದನೂರು ಸೆ.20
ಬಿಸಿಯೂಟದ ಸಾಂಬಾರ್ ಪಾತ್ರೆಗೆ ಬಿದ್ದು ಸಾವನ್ನಪ್ಪಿದ್ದ ಘಟನೆಯಿಂದ ತಲ್ಲಣಗೊಂಡಿದ್ದ ಡಿ.ಪಾಳ್ಯ ಶಾಲೆಯ ವಾತಾವರಣ 2ನೇ ದಿನವಾದ ಶುಕ್ರವಾರ ಸಹಜ ಸ್ಥಿತಿಯತ್ತ ಸಾಗಿದೆ.
ಗುರುವಾರ ಕೇವಲ 20 ಮಕ್ಕಳ ಹಾಜರಾತಿ ಇದ್ದ ಶಾಲೆಯಲ್ಲಿ ಶುಕ್ರವಾರ 90ರಷ್ಟು ಮಕ್ಕಳು ಶಾಲೆಗೆ ಆಗಮಿಸಿದ್ದರು. 1ನೇ ತರಗತಿಯಿಂದ 8ನೇ ತರಗತಿವರೆಗೆ ಸುಮಾರು 300 ಮಕ್ಕಳಿದ್ದು ಹಿರಿಯ ಪ್ರಾಥಮಿಕ ಶಾಲೆಯ ಹಾಜರಾತಿ 294 ತಲುಪಿದೆ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯಲು ಅವರು ಖುದ್ದು ಹಾಜರಿದ್ದು ಹೈಸ್ಕೂಲ್‌ನಿಂದ ಇಬ್ಬರು ಅಡುಗೆ ಸಿಬ್ಬಂದಿಯನ್ನು ಪಡೆದು ಪ್ರಾಥಮಿಕ ಶಾಲೆಯ ಅಡುಗೆ ಸಾಮಗ್ರಿಗಳೊಂದಿಗೆ ಅಡುಗೆ ತಯಾರಿಸಿ ಮಧ್ಯಾಹ್ನ ಬಿಸಿಯೂಟವನ್ನು ವ್ಯವಸ್ಥೆ ಮಾಡಿದ್ದರು.
ಪ್ರೌಢಶಾಲಾ ಶಿಕ್ಷಕಿ ಪವಿತ್ರ ಅವರು ಮುಖ್ಯೋಪಾಧ್ಯಾಯರ ಮೇಲುಸ್ತುವಾರಿಯನ್ನು ವಹಿಸಿದ್ದರೆ ಪ್ರಭಾರ ಮುಖ್ಯೋಪಾಧ್ಯಾಯರಾಗಿ ರಾಮಕೃಷ್ಣಯ್ಯ ಕಾರ್ಯನಿರ್ವಹಿಸಿದರು. ಒಟ್ಟು 7 ಶಿಕ್ಷಕರು ಕಾರ್ಯನಿರ್ವಹಿಸಿದ್ದು ಶನಿವಾರದಿಂದ ಒಟ್ಟು 10 ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಸಿಆರ್‌ಪಿ ಗೋಪಾಲ್ ಪತ್ರಿಕೆಗೆ ತಿಳಿಸಿದರು.

ಬಾವಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ
ಚಿಂತಾಮಣಿ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೊಬ್ಬ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನಾಯನಹಳ್ಳಿ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ. ಪಟ್ಟಣದ ನಾರಸಿಂಹಪೇಟೆ ನಿವಾಸಿ ರಮೇಶ್(24) ಸಾವಿಗೀಡಾದ ಯುವಕ. ಚಿಂತಾಮಣಿ- ಬಾಗೇಪಲ್ಲಿ ರಸ್ತೆಯ ನಾಯನಹಳ್ಳಿ ಬಳಿ ಇರುವ ಬೊಜ್ಜನ್ನಗಾರಿ ನ್ಯಾತಪ್ಪ ಎಂಬವರಿಗೆ ಸೇರಿದ ಜಮೀನಿನ ಬಾವಿಗೆ ಶುಕ್ರವಾರ ಬೆಳಗ್ಗೆ ಬಿದ್ದು ಆತ್ಯಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾವಿಗೆ ಬಿದ್ದು ಬಾಲಕಿ ಸಾವು
ಚಿಂತಾಮಣಿ: ಪಟ್ಟಣದ ಶಾಂತಿನಗರದ ನಿವಾಸಿ ಅನುಷಾ(14) ಎಂಬ ಬಾಲಕಿ ಅನುಮಾನಾಸ್ಪದವಾಗಿ ರೇಲ್ವೆ ನಿಲ್ದಾಣದ ಬಳಿ ಇರುವ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.  ಮೃತಪಟ್ಟ ಬಾಲಕಿ ಅನುಷಾ ಪಟ್ಟಣದ ಶಾಂತಿನಗರದ 8ನೇ ತರಗತಿಯಲ್ಲಿ ಓದುತ್ತಿರುವುದಾಗಿ ತಿಳಿದುಬಂದಿದೆ. ಬೆಳಗ್ಗೆ ಕುರಿ ಕಾಯುವ ಹುಡುಗನೊಬ್ಬನು ಬಾವಿಯಲ್ಲಿ ಬಿದ್ದ ಶವವನ್ನು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.