ಕೋಲಾರ

'ಸ್ಪರ್ಧೆ ಇದ್ದರೆ ಮಾತ್ರ ಪ್ರಗತಿ ಸಾಧ್ಯ'

Published On :

ಗೌರಿಬಿದನೂರು: ಆಧುನಿಕ ಯುಗದಲ್ಲಿ ಸ್ಪರ್ಧೆ ಇದ್ದರೆ ಮಾತ್ರ ಬೆಳೆಯಲಿಕ್ಕೆ ಸಾಧ್ಯ ಎಂದು ಪ್ರಗತಿ ಗ್ರಾಮೀಣ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ರವಿಕುಮಾರ್ ತಿಳಿಸಿದರು.
ಅವರು ಪಟ್ಟಣದಲ್ಲಿ ನೂತನ ವಾಗಿ ಕಾರ್ಯಾರಂಭವಾದ ಶ್ರೀ ಕನ್ನಿಕಾ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಬ್ಯಾಂಕ್‌ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪಟ್ಟಣದಲ್ಲಿ ಬ್ಯಾಂಕಿಂಗ್ ಸೇವೆಗೆ ಅಡಿಯಿಡುತ್ತಿರುವ ಕನ್ನಿಕಾ ಸೌಹಾರ್ದ ಕೋ ಅಪರೇಟಿವ್ ತಾಲೂಕಿನ ಆರ್ಥಿಕ ವಲಯದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಐ.ಎನ್.ಜಿ. ವೈಶ್ಯ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಶ್ರೀಧರ್ ಮಾತನಾಡಿ ಕನ್ನಿಕಾ ಸೌಹಾರ್ದಕ್ರೆಡಿಟ್ ಬ್ಯಾಂಕಿನ ಪ್ರಾರಂಭದ ದಿನವೇ ಬ್ಯಾಂಕಿಗೆ ಗ್ರಾಹಕರು ಐದು ಲಕ್ಷ ರು.ಗಳನ್ನು ಠೇವಣಿ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಕನ್ನಿಕಾ ಸೌಹಾರ್ದ ಕ್ರೆಡಿಟ್ ಕೋಅಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ರಮೇಶ್‌ಬಾಬು ಮಾತನಾಡಿ ಸಹಕಾರಿ ಎಂಬ ಪರಿಕಲ್ಪನೆಗೆ ಒಂದು ಶತಮಾನದ ಇತಿಹಾಸವಿದೆ. ಅಂತಹ  ಸಹಕಾರಿ ಕ್ಷೇತ್ರದಲ್ಲಿ ನಾವೊಂದು ದಿಟ್ಟ ಹೆಜ್ಜೆ ಇಡುತ್ತಿದ್ದೇವೆ. ನಮ್ಮ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರುಗಳೆಲ್ಲ, ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿದವರಾಗಿದ್ದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ಒಂದು ವಿನೂತನ ಯೋಜನೆ ಉದ್ಘಾಟಿಸಲಾಯಿತು. ಗುಡಿಬಂಡೆ ತಾಲೂಕಿನ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ನಾಗರಾಜ್, ತಾಲೂಕು ಆರ್ಯ ವೈಶ್ಯ ಮಂಡಳಿ ಕಾರ್ಯದರ್ಶಿ ಕಾಪರ್ತಿ ಸೂರ್ಯನಾರಾಯಣಶೆಟ್ಟಿ ಉಪಸ್ಥಿತರಿದ್ದರು. ಉಮಾ ಪ್ರಸನ್ನ ಪ್ರಾರ್ಥಿಸಿದರು. ಸೌಮ್ಯ, ಗೀತಾ ಸ್ವಾಗತಿಸಿದರು. ಬ್ಯಾಂಕಿನ ಉಪಾಧ್ಯಕ್ಷಎನ್.ವಿ. ಶ್ರೀಧರ್ ವಂದಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಧಿಕಾರಿಗಳ ವಿರುದ್ಧ ದೂರು
ಕೋಲಾರ: ಕೆರೆಗಳ ಒತ್ತುವರಿ, ಅಕ್ರಮವಾಗಿ ಮರಳು ಸಾಗಾಣೆ, ಕಾಲು ಬಾಯಿ ರೋಗ, ನಕಲಿ ಗೊಬ್ಬರ ಮತ್ತು ಕೀಟ ನಾಶಕ ಔಷಧಿಗಳ ಮಾರಾಟ ತಡೆಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ವಿಫಲರಾಗಿದ್ದಾರೆಂದು ರೈತ ಸಂಘದ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ದೂರು ನೀಡಿದರು.
ಗುರುವಾರ ರಾತ್ರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ನಂತರ ರೈತ ಸಂಘದ ಮುಖಂಡರು ಸಚಿವರಿಗೆ ಮನವಿ ಸಲ್ಲಿಸಿ ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕೋಲಾರಮ್ಮ ಕರೆಯಲ್ಲಿ ಅನಧಿಕೃತವಾಗಿ ಕಟ್ಟಡಗಳು ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದ ರೈತ ಮುಖಂಡರಿಗೆ ಸಚಿವರು ಭರವಸೆ ನೀಡಿ, ಹಂತ ಹಂತವಾಗಿ ಸಮಸ್ಯೆಗಳನ್ನು ನಿವಾರಣೆ ಮಾಡಿ ಉತ್ತಮ ಆಡಳಿತಕ್ಕೆ ಭದ್ರ ಬುನಾದಿ ಹಾಕುವುದಾಗಿ ಭರವಸೆ ನೀಡಿದರು. ರೈತ ಸಂಘದ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ಹಸಿರುಸೇನೆ ಅಧ್ಯಕ್ಷ ತೆರನಹಳ್ಳಿ ವೆಂಕಟೇಶಗೌಡ, ಹೂಹಳ್ಳಿ ನಾಗರಾಜ್, ತೆರನಹಳ್ಳಿ ಆಂಜಿನಪ್ಪ, ರಾಜೇಶ್, ಕೆಂಬೋಡಿ ಕೃಷ್ಣೆಗೌಡ, ಇಕಂಬಳ್ಳಿ ಮಂಜುನಾಥ್, ಮೂರಂಡಹಳ್ಳಿ ಶಿವಾರೆಡ್ಡಿ, ನರಸಾಪುರ ಪುರುಷೋತ್ತಮ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.