ಕೋಲಾರ

ಆರೋಗ್ಯವಂತ ಜನರಿಂದ ದೇಶ ಅಭಿವೃದ್ಧಿ: ಡಾ. ಸುಧಾಕರ್

Published On :

ಗೌರಿಬಿದನೂರು: ಮನುಷ್ಯನಿಗೆ ಆರೋಗ್ಯ ಅತಿ ಮುಖ್ಯವಾದದ್ದು, ದೇಶದ ಅಭಿವೃದ್ಧಿ ಆ ದೇಶದ ಆರೋಗ್ಯವಂತ ಪ್ರಜೆಗಳ ಮೇಲೆ ನಿಂತಿದೆ ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಆರೋಗ್ಯವಂತರಾಗಿ ಎಂದು ಶಾಸಕ ಡಾ. ಕೆ. ಸುಧಾಕರ್ ತಿಳಿಸಿದರು.
ಮಂಚೇನಹಳ್ಳಿಯಲ್ಲಿ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಹಾಗೂ ಕಿಮ್ಸ್ ಸಹಯೋಗದೊಂದಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ನಿರಂತರವಾಗಿ ಸಮಾಜಮುಖಿ ಸಮಾಜಸೇವೆ ಮಾಡುತ್ತಿದ್ದು, ನಿರಂತವಾಗಿ 3ನೇ ವರ್ಷದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ್ದು, ನಾಗರಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.  ರಾಜ್ಯ ಸರ್ಕಾರದ ಜಲಸಂಪಲ್ಮೂಲ ಇಲಾಖೆಯ ಹಿರಿಯ ಪ್ರಧಾನ ಕಾರ್ಯದರ್ಶಿ ಡಾ. ಡಿ.ಸತ್ಯಮೂರ್ತಿ ಮಾತನಾಡಿ, ಆರೋಗ್ಯವನ್ನು ಮಾರುಕಟ್ಟೆಯಲ್ಲಿ ಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅನಾರೋಗ್ಯಕ್ಕೆ ಒಳಗಾಗದಂತೆ ಜಾಗೃತಿ ವಹಿಸಿ. ಸರ್ ಎಂ. ವಿಶೇಶ್ವರಯ್ಯ ಜನಿಸಿದ್ದ ಪ್ರಸಿದ್ಧ ಜಿಲ್ಲೆ ಮಳೆ ಕೊರತೆಯಿಂದ ಹಲವು ವರ್ಷದಿಂದ ನೀರಿನ ಕೊರತೆ ಕಾಡುತ್ತಿದೆ. ಜಿಲ್ಲೆಯ ಜನರ ಕನಸಾಗಿರುವ ಎತ್ತಿನಹೊಳೆ ಹಾಗೂ ಪರಮಶಿವಯ್ಯ ವರದಿ ಜಾರಿಗೆ ಬರಲು ಸರ್ಕಾರದ ತೀರ್ಮಾನಿಸಿದ ನಂತರ ಇಲಾಖೆಯಿಂದ ಯೋಜನೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಈಡೇರಲಿ. ಜಿಲ್ಲೆಯಲ್ಲಿ ಜನತೆ ವಿಶ್ವೇಶ್ವರಯ್ಯನವರ  ಗುಣ ಆದರ್ಶ, ಶಿಸ್ತನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲಿ ಎಂದರು.
ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ  ಕೃಷ್ಣಪ್ಪ, ಮುಖಂಡ ಜಯರಾಂ, ಪ್ರಾಂಶುಪಾಲ ಎಸ್. ನಂಜುಂಡ, ತಾಪಂ ಸದಸ್ಯ ಎಂ.ನಾರಾಯಣಸ್ವಾಮಿ ಗ್ರಾಪಂ ಅಧ್ಯಕ್ಷರಾದ ಶ್ರೀರಂಗಪ್ಪ ಹಾಗೂ ಜರಬಂಡಹಳ್ಳಿ ಗ್ರಾ ಪಂ ಅಧ್ಯಕ್ಷೆ ಗಂಗಮ್ಮ, ಯುವ ಕಾಂಗ್ರೆಸ್ ಮುಖಂಡ ರಿಯಾಜ್ ಪಾಷ, ಮುಖಂಡರಾದ ಪಿ.ಎನ್. ಪ್ರಕಾಶ್, ಎ.ಬಾಲಕೃಷ್ಣ, ಅಪ್ಪಿಗೌಡ, ವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ನರಸಮ್ಮಸತ್ಯ ನಾರಾಯಣಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್, ಈಶ್ವರ್, ಅಬುಬಕರ್, ಎಂ.ಜಿ ಶ್ರೀರಂಗಮೂರ್ತಿ, ನರಸಿಂಹರೆಡ್ಡಿ, ಮಂಜು, ನೌಷಾದ್‌ಖಾನ್, ನರಸಿಂಹ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.