'ಆರೋಗ್ಯದೆಡೆಗೆ ಗಮನವಿರಲಿ'
ಮಾಲೂರು: ಸಮಾಜದ ಕೊಳಕನ್ನು ಶುಚಿಗೊಳಿಸಿ ಪರಿಸರದ ಆರೋಗ್ಯ ಕಾಪಾಡುವ ನೀವು ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯಕಡೆ ಗಮನ ನೀಡದಿರುವುದು ಶೋಚನೀಯ ಎಂದು ಪುರಸಭೆ ಮುಖ್ಯಾಧಿಕಾರಿ ರೇಣುಕಾ ಹೇಳಿದರು.
ಪುರಸಭೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ರಾಜ್ಯ ಪೌರ ಸೇವಾ ನೌಕರರ ದಿನಾಚರಣೆಯಲ್ಲಿ ಪೌರಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.
ಸಮಾಜದಲ್ಲಿ ಯಾರೋ ಮಾಡದ ಶುಚಿತ್ವದ ಕೆಲಸವನ್ನು ಪೌರಕಾರ್ಮಿಕರು ನಿರ್ವಹಿಸುತ್ತಿದ್ದು, ಅವರ ಬಗ್ಗೆ ಸಮಾಜವು ಮಾನವೀಯತೆ ದೃಷ್ಟಿಯಿಂದ ನೋಡಬೇಕಾಗಿದೆ. ಅವರ ದಿನ ಪ್ರತಿ ಕಾರ್ಯಚರಣೆಯಿಂದ ಪಟ್ಟಣದಲ್ಲಿ ಉತ್ತಮ ಜೀವನ ನೆಡಸಲು ಸಾಧ್ಯವಾಗಿದೆ ಎಂದರು.
ಕುಡಿತದ ಚಟ ಬಿಡಿ: ಪೌರ ಕಾರ್ಮಿಕ ಕುಟುಂಬವನ್ನು ಹಾಳುಗೆಡುವ ಕುಡಿತ ಚಟವನ್ನು ತಪ್ಪದೇ ಬಿಡಿ ಎಂದು ಮನವಿ ಮಾಡಿದ ಮುಖ್ಯಾಧಿಕಾರಿ ರೇಣುಕಾ, ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಇಲ್ಲಿನ 17 ಜನ ಪೌರಕಾರ್ಮಿಕರಿಗೆ ತಲಾ ಎರಡು ಸಾವಿರ ರು.ಗಳನ್ನು ನೀಡಲಾಗುವುದು ಎಂದರು.
ಜಿಲ್ಲಾ ಕಾರ್ಯದರ್ಶಿ ರವಿ, ಅಭಿಯಂತರೆ ಭಾನುಮತಿ, ಆರೋಗ್ಯಾಧಿಕಾರಿ ಉದಯ್, ಕಂದಾಯ ಅಧಿಕಾರಿ ಜಯದೇವ್, ಸಂಘದ ಕಾರ್ಯದರ್ಶಿ ರಮೇಶ್ ಮಾತನಾಡಿದರು. ಹಿರಿಯ ಪೌರಕಾರ್ಮಿಕರಾದ ನಾರಾಯಣಸ್ವಾಮಿ, ವೆಂಕಟಮ್ಮ ರವರನ್ನು ಸನ್ಮಾನಿಸಲಾಯಿತು. ಪೌರಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಕರಿಯಾಗುವಂತಹ ಪುಸ್ತಕ-ಬ್ಯಾಗ್ಗಳನ್ನು ವಿತರಿಸಲಾಯಿತು. ಕಂದಾಯ ಅದಿಕಾರಿ ಜ್ಯೋತಿ,ರವಿ,ಸುಶೀಲಮ್ಮ, ರಾಜಣ್ಣ,ವಿನೋದ್,ಭಾರತಿ, ನಂಜುಂಡ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

